ಹಲವು ವರ್ಷಗಳಿಂದ ಸುಣ್ಣ-ಬಣ್ಣ ಕಾಣದ ಸರ್ಕಾರಿ ಶಾಲೆಗೆ ಹೊಸ ಲುಕ್: ಅಕ್ಷಯ ಪಾತ್ರ ಫೌಂಡೇಶನ್‌ ಕಾರ್ಯಕ್ಕೆ ಭಾರೀ ಮೆಚ್ಚುಗೆ!

ಟ್ರಸ್ಟ್​ನ ಸೇವಕರು ಸ್ವಯಂಪ್ರೇರಿತವಾಗಿ ಈ ಸರ್ಕಾರಿ ಶಾಲೆಗೆ ನವೀನ ವಿನ್ಯಾಸ ಮತ್ತು ವರ್ಧಿತ ಕಲಿಕಾ ಸಾಧನಗಳನ್ನು ಅಳವಡಿಸುವ ಮೂಲಕ ಶಿಕ್ಷಣ ಕಲಿಯಬೇಕು ಎನ್ನುವ ಮಕ್ಕಳ ಉತ್ಸಾಹಕ್ಕೆ ಉತ್ತೇಜನ ನೀಡಿದ್ದಾರೆ.
ಲಕ್ಷ್ಮೀಪುರ ಸರ್ಕಾರಿ ಶಾಲೆ
ಲಕ್ಷ್ಮೀಪುರ ಸರ್ಕಾರಿ ಶಾಲೆ
Updated on

ಬೆಂಗಳೂರು: ಬೆಂಗಳೂರು ಗ್ರಾಮಾಂತರದ ಲಕ್ಷ್ಮೀಪುರದ ಸರ್ಕಾರಿ ಶಾಲೆ ಅನೇಕ ವರ್ಷದಿಂದ ಸುಣ್ಣ-ಬಣ್ಣ ಕಾಣದೇ ಹಳೆಯ ಕಟ್ಟಡದಂತೆ ಕಾಣುತ್ತಿತ್ತು. ಇದಕ್ಕೀಗ ಹೊಸ ಲುಕ್ ಕೊಟ್ಟಿದ್ದರಿಂದ ಖಾಸಗಿ​ ಶಾಲೆಗಿಂತ ಕಡಿಮೆ ಇಲ್ಲವೇನು ಎಂಬುವಂತೆ ಕಾಣುತ್ತಿದೆ. ಆದರೆ, ಇದಕ್ಕೆಲ್ಲ ಕಾರಣ ಗ್ಲೋಬರ್ ಇನೋವೇಟರ್ ಸರ್ವಿಸ್ ಆರ್ಗನೈಸೇಷನ್ ಮತ್ತು ಅಕ್ಷಯ ಪಾತ್ರ ಫೌಂಡೇಶನ್‌.

ಹೌದು ಟ್ರಸ್ಟ್​ನ ಸೇವಕರು ಸ್ವಯಂಪ್ರೇರಿತವಾಗಿ ಈ ರ್ಕಾರಿ ಶಾಲೆಗೆ ನವೀನ ವಿನ್ಯಾಸ ಮತ್ತು ವರ್ಧಿತ ಕಲಿಕಾ ಸಾಧನಗಳನ್ನು ಅಳವಡಿಸುವ ಮೂಲಕ ಶಿಕ್ಷಣ ಕಲಿಯಬೇಕು ಎನ್ನುವ ಮಕ್ಕಳ ಉತ್ಸಾಹಕ್ಕೆ ಉತ್ತೇಜನ ನೀಡಿದ್ದಾರೆ ಮತ್ತು ಶಾಲೆಗೆ ಹೊಸ ಜೀವ ತುಂಬಿದ್ದಾರೆ,

ಶಾಲೆಯಲ್ಲಿ 131 ಬಾಲಕರು ಹಾಗೂ 110 ಬಾಲಕಿಯರು ಸೇರಿ ಒಟ್ಟು 240ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಟ್ರಸ್ಟ್​ನ ಸೇವಕರ ಪರಿಶ್ರಮದಿಂದಾಗಿ ಶಾಲೆಯು ಇದೀಗ ಆಧುನಿಕ ಗ್ರಂಥಾಲಯ, ಕಂಪ್ಯೂಟರ್ ಲ್ಯಾಲ್, ಸಾವಯವ ಕೃಷಿ, ವಿದ್ಯಾರ್ಥಿಗಳು ಸುಸ್ಥಿರ ಜೀವನ ಪದ್ಧತಿಗಳ ಬಗ್ಗೆ ಕಲಿಯಲು ಉದ್ಯಾನವನ್ನು ಹೊಂದಿದೆ.

ಲಕ್ಷ್ಮೀಪುರ ಸರ್ಕಾರಿ ಶಾಲೆ
ಸರ್ಕಾರದ ನೆರವಿಲ್ಲದೆಯೇ ಮಾದರಿ ಸರ್ಕಾರಿ ಶಾಲೆ ನಿರ್ಮಿಸಿದ ಕೊಡಗಿನ ಗ್ರಾಮಸ್ಥರು!

ನೀರಿನ ಸಂರಕ್ಷಣೆ ಬಾಗೂ ಬಳಕೆಯ ಬಗ್ಗೆ ತಿಳಿಸಲು ಮಳೆ ನೀರು ಕೊಯ್ಲು ವ್ಯವಸ್ಥೆಯನ್ನೂ ಕೂಡ ಶಾಲೆಯಲ್ಲಿ ಅಳವಡಿಸಲಾಗಿದೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಪದ್ಧತಿ ಪರಿಚಯಿಸುವ ಪ್ರಯತ್ನವನ್ನೂ ಟ್ರಸ್ಟ್ ಮಾಡಿದೆ.

ಇದು ಆರೋಗ್ಯಕರ ಆಹಾರ ಮತ್ತು ಸಾವಯವ ಆಹಾರದ ಪ್ರಯೋಜನಗಳ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ ಮತ್ತು ಕಲಿಕೆಯ ಅನುಭವವು ಉತ್ತಮ ಆಹಾರ ಪದ್ಧತಿಯನ್ನು ಉತ್ತೇಜಿಸುತ್ತದೆ. ಈ ಮೂಲಕ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪರಿಸರದ ಬಗ್ಗೆ ಜವಾಬ್ದಾರಿಯ ಹೊಂದುವಂತೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com