ಲಂಡನ್: ಜರ್ಮನಿಯ ಟೆನಿಸ್ ಆಟಗಾರ್ತಿ ಸಬೈನ್ ಲಿಸಿಕಿ ಈ ಬಾರಿಯ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ತಲುಪಿದ್ದಾರೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ, ಪೋಲೆಂಡ್ನ ಅಗ್ನಿಸ್ಕಾ ರಾಡ್ವಾಂಸ್ಕಾ ವಿರುದ್ಧ 6-4, 2-6, 9-7 ಅಂತರದಲ್ಲಿ ಜಯ ಸಾಧಿಸಿದರು.
ಸ್ಮೈಲಿಂಗ್ ಡಾರ್ಲಿಂಗ್ ಎಂದೇ ಹೆಸರಾಗಿರುವ ಲಿಸಿಕಿ, ಈಗ ವಿಂಬಲ್ಡನ್ನ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ನ ಬಾರ್ಟೋಲಿ ವಿರುದ್ಧ ಸೆಣೆಸಲಿದ್ದಾರೆ.
ಗುರುವಾರದ ಪಂದ್ಯದಲ್ಲಿ, ಮೊದಲ ಸೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಆ ಸೆಟ್ನಲ್ಲಿ ಜಯ ಸಾಧಿಸಿದ್ದ ಅವರು, ಎರಡನೇ ಸೆಟ್ನಲ್ಲಿ ಸೋಲು ಕಂಡರು. ಆದರೂ, ಮತ್ತೆ ಮೂರನೇ ಸೆಟ್ನಲ್ಲಿ ಮತ್ತೆ ಪುಟಿದೆದ್ದ ಅವರು, ಆ ಸೆಟ್ನಲ್ಲಿ ಜಯ ಸಾಧಿಸುವುದರೊಂದಿಗೆ ಪಂದ್ಯದಲ್ಲೂ ಜಯಭೇರಿ ಬಾರಿಸಿ, ಫೈನಲ್ಗೆ ಲಗ್ಗೆಯಿಟ್ಟರು.