ಕೊಹ್ಲಿಗೆ ನಾಯಕ ಪಟ್ಟ ನೀಡಲು ಇದು ಸೂಕ್ತ ಸಮಯ: ಇಯಾನ್ ಚಾಪೆಲ್

ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್ ನಾಯಕನನ್ನಾಗಿ ಮಾಡಲು ಸೂಕ್ತ ಸಮಯ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಟೀಂನ ಮಾಜಿ...
ಇಯಾನ್ ಚಾಪೆಲ್
ಇಯಾನ್ ಚಾಪೆಲ್
Updated on

ಆಸ್ಟ್ರೇಲಿಯಾ: ವಿರಾಟ್  ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್ ನಾಯಕನನ್ನಾಗಿ ಮಾಡಲು ಸೂಕ್ತ ಸಮಯ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಟೀಂನ ಮಾಜಿ ನಾಯಕ ಇಯಾನ್ ಚಾಪೆಲ್ ಹೇಳಿದ್ದಾರೆ.

 ಸದ್ಯ ಟೆಸ್ಟ್ ಕ್ರಿಕೆಟ್‌ನ ನಾಯಕ ಸ್ಥಾನ ವಹಿಸಿರುವ ಕೊಹ್ಲಿ, ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ  ಪಂದ್ಯದಲ್ಲಿ ಕೊಹ್ಲಿ ಎರಡು ಶತಕ ಬಾರಿಸಿದ್ದರು. ಆದರೂ, ಟೀಂ ಇಂಡಿಯಾ 58 ರನ್‌ಗಳಿಗೆ ಪರಾಭವಗೊಂಡಿತ್ತು.

ಮೂರೂವರೆ ದಿನಗಳಿಂದ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿತ್ತು, ಟೆಸ್ಟ್ ಕ್ರಿಕೆಟ್ ನ ನಾಯಕತ್ವವನ್ನು  ಕೊಹ್ಲಿಗೆ ನೀಡಲು ಆಯ್ಕೆಗಾರರು ಚಿಂತಿಸುವಂತೆ ಮಾಡಿದೆ. ಟೆಸ್ಟ್ ಕ್ಯಾಪ್ಟನ್ ಸ್ಥಾನವಹಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿಯ ಕಾಲಾವಧಿ ಮುಗಿದಿದ್ದು,  ಕೊಹ್ಲಿಗೆ ಆ ಸ್ಥಾನವನ್ನು ನೀಡಲು ಇದು ಸೂಕ್ತ ಸಮಯ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋದಲ್ಲಿ ಬರೆದ ಅಂಕಣದಲ್ಲಿ ಚಾಪೆಲ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹಾಲಿ ನಾಯಕನಾಗಿರುವ ಕೊಹ್ಲಿ ಉತ್ತಮ ಸಾಮಥ್ಯ ಹೊಂದಿರುವ ನಾಯಕನಾಗಿ ಹೊರಹೊಮ್ಮಿದ್ದಾರೆ. ಈ ಪಂದ್ಯದಲ್ಲಿ ಅವರ ತಲೆಗೆ ಹೊಡೆತ ಬಿದ್ದ ನಂತರವೂ ಅವರ ಶಾರೀರಿಕ ಶಕ್ತಿ ಹೇಗಿತ್ತು ಎಂಬುದನ್ನು ಅವರು ತೋರಿಸಿದ್ದಾರೆ. ಅವರ ಈ ಧೈರ್ಯ ಆಸ್ಟ್ರೇಲಿಯಾ ತಂಡಕ್ಕೆ ಶಕ್ತವಾದ ಸಂದೇಶವನ್ನು ನೀಡಿತ್ತು ಎಂದು ಚಾಪೆಲ್ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com