
ಮಡಿಕೇರಿ: ಕೊಡಗಿನ ತೇವಾಂಶ ಮತ್ತು ಮಂಜು ಕವಿದ ವಾತಾವರಣದ ನಡುವೆ, ಇತ್ತೀಚೆಗೆ ಇಬ್ಬರು ದ್ವಿಚಕ್ರ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಪ್ರಯಾಣಿಕರ ಗಮನ ಸೆಳೆದರು. ಇಬ್ಬರು ಯುವಕರು ಕೊಡಗಿನ ಗುಡ್ಡಗಾಡು ಭೂಪ್ರದೇಶದಲ್ಲಿ ಒಂದು ಸಕಾರಣಕ್ಕೆ ಸೈಕ್ಲಿಂಗ್ ಮಾಡಿದ್ದಾರೆ.
25 ವರ್ಷದ ಸುದರ್ಶನ ಡಿಟಿ ಅವರು ಚಿತ್ರದುರ್ಗ ಮೂಲದವರಾಗಿದ್ದು, ಈಗ ಅವರದ್ದು ಅಲೆಮಾರಿ ಜೀವನ. ಅವರು ಮತ್ತು ಅವರ ಸಂಬಂಧಿ ಶರತ್ ಕುಮಾರ್ ಪಿ, ಮುಂಗಾರು ಋತುವಿನಲ್ಲಿ ಸೈಕಲ್ ಸವಾರಿ ಮಾಡುವವರಾಗಿದ್ದು, ಮಡಿಕೇರಿಯಲ್ಲಿ ಟೆಂಟ್ ಹಾಕಿದ್ದರು. ರಾಜ್ಯದಲ್ಲಿ ಮುಂಗಾರಿಗೆ ಸಂಬಂಧಿಸಿದ ಕಿರುಚಿತ್ರ ಮಾಡುವ ಉದ್ದೇಶ ಹೊಂದಿರುವ, ಸುದರ್ಶನ್ ತನ್ನ ಸ್ವಗ್ರಾಮದ ಶಾಲೆಯನ್ನು ಸರಿಪಡಿಸಲು ಹಣವನ್ನು ಸಂಗ್ರಹಿಸಲು ಸವಾರಿ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಭಾರತದಾದ್ಯಂತ ಸೇರಿದಂತೆ ಇತರ 7 ದೇಶಗಳಲ್ಲಿ ಸೈಕಲ್ ನಲ್ಲಿಯೇ ಸಂಚರಿಸುತ್ತಾರೆ.
ಚಿತ್ರದುರ್ಗ ಜಿಲ್ಲೆಯ ಹನುಮನಹಳ್ಳಿಯ ಸಣ್ಣ ಹಳ್ಳಿಯಿಂದ ಬಂದ ಸುದರ್ಶನ್ ಅವರು ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಯಲ್ಲಿ ಹಿರಿಯ ಮಾರಾಟ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡರು. ಕೆಲಸ ಕಳೆದುಕೊಂಡ ಸಮಯದಲ್ಲಿ ಕಂಪೆನಿ ಕಡೆಯಿಂದ ಬರಬೇಕಾಗಿದ್ದ 52 ಸಾವಿರ ರೂಪಾಯಿ ಬದಲು ಕಂಪನಿ ಅವರಿಗೆ ಕೊಟ್ಟಿದ್ದು ಕೇವಲ 10 ಸಾವಿರ ರೂಪಾಯಿ.
ಸೈಕಲ್ ಪಯಣ ಮೂಲಕ ಅರಿವು: ಕಂಪನಿಯಿಂದ ಆಗಿರುವ ಅನ್ಯಾಯಕ್ಕೆ ಪ್ರತೀಕಾರವಾಗಿ ಸುದರ್ಶನ್ ತಮ್ಮ ಬಾಕಿಯನ್ನು ಪಡೆಯಲು ಸೈಕಲ್ ಪ್ರಯಾಣ ಆರಂಭಿಸಿದರು. ಅವರು ಮೂರು ದಿನಗಳಲ್ಲಿ ತಮ್ಮ ಸ್ಥಳೀಯ ಗ್ರಾಮದಿಂದ ಹೈದರಾಬಾದ್‌ಗೆ ಸವಾರಿ ಮಾಡಿದರು, ಕಂಪನಿಯು ತನಗೆ ಮೋಸ ಮಾಡಿದೆ ಎಂದು ತನ್ನ ಸೈಕಲ್‌ಗೆ ಕ್ಲಿಪ್ ಮಾಡಿದ ಬೋರ್ಡ್ ನೇತು ಹಾಕಿಕೊಂಡು ಹೊರಟರು. ಹೈದರಾಬಾದ್‌ನಲ್ಲಿರುವ ಸಂಸ್ಥೆಯ ಕಾರ್ಪೊರೇಟ್ ಪ್ರಧಾನ ಕಚೇರಿಗೆ ಭೇಟಿ ನೀಡಿ ಅಲ್ಲಿ ತಮಗೆ ಬರಬೇಕಾಗಿದ್ದ ಹಣವನ್ನು ಪಡೆದುಕೊಂಡರು.
ಇದು ನಡೆದಿದ್ದು ಡಿಸೆಂಬರ್ 2020 ರಲ್ಲಿ. ಇದರ ನಂತರ, ನಾನು ಅಲೆಮಾರಿ ಜೀವನವನ್ನು ನಡೆಸಲು ಪ್ರಾರಂಭಿಸಿದೆ. ನನ್ನ ಸೈಕಲ್‌ನಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ ಹೋಗುವ ಗುರಿ ಹೊಂದಿದ್ದೇನೆ. ನನ್ನ ಪ್ರಯಾಣವು ಹಲವಾರು ಆಸಕ್ತಿದಾಯಕ ಸ್ಥಳಗಳಿಗೆ ನನ್ನನ್ನು ಕರೆದೊಯ್ಯಿತು. ನಾನು ಇದುವರೆಗೆ 12 ರಾಜ್ಯಗಳ ಎಲ್ಲಾ ಜಿಲ್ಲೆಗಳನ್ನು ಸುತ್ತಿದ್ದೇನೆ. ನನ್ನ ಸವಾರಿಯ ಸಮಯದಲ್ಲಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದೆ. ಸುಸ್ಥಿರ ಜೀವನ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳ ಕುರಿತು ಭಾಷಣಗಳನ್ನು ಅಲ್ಲಲ್ಲಿ ಶಾಲೆಗಳಲ್ಲಿ, ಸಮುದಾಯಗಳಲ್ಲಿ ನೀಡುತ್ತಿದ್ದೆ.
ಈ ಸಮಯದಲ್ಲಿ ನಾನು ಚಿತ್ರದುರ್ಗದ ಕರಿಯಮ್ಮನ ಹಟ್ಟಿ ಗ್ರಾಮದಲ್ಲಿರುವ ನನ್ನ ಹಳೆಯ ಶಾಲೆಯಾದ ‘ಶ್ರೀ ಕರಿಯಾಂಬಾ ಪ್ರೌಢಶಾಲೆ’ಗೆ ಭೇಟಿ ನೀಡಿದ್ದೆ. ನನ್ನ ತಂದೆ, ಸಹೋದರ ಮತ್ತು ನಾನು ಓದಿದ ಸಂಸ್ಥೆ ಇದು ಎಂದು ವಿವರಿಸಿದರು. ಅವರ ಭೇಟಿಯ ವೇಳೆ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಜನೋಪಕಾರ: ಶಾಲೆಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಎಸ್‌ಸಿ-ಎಸ್‌ಟಿ ಸಮುದಾಯದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದ್ದಾರೆ. ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವಂತೆ ಮಾಡಲು ಶಿಕ್ಷಕರ ತಂಡವು ಹಣವನ್ನು ಒಟ್ಟುಗೂಡಿಸಿ ಮತ್ತು ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲು ಸಹಾಯ ಮಾಡಲು ಮಿನಿ ವ್ಯಾನ್ ನ್ನು ಖರೀದಿಸಿತು. ಆದಾಗ್ಯೂ, 100 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ನಮಗೆ ಉತ್ತಮ ಮೂಲಸೌಕರ್ಯಗಳ ಅಗತ್ಯವಿದೆ ಎನ್ನುತ್ತಾರೆ.
ಸುದರ್ಶನ್ ಅವರು ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ನಮ್ಮ ವಿದ್ಯಾರ್ಥಿ ಸಮಾಜಸೇವೆ ಮಾಡುತ್ತಿರುವ ರೀತಿ ಸ್ಪೂರ್ತಿದಾಯಕವಾಗಿದೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕ ನಾಗರಾಜ್ ಹೇಳಿದರು. ಚಿತ್ರದುರ್ಗದ ಒಳ ಭಾಗದಲ್ಲಿರುವ ಶಾಲೆಯು ಯುವ ಪೀಳಿಗೆಯ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಾನು ಬೆಂಗಳೂರಿನಿಂದ ಕೋಲ್ಕತ್ತಾಗೆ ಸವಾರಿ ಮಾಡಿ ಹನೋಯಿಗೆ ವಿಮಾನದಲ್ಲಿ ಪ್ರಯಾಣಿಸಿದೆ. ಹನೋಯಿಯಿಂದ, ನಾನು ಸಿಂಗಾಪುರವನ್ನು ತಲುಪಲು ಆರು ದೇಶಗಳನ್ನು ಸೈಕ್ಲಿಂಗ್ ಮಾಡಿದೆ. ನನ್ನ ಸೈಕಲ್‌ನಲ್ಲಿ 1,000 ಕಿಮೀ ಕ್ರಮಿಸಿದೆ. ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದರ ಜೊತೆಗೆ, ಶಾಲೆಯನ್ನು ಪುನರುಜ್ಜೀವನಗೊಳಿಸಲು 1.45 ಲಕ್ಷ ರೂಪಾಯಿ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆಧುನಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಿದ್ದು, 1 ಕೋಟಿ ರೂಪಾಯಿ ಅಗತ್ಯವಿದೆ. ಈ ಯೋಜನೆ ಶೀಘ್ರ ಈಡೇರುವ ಭರವಸೆ ನನಗಿದೆ ಎನ್ನುತ್ತಾರೆ ಸುದರ್ಶನ್.
Advertisement