ನವದೆಹಲಿ: ಆಗಸ್ಟ್ 14ರಿಂದ 31ರವರೆಗೆ ನಡೆಯಲಿರುವ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ನೇರ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನಮ್ಮ ಪಂದ್ಯಾವಳಿಯ ಆತಿಥೇಯ ಪ್ರಸಾರದ ಚಾಲೆನ್ ಆಗಿದೆ ಎಂದು ಐಬಿಎಲ್ ಹೇಳಿಕೊಂಡಿದೆ.
75 ಲೀಗ್ ಪಂದ್ಯಗಳ ಮತ್ತು 10 ಸೆಮಿಫೈನಲ್ ಹಾಗೂ 5 ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 90 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್2 ಮತ್ತು ಇಎಸ್ಪಿಎನ್ ಚಾನೆಲ್ಗಳು ನೇರ ಪ್ರಸಾರ ಮಾಡಲಿವೆ. ಮುಂಬೈ ಮಾಸ್ಟರ್ಸ್, ದೆಹಲಿ ಸ್ಮಾಶೆರ್ಸ್, ಅವಾಧೆ ವಾರಿಯರ್ಸ್, ಹೈದರಾಬಾದ್ ಹಾಟ್ಶಾಟ್ಸ್, ಬಂಗಾ ಬೀಟ್ಸ್ ಹಾಗೂ ಪುಣೆ ಪಿಸ್ತೋನ್ಸ್ ತಂಡಗಳು ಪಂದ್ಯಾವಳಿಯಲ್ಲಿ ಪರಸ್ಪರ ಸೆಣಸಲಿವೆ.