ನೀವು ಬಳಸುತ್ತಿರುವ ಜೇನುತುಪ್ಪ ಶುದ್ಧವಾಗಿದೆಯೇ..? ಪರೀಕ್ಷಿಸಲು ಬರುತ್ತಿದೆ ಪ್ರಯೋಗಾಲಯಗಳು!

ಕೋವಿಡ್ ಸಾಂಕ್ರಾಮಿಕ ರೋಗ ಸಾಕಷ್ಟು ಜನರ ವೃತ್ತಿ ಜೀವನ ಬದಲಾಗುವಂತೆ ಮಾಡಿದೆ. ರೋಗದ ಬಳಿಕ ಹಲವರು ಕೃಷಿ ಹಾಗೂ ತೋಟಗಾರಿಕೆಯತ್ತ ಮುಖ ಮಾಡಿದ್ದು, ಜೇನು ಉತ್ಪಾದನೆ ಕೂಡ ಅಭಿವೃದ್ಧಿ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ಸಾಕಷ್ಟು ಜನರ ವೃತ್ತಿ ಜೀವನ ಬದಲಾಗುವಂತೆ ಮಾಡಿದೆ. ರೋಗದ ಬಳಿಕ ಹಲವರು ಕೃಷಿ ಹಾಗೂ ತೋಟಗಾರಿಕೆಯತ್ತ ಮುಖ ಮಾಡಿದ್ದು, ಜೇನು ಉತ್ಪಾದನೆ ಕೂಡ ಅಭಿವೃದ್ಧಿ ಕಂಡಿದೆ.

ಗ್ರಾಹಕರಲ್ಲಿ ಜೇನಿನ ಬೇಡಿಕೆ ಹೆಚ್ಚಾಗಿರುವುದರಿಂದ ರೈತರು ತಮ್ಮ ಲಾಭವನ್ನು ದ್ವಿಗುಣಗೊಳಿಸಲು ಜೇನುಸಾಕಣೆಯ ವೃತ್ತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿದ್ದಾರೆ. ರಾಜ್ಯದಲ್ಲಿ ಮತ್ತು ವಿಶೇಷವಾಗಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೇನು ಉತ್ಪಾದನೆಯು ಹೆಚ್ಚಾಗಿದ್ದರೂ, ಉತ್ತಮ ಗುಣಮಟ್ಟದ ಜೇನುತುಪ್ಪದ ಬಗ್ಗೆ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ.

ಹೀಗಾಗಿ ಜನರ ಆತಂಕವನ್ನು ದೂರಾಗಿಸಲು ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್- ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹಾರ್ಟಿಕಲ್ಚರ್ ರಿಸರ್ಚ್ (ಐಸಿಎಆರ್-ಐಐಎಸ್ಆರ್) ಬೆಂಗಳೂರು ಮತ್ತು ತುಮಕೂರಿನಲ್ಲಿ ಎರಡು ಜೇನು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುತ್ತಿದೆ.

ಈ ಪ್ರಯೋಗಾಲಯಗಳು ಜೇನುತುಪ್ಪದ ಶುದ್ಧತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ರೈತರಿಗೆ ಮತ್ತು ಗ್ರಾಹಕರಿಗೆ ಸಹಾಯ ಮಾಡುತ್ತದೆ ಎಂದು ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.

ಈ ಪ್ರಯೋಗಾಲಯಗಳು ರೈತರಿಗೆ ಪ್ರಯೋಜನವನ್ನು ನೀಡುತ್ತವೆ ಮತ್ತು ಗುಣಮಟ್ಟದ ಪ್ರಮಾಣಪತ್ರಗಳೊಂದಿಗೆ ಉತ್ತಮ ವ್ಯವಹಾರಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಲ್ಯಾಬ್‌ಗಳಿಗೆ ರಾಷ್ಟ್ರೀಯ ಜೇನು ಮಂಡಳಿಯ ಬೆಂಬಲ ದೊರೆತಿದೆ ಎಂದು ತಿಳಿಸಿದ್ದಾರೆ.

ಐಸಿಎಆರ್-ಐಐಎಚ್‌ಆರ್‌ನ ನಿರ್ದೇಶಕ ಡಾ ಎಸ್‌ಕೆ ಸಿಂಗ್ ಅವರು ಮಾತನಾಡಿ, ಅಣಬೆಗಳಂತೆ ಜೇನುತುಪ್ಪ ವ್ಯವಹಾರಗಳು ತಲೆ ಎತ್ತುತ್ತಿವೆ. ಸಾವಯವ ಮತ್ತು ಜೇನುತುಪ್ಪಕ್ಕೆ ದೊಡ್ಡ ಮಾರುಕಟ್ಟೆ ಇದ್ದು ಅದು ಪ್ರಾಮುಖ್ಯತೆ ಪಡೆಯುತ್ತಿದೆ ಎಂದು ಹೇಳಿದ್ದಾರೆ.

ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ರೈತರು ಜೇನುಸಾಕಣೆ ಮಾಡುತ್ತಿರುವುದು ಶೇ.20-30ರಷ್ಟು ಹೆಚ್ಚಳವಾಗಿದೆ. ವ್ಯವಹಾರವನ್ನು ಹೆಚ್ಚು ಕಾರ್ಯಸಾಧ್ಯವಾಗುವಂತೆ ಮಾಡಲು, ಕಾಡುಗಳ ಬದಲಿಗೆ ಸ್ಥಳೀಯ ಜೇನುನೊಣ ಜಾತಿಗಳನ್ನು ಸಾಕುತ್ತಿದ್ದಾರೆಂದು ತಿಳಿಸಿದ್ದಾರೆ.

ಜೇನುತುಪ್ಪ ಮಾರಾಟಕ್ಕಾಗಿ ರೈತರು ಸಂಸ್ಥೆಗಳು, ಮಳಿಗೆಗಳೊಂದಿಗೆ ನೇರವಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಮೊನೊಫ್ಲೋರಲ್ (ಒಂದು ರೀತಿಯ ಸಸ್ಯದ ಹೂವುಗಳಿಂದ ಸಂಗ್ರಹಿಸಿದ ಜೇನುತುಪ್ಪ) ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಸುಂದರ್‌ಬನ್ಸ್‌ ಮತ್ತು ಅರಕು ಕಣಿವೆಯ ಜೇನು ಖರೀದಿಗೆ ಬೇಡಿಕೆ ಹೆಚ್ಚಾಗಿದೆ. ಮೊನೊಫ್ಲೋರಲ್ ಜೇನುತುಪ್ಪ ದುಬಾರಿಯಾಗಿದ್ದು, ಇದನ್ನು ಸೀಮಿತಿ ಪ್ರಮಾಣದಲ್ಲಿ ಮಾತ್ರ ಪಡೆಯಬಹುದಾಗಿದೆ. ಆದರೆ, ಇದರ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಗುಣಮುಟ್ಟದ ಪ್ರಮಾಣೀಕರಣ ಅತ್ಯಗತ್ಯವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

“ಸಾಮಾನ್ಯರಿಗೆ ಶುದ್ಧ ಮತ್ತು ಕಲಬೆರಕೆ ಜೇನುತುಪ್ಪದ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟಕರವಾಗಿರುತ್ತದೆ. ಬಣ್ಣವು ಜೇನುತುಪ್ಪದ ಶುದ್ಧತೆಯನ್ನು ನೀಡುತ್ತದೆ ಎಂಬುದು ಪುರಾಣ. ಗಾಢ ಬಣ್ಣದ ಜೇನು ಸಾಮಾನ್ಯವಾಗಿ ಮೊನೊಫ್ಲೋರಲ್ ಆಗಿರುತ್ತದೆ. ಜೇನುತುಪ್ಪದ ಗಟ್ಟಿಯಾಗುವುದು ಕಳಪೆ ಗುಣಮಟ್ಟದ ಸೂಚನೆಯಾಗಿದೆ ಎಂದು ಕೆಲವರು ನಂಬುತ್ತಾರೆ, ಇದು ಸುಳ್ಳು. ಋತುಗಳು ಮತ್ತು ಹೂವಿನ ಕಾರಣದಿಂದಲೂ ಜೇನು ಗಟ್ಟಿಯಾಗುತ್ತದೆ. ಶೀತ ಗುಡ್ಡಗಾಡು ಪ್ರದೇಶಗಳಲ್ಲಿ ಇದನ್ನು ಗಮನಿಸಬಹುದು. ಜೇನುತುಪ್ಪದಲ್ಲಿ ಸಕ್ಕರೆಯ ಪ್ರಕರಣಗಳು ಹೆಚ್ಚಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಯೋಗಾಲಯಗಳನ್ನು ಆರಂಭಿಸುವುದಕ್ಕೂ ಮುನ್ನ ವಿಜ್ಞಾನಿಗಳು  ಜೇನುತುಪ್ಪದಲ್ಲಿ ಸೇರಿಸಬಹುದಾದ ಎಲ್ಲಾ ಪದಾರ್ಥಗಳ ಕುರಿತು ಪರಿಶೀಲನೆ ನಡೆಸಿದ್ದು, ಇದರಿಂದ ಪರೀಕ್ಷಾ ಫಲಿತಾಂಶಗಳು ವೇಗವಾಗಿ ಹಾಗೂ ನಿಖರವಾಗಿ ಕಂಡು ಹಿಡಿಯಲು ಸಹಕಾರಿಯಾಗುತ್ತದೆ ಎಂದು ಐಸಿಎಆರ್-ಐಐಎಸ್ಆರ್ ಅಧಿಕಾರಿಗಳು ಹೇಳಿದ್ದಾರೆ.

“ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಪ್ರದೇಶಗಳ ಹವಾಮಾನವು ಜೇನುಸಾಕಣೆಗೆ ಸೂಕ್ತವಾಗಿದೆ, ಇದು ರೈತರನ್ನು ಆಕರ್ಷಿಸುತ್ತದೆ. ಕೊಡಗು ಪ್ರದೇಶವು ಜೇನುತುಪ್ಪಕ್ಕೆ ಹೆಸರುವಾಸಿಯಾಗಿದ್ದರೂ, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರಿನ ಹೊರವಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೇನು ಉತ್ಪಾದನೆ ಹೆಚ್ಚಾಗಿದೆ ಎಂದು ಐಐಎಚ್‌ಆರ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com