ಕೊಡವ ಸಂಸ್ಕೃತಿಯ ಕೊಂಡಿ, ಒಗ್ಗಟ್ಟಿನ ಸಂಕೇತ 'ಮಂಧ್'!

ಯಾವುದೇ ಒಂದು ಭೂಮಿ ಅದರ ಮೇಲೆ ವಾಸಿಸುವ ಜನರ ಸಂಸ್ಕೃತಿಯನ್ನು ನಿರೂಪಿಸುತ್ತದೆ. ಅಂತೆಯೇ, 'ಮಂಧ್', ಮಂಧ್ ಮಾನಿ' ಇದು ಕೊಡಗಿನ ಹಳ್ಳಿಗಳಲ್ಲಿ ಕಂಡುಬರುವ ಸಣ್ಣ ಭೂಮಿಯಾಗಿದೆ, ಕೊಡವ ಜನರ ಗುರುತು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜೀವನ ವಿಧಾನವನ್ನು ಹೇಳುತ್ತದೆ.
ಮಂಧ್ ನಲ್ಲಿ ಕೊಡವರ ಆಚರಣೆ
ಮಂಧ್ ನಲ್ಲಿ ಕೊಡವರ ಆಚರಣೆ

ಮಡಿಕೇರಿ: ಯಾವುದೇ ಒಂದು ಭೂಮಿ ಅದರ ಮೇಲೆ ವಾಸಿಸುವ ಜನರ ಸಂಸ್ಕೃತಿಯನ್ನು ನಿರೂಪಿಸುತ್ತದೆ. ಅಂತೆಯೇ, 'ಮಂಧ್', 'ಮಂಧ್ ಮಾನಿ' ಇದು ಕೊಡಗಿನ ಹಳ್ಳಿಗಳಲ್ಲಿ ಕಂಡುಬರುವ ಸಣ್ಣ ಭೂಮಿಯಾಗಿದೆ, ಇದು ಕೊಡವ ಜನರ ಗುರುತು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜೀವನ ವಿಧಾನವನ್ನು ಹೇಳುತ್ತದೆ.

ಕೊಡಗಿನ ಹಲವಾರು ಪ್ರದೇಶಗಳಲ್ಲಿ ಈ ಭೂಮಿಗೆ ಪವಿತ್ರ ಸ್ಥಾನಮಾನ ನೀಡಲಾಗಿದೆ, ಕೊಡವರ ಹಬ್ಬಗಳ ಸಮಯದಲ್ಲಿ ರೋಮಾಂಚಕ ಸಂಸ್ಕೃತಿಯೊಂದಿಗೆ ಮಂಧ್ ಗಳು ಜೀವಂತವಾಗಿರುತ್ತವೆ. ಪುರಾತನವಾದ ಮರಗಳು ಮತ್ತು ಪ್ರಶಾಂತವಾದ ಪರ್ವತ ಶಿಖರಗಳಿಂದ ಸುತ್ತುವರಿದ ಸಮೃದ್ಧ ಹಸಿರು ಮತ್ತು ಸಾಂಪ್ರದಾಯಿಕ ಡ್ರಮ್‌ಗಳ ಲಯಬದ್ಧ ಶಬ್ದಗಳಿಗೆ ತಕ್ಕಂತೆ ಜನರು ನೃತ್ಯ ಮಾಡುತ್ತಾರೆ. ಇದು ಕೊಡಗಿನ  ಮಂಧ್ ಪ್ರದೇಶಗಳಲ್ಲಿ ಪುತ್ತರಿ ಸುಗ್ಗಿಯ ಹಬ್ಬದ ನಂತರ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ.

ದಾಖಲೆಗಳು ಮಂಧ್ ಅನ್ನು ಪೈಸಾರಿ ಭೂಮಿ ಎಂದು ಉಲ್ಲೇಖಿಸಿವೆ, ಆದರೆ ಕೊಡವರಿಗೆ ಅದು ಕೇವಲ ಒಂದು ತುಂಡು ಭೂಮಿಯಲ್ಲ, ಅದಕ್ಕಿಂತ ಹೆಚ್ಚಿನದ್ದಾಗಿದೆ, ಮಂಧ್ ಗಳು ಕೊಡವ ಸಮುದಾಯದ ಸಂಪ್ರದಾಯಗಳನ್ನು ಸಂರಕ್ಷಿಸುವ ಸಾಂಸ್ಕೃತಿಕ ಕೇಂದ್ರಗಳಾಗಿವೆ.

ಕೊಡವ ಸಮುದಾಯದ ಸಾಂಸ್ಕೃತಿಕ ಕೇಂದ್ರಗಳು ಎಂದು  ಮಂಧ್ ಗಳನ್ನು ಕರೆಯಲಾಗುತ್ತದೆ. ವರ್ಷದಲ್ಲಿ 2 ಬಾರಿ ಇಲ್ಲಿ  ಸಂಪ್ರದಾಯದಂತೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಕೊಡವ ಸಮುದಾಯದ ಜಾನಪದ ನೃತ್ಯ, ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮಂಧ್ ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಮಂಧ್ ಗಳು ಬಹುಪಾಲು ಪವಿತ್ರ ಸ್ಥಳಗಳಾಗಿವೆ.  ಕೈಲ್ಪೊಡ್ ಮತ್ತು ಪುತ್ತರಿ ಹಬ್ಬದ ಸಮಯದಲ್ಲಿ ಅವು ಚಟುವಟಿಕೆಯಿಂದ ಸಡಗರದಿಂದ ಇರುತ್ತವೆ ಎಂದು ಮಡಿಕೇರಿ ಕೊಡವ ಸಮಾಜದ ಮಾಜಿ ಜಂಟಿ ಕಾರ್ಯದರ್ಶಿ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಮತ್ತು ಮಡಿಕೇರಿ ಆಕಾಶವಾಣಿಯ ಕಲಾವಿದ ಮಾದೇಟಿರ ಬೆಳ್ಳಿಯಪ್ಪ ವಿವರಿಸಿದ್ದಾರೆ. ಅವರು ಕಡಗದಲ್ ಗ್ರಾಮದ ಊರು ಮಂಧ್  (ಗ್ರಾಮಮಂಧ್) ಅಧ್ಯಕ್ಷರೂ ಆಗಿದ್ದಾರೆ.

ಮಂಧ್ ಗಳು ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಪರ್ಕವಾಗಿದೆ. ಅವು ಹಲವು ಸಭಾಂಗಣಗಳ ಪಾತ್ರವನ್ನು ವಹಿಸುತ್ತವ. ಶ್ರೀಮಂತ ಕೊಡವ ಸಂಸ್ಕೃತಿಯನ್ನು  ಉತ್ತೇಜಿಸುತ್ತವೆ ಹೀಗಾಗಿ ಅವುಗಳನ್ನು ಸಂಪಕ್ಷಿಸಬೇಕಾಗಿದೆ. “ಮಂಧ್ ಗಳು ಮಕ್ಕಳಿಗೆ ಸಮುದಾಯದ ಸಂಸ್ಕೃತಿಯನ್ನು ಪರಿಚಯಿಸುವ ಮೊದಲ ಸ್ಥಳಗಳಾಗಿವೆ. ಮಂಧ್ ಗಳು ತರಬೇತಿ ಸ್ಥಳಗಳಿದ್ದಂತೆ ಎಂದು ಮಡಿಕೇರಿ ನಿವಾಸಿ ಕೆ ಶಶಿ ಸೋಮಯ್ಯ ವಿವರಿಸಿದ್ದಾರೆ.

ಪುತ್ತರಿ ನಂತರ ಸಮುದಾಯದವರು ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಾಲ್ಕು ಗೋಡೆಗಳ ಮಧ್ಯೆ ನಡೆಯದೆ ಮಂಧ್ ಗಳಲ್ಲಿ ನಡೆಯುತ್ತವೆ. ಪುತ್ತರಿ ಕೋಲಾಟ ಒಂದು ಜಾನಪದ ನೃತ್ಯವಾಗಿದ್ದು, ಸುಗ್ಗಿಯ ನಂತರ ಇದನ್ನು ಆಯೋಜಿಸಲಾಗುತ್ತದೆ. ಭತ್ತದ ಕೊಯ್ಲು ಮಾಡಿದ ನಂತರ, ಪ್ರತಿ ಹಳ್ಳಿಯು ಮಂಧ್ ಗಳಾದ್ಯಂತ ಪುತ್ತರಿ ಕೋಲಾಟ ಅಥವಾ ಪುತ್ತರಿ ಮಂಧ್ ನಮ್ಮೆಯನ್ನು ಆಯೋಜಿಸುತ್ತದೆ. ಕೋಲಾಟವನ್ನು ಸಾಮಾನ್ಯವಾಗಿ ಚಿಕ್ಕದಾದ ವರ್ಣರಂಜಿತ ಕೋಲುಗಳಿಂದ ನಡೆಸಿದರೆ, ಉದ್ದನೆಯ ಬೆತ್ತಗಳನ್ನು ಪುತ್ತರಿ ಕೋಲಾಟವನ್ನು ಪ್ರದರ್ಶಿಸಲು ಬಳಸಲಾಗುತ್ತದೆ. ಕೋಲಾಟದಲ್ಲಿ ಭಾಗವಹಿಸುವಾಗಲೂ ಗ್ರಾಮಸ್ಥರು ಮಂದ್‌ನಲ್ಲಿ ಸೇರುತ್ತಾರೆ.

ಪೂರ್ವಜರ ಕಾಲದಲ್ಲಿ, ಪುತ್ತರಿ ಕೋಲಾಟವನ್ನು ಎಲ್ಲಾ ಮಂಧ್ ಪ್ರದೇಶಗಳಲ್ಲಿ ಪುತ್ತರಿಯ ನಂತರ ಐದು ದಿನಗಳವರೆಗೆ ಆಯೋಜಿಸಲಾಗುತ್ತಿತ್ತು. ಕೋಲಾಟವು ಒಂದು ಮಂಧ್ ನಲ್ಲಿ ಪ್ರಾರಂಭವಾದರೆ, ಇದು ಉತ್ಸವದ ಐದನೇ ದಿನದಂದು ಜಿಲ್ಲೆಯ ಮುಖ್ಯ ಮಂದಿರದಲ್ಲಿ ಕೊನೆಗೊಳ್ಳುತ್ತದೆ ಎಂದು ಬೆಳಿಯಪ್ಪ ವಿವರಿಸುತ್ತಾರೆ. ಆದಾಗ್ಯೂ, ಈಗ ತಿಂಗಳಾದ್ಯಂತ ಮಂಧ್ ಗಳಲ್ಲಿ ಪುತ್ತರಿ ಕೋಲಾಟ್ ಅನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಪುತ್ತರಿಯ ಸುಗ್ಗಿಯ ಹಬ್ಬವನ್ನು ವೀಕ್ಷಿಸಲು ಜ್ಯೋತಿಷ್ಯ ನಿಯಮವನ್ನು ಅನುಸರಿಸಿ ಸಮಯ ನಿಗದಿಪಡಿಸಿದ ನಂತರ, ಪ್ರತಿ ಹಳ್ಳಿಯು ಮಂಧ್ ಪ್ರದೇಶಗಳಾದ್ಯಂತ ಪುತ್ತರಿ ನಮ್ಗೆ ಆಯೋಜಿಸಲು ತಯಾರಿ ನಡೆಸಲಾಗುತ್ತದೆ. ಪ್ರಸ್ತುತ, ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಗ್ರಾಮಸ್ಥರಿಂದ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಗ್ರಾಮವು ಒಂದು ನಿರ್ದಿಷ್ಟ ಕೊಡವ ಕುಲದ ಮುಖ್ಯಸ್ಥರನ್ನು ಹೊಂದಿದೆ ಮತ್ತು ಅವರನ್ನು ಠಕ್ಕರು ಎಂದು ಕರೆಯಲಾಗುತ್ತದೆ.

ಕೋಲಾಟ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಧಾರವಾಗಿದ್ದರೂ, ಬಾಲೋ ಪಾಟ್ (ಗ್ರಾಮ, ಗ್ರಾಮದ ಮುಖಂಡರು ಮತ್ತು ದೇವತೆಗಳ ಸ್ತುತಿಗೀತೆಗಳು), ಬೊಲ್ಕಾಟ್ (ಸಾಂಪ್ರದಾಯಿಕ ದೀಪದ ನೃತ್ಯ), ಉಮಥಾಟ್ (ಮಹಿಳೆಯರು ಪ್ರದರ್ಶಿಸುವ ಸಾಂಪ್ರದಾಯಿಕ ನೃತ್ಯ) ಮತ್ತು ಪರೆಯಕಳಿ ಸೇರಿದಂತೆ ಹಲವಾರು ಜಾನಪದ ಕಲೆಗಳು (ಯೋಧ ಸಂಸ್ಕೃತಿಯನ್ನು ಪ್ರದರ್ಶಿಸಲು ಬೆತ್ತದೊಂದಿಗಿನ ಅಣಕು ಹೋರಾಟ) ಸಹ ನಡೆಯುತ್ತದೆ. ಕೊಡವ ಪುರುಷರ ಗುಂಪು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಕೋಲಾಟವನ್ನು ಮಾಡುತ್ತಾರೆ

ಪುತ್ತರಿ ಸಾಂಸ್ಕೃತಿಕ ಸಂಭ್ರಮಕ್ಕೆ ಕರೆ ನೀಡಿದರೆ, ಕೈಲ್ಪೋಲ್ದ್ ಹಬ್ಬಗಳು ವಿಶಿಷ್ಟವಾದ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತವೆ. ತೆಂಗಿನಕಾಯಿಗೆ ಗುಂಡು ಹಾರಿಸುವುದರಿಂದ ಹಿಡಿದು ಭಾರವಾದ ಕಲ್ಲುಗಳನ್ನು ಎಸೆಯುವವರೆಗೆ, ಮಂಧ್ ಗಳಲ್ಲಿ ಕೊಡವ ಕುಲಗಳ ಯೋಧ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾರೆ.

ಪ್ರಾಚೀನ ಆಚರಣೆಯದ ನಾರಿ ಮಂಗಳ (ಹುಲಿ ಮದುವೆ) ಸಮಯದಲ್ಲಿ ಮಂದ್ ಚಟುವಟಿಕೆಗಳಿಂದ ಕೂಡಿರುತ್ತದೆ. ಕೊಡವರು ಹಿಂದಿನ ಕಾಲದಲ್ಲಿ ಬೇಟೆಯಾಡುತ್ತಿದ್ದ ಯೋಧರು. ಯೋಧನು ಹುಲಿಯನ್ನು ಕೊಂದಾಗ, ನಾರಿ ಮಂಗಲ ಎಂಬ ಆಚರಣೆ ನಡೆಯುತ್ತದೆ. ಅಲ್ಲಿ ಯೋಧನು ತಾನು ಕೊಂದ ಹುಲಿಯೊಂದಿಗೆ ಮದುವೆಯಾಗುತ್ತಾನೆ. ಮದುವೆಯಂತಹ ವಿಶಿಷ್ಟ ಆಚರಣೆಗಳನ್ನು ನಡೆಸಲಾಗುತ್ತದೆ ಎಂದು ಬೆಳ್ಳಿಯಪ್ಪ ಮಾಹಿತಿ ನೀಡಿದ್ದಾರೆ.

ವಿವಿಧ ಪ್ರಕಾರದ ಮಂಧ್ ಗಳು

ಮಂಧ್ ಗಳನ್ನು ವಿವಿಧ ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ. ಪೂರ್ವಜರ ಕಾಲದಲ್ಲಿ, ಮಂಧ್ ಗಳು ಕೇವಲ ಸಾಂಸ್ಕೃತಿಕ ಕೇಂದ್ರಗಳಾಗಿರಲಿಲ್ಲ ಜೊತೆಗೆ ನ್ಯಾಯವನ್ನು ಒದಗಿಸುವ ನ್ಯಾಯಾಲಯಗಳಂತೆ  ಗಂಭೀರ ಪಾತ್ರ ವಹಿಸುತ್ತಿದ್ದವು. ಯಾವುದೇ ಗ್ರಾಮ ವಿವಾದವನ್ನು ಮಂಧ್ ಗಳಲ್ಲಿ ಸೌಹಾರ್ದಯುತವಾಗಿ ಬಗೆಹರಿಸಲಾಗುತ್ತದೆ. ನ್ಯಾಯಾಲಯಗಳಲ್ಲಿನ ಕ್ರಮಾನುಗತದಂತೆ, ಮಂಧ್ ಗಳನ್ನು ಸಹ ವಿಂಗಡಿಸಲಾಗಿದೆ ವರ್ಗಗಳಾಗಿ.

ವಾಡೆ ಐನ್ ಮನೆಯ ಸಾಂಪ್ರದಾಯಿಕ ಮನೆಗಳಿಗೆ ಹೊಂದಿಕೊಂಡಿರುವ ಮಂಧ್ ಮತ್ತು ಒಂದೇ ಕುಟುಂಬದ ವಶದಲ್ಲಿರುತ್ತದೆ.  ನಂತರ ಇಡೀ ಗ್ರಾಮಕ್ಕೆ ಸೇರಿದ ಕೇರಿ ಮಂಧ್ ಇದೆ. ಉರು ಮಂಧ್ ಎರಡು ಅಥವಾ ಹೆಚ್ಚಿನ ಹಳ್ಳಿಗಳ ಅಡಿಯಲ್ಲಿ ಬರುತ್ತದೆ. ನಾಡ್ ಮಂಧ್ ದೊಡ್ಡ ಹಳ್ಳಿಗಳ ಸಮೂಹದ ಅಡಿಯಲ್ಲಿ ಬರುವ ಪ್ರದೇಶಗಳಾಗಿವೆ. ಸೀಮೆ ಮಂಧ್ ಗಳು ಅತಿದೊಡ್ಡ ಮಂಧ್ ಪ್ರದೇಶಗಳಾಗಿವೆ, ಇದು ಸಮುದಾಯದ ಹಿರಿಯರ ಪ್ರಕಾರ, ಅಂತಿಮ ತೀರ್ಪನ್ನು ಘೋಷಿಸುವ ಸುಪ್ರೀಂ ಕೋರ್ಟ್‌ನ ಪ್ರಾಮುಖ್ಯತೆಯನ್ನು ಹೊಂದಿದೆ.

ಕೆಲವು ದಶಕಗಳ ಹಿಂದೆ ಮಂಧ್ ಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲಾರಂಭಿಸಿದವು. ಜಿಲ್ಲೆಯಲ್ಲಿ 240 ಕ್ಕೂ ಹೆಚ್ಚು ಮಂಧ್ ಗಳಿದ್ದವು, ಆದರೆ ಈಗ 70 ರಿಂದ 80 ಮಾತ್ರ ಅಸ್ತಿತ್ವದಲ್ಲಿವೆ. ಅತಿಕ್ರಮಣ, ಸರ್ಕಾರದ ಸ್ವಾಧೀನ ಮತ್ತು ಇತರ ಅಂಶಗಳು ಪವಿತ್ರ ಮಂಧ ಗಳ ಅವನತಿಗೆ ಕಾರಣವಾಯಿತು.

ಹಲವಾರು ವ್ಯಕ್ತಿಗಳು, ಕೊಡವ ಸಮಾಜಗಳು ಮತ್ತು ಇತರ ಕೊಡವ ಸಂಘಟನೆಗಳು ಮಂಧ್ ಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ಪ್ರಾರಂಭಿಸಿವೆ. ಭೂಮಿ ದಾಖಲೆಗಳ ಪ್ರಕಾರ, ಮಂಧ್ ಗಳು ಸರ್ಕಾರದ ಸ್ವಾಧೀನಕ್ಕೆ ಬರುವ ಪೈಸಾರಿ ಜಮೀನುಗಳಾಗಿವೆ. ಒಂದು ದಶಕದ ಹಿಂದೆ, ಸರ್ಕಾರವು ಗ್ರಾಮ ಮಂಧ್ ಗಳಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ನಡೆಸಿತು. ಆದಾಗ್ಯೂ, ಸಮುದಾಯವು ಈಗ ಎಚ್ಚೆತ್ತುಗೊಂಡಿದ್ದು ಹಲವಾರು ಮಂಧ್ ಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಸಮುದಾಯವು ಈ ಪವಿತ್ರ ಭೂಮಿಯನ್ನು ಸಂರಕ್ಷಿಸುವುದನ್ನು ಮುಂದುವರಿಸಲಿದ್ದು, ಶಾಶ್ವತವಾಗಿ ರಕ್ಷಿಸುವ ಅವಶ್ಯಕತೆಯಿದೆ ಎಂದು ಬೆಳಿಯಪ್ಪ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com