ಸಾವನ್ನೇ ಗೆದ್ದ ಭೂಮಿಯ ಏಕೈಕ ಜೀವಿ! ವಯಸ್ಸಾದಂತೆ ಮತ್ತೆ ಮಗುವಾಗುವ ಈ ಅಮರ ಜೀವಿಯ ರಹಸ್ಯವೇನು?

ಹುಟ್ಟು-ಸಾವು ಎರಡು ಆ ದೇವರಿಗೆ ಬಿಟ್ಟಿದ್ದು. ಆದರೆ, ಈ ಭೂಮಿಯ ಮೇಲೆ ಇರುವ 87 ಲಕ್ಷ ವಿವಿಧ ಪ್ರಭೇದಗಳ ಪೈಕಿ ಕೇವಲ ಒಂದೇ ಒಂದು ಜೀವಿಗೆ ಮಾತ್ರವೇ ತನ್ನನ್ನು ತಾನೇ ಕೊಲ್ಲದಿದ್ದರೆ ಎಂದಿಗೂ ಸಾಯದ ಪವರ್ ಇರೋದು! ಆ ಜೀವಿಯ ಹೆಸರೇ ವಿಚಿತ್ರವಾಗಿದೆ. ಹಾಗಾದ್ರೆ, ಆ ವಿಚಿತ್ರ ಜೀವಿ ಯಾವುದು ಗೊತ್ತಾ?
Immortal Jellyfish
ಅಮರ ಜೆಲ್ಲಿಫಿಶ್AI Image
Updated on

General Knowledge: ಹುಟ್ಟು-ಸಾವು ಪ್ರಕೃತಿಯ ಅಳಿಸಲಾಗದ ನಿಯಮ. ಆದರೆ ಭೂಮಿಯ ಮೇಲಿರುವ 87 ಲಕ್ಷ ಜೀವಿಗಳ ಪೈಕಿ, ಸಾವನ್ನೇ ಸೋಲಿಸಿ ಬದುಕುವ ವಿಸ್ಮಯಕಾರಿ ಶಕ್ತಿ ಹೊಂದಿರುವ ಜೀವಿಯೊಂದಿದೆ ಎಂಬುದು ನಿಮಗೆ ಗೊತ್ತಾ? ವಯಸ್ಸಾದಂತೆ ಸಾವಿನ ಬದಲು ಮರಳಿ ಬಾಲ್ಯದ ಹಂತಕ್ಕೆ ಹೋಗಿ ಮತ್ತೆ ಹೊಸ ಜೀವನ ಆರಂಭಿಸುವ ಈ ಅದ್ಭುತ ಜೀವಿ ಯಾವುದು, ಇದರ ಹಿಂದಿರುವ ರಹಸ್ಯವೇನು ಎಂಬ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ.

ಎಂದಿಗೂ ಸಾಯದ ಆ ಜೀವಿ ಯಾವುದು?

ಆ ವಿಚಿತ್ರ ಮತ್ತು ಅದ್ಭುತ ಜೀವಿಯ ಹೆಸರು 'ಟರ್ಲಿಟೊಪ್ಸಿಸ್ ಡೊಹರ್ನಿ' (Turritopsis dohrnii). ಇದನ್ನು ಪ್ರಪಂಚದಾದ್ಯಂತ 'ಅಮರ ಜೆಲ್ಲಿಫಿಶ್' (Immortal Jellyfish) ಎಂದೇ ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಜೀವಿಗಳು ಹುಟ್ಟಿ, ಬೆಳೆದು, ವಯಸ್ಸಾಗಿ ಕೊನೆಗೆ ಮರಣ ಹೊಂದುತ್ತವೆ. ಆದರೆ ಈ ಜೆಲ್ಲಿಫಿಶ್‌ಗೆ ವಯಸ್ಸಾಗುವ ಪ್ರಕ್ರಿಯೆಯೇ ಉಲ್ಟಾ ಆಗುತ್ತದೆ!

ಹೌದು, ಇದು ವಯಸ್ಸಾದಾಗ, ಕಾಯಿಲೆ ಬಂದಾಗ ಅಥವಾ ಸಮುದ್ರದಲ್ಲಿ ಯಾವುದೇ ಪರಿಸರ ಬದಲಾವಣೆ ಎದುರಾದಾಗ ಸಾವನ್ನಪ್ಪುವ ಬದಲಾಗಿ, ತನ್ನ ವಯಸ್ಸನ್ನು ಹಿಂದಕ್ಕೆ (Reverse) ತಳ್ಳಿಕೊಳ್ಳುತ್ತದೆ. ಅಂದರೆ, ವಯಸ್ಸಾದ ಜೆಲ್ಲಿಫಿಶ್‌ ತನ್ನ ಜೀವಕೋಶಗಳನ್ನು ಮಾರ್ಪಡಿಸಿಕೊಂಡು ಮತ್ತೆ ತನ್ನ ಆರಂಭಿಕ ಹಂತವಾದ ಪಾಲಿಪ್ ಅಂದರೆ ಬಾಲ್ಯದ ಹಂತಕ್ಕೆ ಮರಳುತ್ತದೆ. ಕೊಳದ ತಳಕ್ಕೆ ಅಂಟಿಕೊಂಡು ಮತ್ತೆ ಹೊಸದಾಗಿ ಜೀವನ ಆರಂಭಿಸುತ್ತದೆ. ಇದು ಮಗು ಬೆಳೆದು ವಯಸ್ಸಾದ ನಂತರ ಮತ್ತೆ ಮಗುವಾಗಿ ಬದಲಾಗುವ ಪ್ರಕ್ರಿಯೆಯಂತೆಯೇ ಆಗಿದೆ.

ಹಾಗಾದ್ರೆ, ತನ್ನನ್ನು ತಾನೇ ಕೊಲ್ಲದಿದ್ದರೆ ಎಂಬ ಮಾತಿನ ಅರ್ಥವೇನು?

ಈ ಜೀವಿಗೆ ನೈಸರ್ಗಿಕವಾಗಿ ವಯಸ್ಸಾಗಿ ಸಾಯುವ ಗುಣವಿಲ್ಲದಿದ್ದರೂ, ಸಮುದ್ರದಲ್ಲಿರುವ ದೊಡ್ಡ ಮೀನುಗಳು, ಆಮೆಗಳು ಅಥವಾ ಇತರ ಜೀವಿಗಳು ಇದನ್ನು ಬೇಟೆಯಾಡಿ ತಿಂದರೆ ಇದು ಸಾಯುತ್ತದೆ. ಜೊತೆಗೆ, ತೀವ್ರವಾದ ನೀರಿನ ಮಾಲಿನ್ಯ ಅಥವಾ ಯಾವುದಾದರೂ ಬ್ಯಾಕ್ಟೀರಿಯಾ ಸೋಂಕು ತಗುಲಿದರೆ ಸಾಯಬಹುದು.

ಒಂದು ವೇಳೆ ಸಮುದ್ರದಲ್ಲಿ ಆಹಾರವೇ ಸಿಗದ ಪರಿಸ್ಥಿತಿ ಬಂದರೆ ಅಥವಾ ತೀವ್ರವಾದ ಒತ್ತಡಕ್ಕೆ ಒಳಗಾದರೆ, ಇದು ತನ್ನ ದೇಹದ ಕೋಶಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತದೆ. ಬೇರೆ ಜೀವಿಗಳು ಇದನ್ನು ಕೊಲ್ಲದಿದ್ದರೆ ಅಥವಾ ಇದು ಸ್ವತಃ ನಾಶವಾಗದಿದ್ದರೆ, ಇದು ಸಿದ್ಧಾಂತದ ಪ್ರಕಾರ ಎಂದಿಗೂ ಸಾಯುವುದಿಲ್ಲ!

Immortal Jellyfish
ಹಣದ ಆಸೆಗೆ ಬಲಿಯಾಗುತ್ತಿರುವ ಮೂಕ ಜೀವಿಗಳು; ಜಗತ್ತಿನಲ್ಲಿ ಅತಿ ಹೆಚ್ಚು ಕಳ್ಳಸಾಗಣೆಯಾಗೋ ಪ್ರಾಣಿಗಳಿವು!
Turritopsis dohrnii
ಟರ್ಲಿಟೊಪ್ಸಿಸ್ ಡೊಹರ್ನಿAI Image

ಈ ಜೀವಿ ಎಲ್ಲಿದೆ? ಇದರ ಗಾತ್ರ ಎಷ್ಟು?

ಈ ಜೀವಿಯ ಗಾತ್ರ ಅತ್ಯಂತ ಚಿಕ್ಕದಾಗಿದೆ. ಇದು ಕೇವಲ 4.5 ಮಿಲಿಮೀಟರ್ (ಒಂದು ಸಣ್ಣ ಉಗುರಿನ ಗಾತ್ರದಷ್ಟು) ಮಾತ್ರ ಇರುತ್ತದೆ. ಜೊತೆಗೆ, ಇದು ಮೂಲತಃ ಮೆಡಿಟರೇನಿಯನ್ ಸಮುದ್ರದಲ್ಲಿ ಕಂಡುಬಂದಿತ್ತು. ಆದರೆ ಈಗ ಪ್ರಪಂಚದಾದ್ಯಂತದ ಎಲ್ಲಾ ಸಾಗರಗಳಲ್ಲೂ ಹರಡಿಕೊಂಡಿದೆ.

ಮುಂದುವರೆದು, ವಿಜ್ಞಾನಿಗಳು ಈ ಜೀವಿಯ ಡಿಎನ್‌ಎ ಮತ್ತು ಟ್ರಾನ್ಸ್‌ಡಿಫರೆನ್ಸಿಯೇಶನ್ ಎಂಬ ಈ ವಿಶೇಷ ಕೋಶ ಪ್ರಕ್ರಿಯೆಯ ಬಗ್ಗೆ ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ. ಯಾಕಂದ್ರೆ, ಇದರ ಸಹಾಯದಿಂದ ಮಾನವನ ವಯಸ್ಸಾಗುವಿಕೆಯನ್ನು ತಡೆಯಲು ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಚಿಕಿತ್ಸೆ ಕಂಡುಹಿಡಿಯಲು ಈ ಜೀವಿಯ ರಹಸ್ಯ ಸಹಕಾರಿಯಾಗಬಹುದು ಎಂದು ನಂಬಲಾಗಿದೆ.

Immortal Jellyfish
ಮೊಟ್ಟೆಗೆ 20 ಲಕ್ಷ, ಹಣ್ಣಿಗೆ 35 ಲಕ್ಷ ರೂ; ಇವು ವಿಶ್ವದ ಅತ್ಯಂತ ದುಬಾರಿ ಆಹಾರಗಳು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com