ನಾನು ಸಾನಿಯಾ ಚೆನ್ನಾಗಿದ್ದೇವೆ: ಮಲ್ಲಿಕ್

ದಾಂಪತ್ಯದಲ್ಲಿ ಬಿರುಕು: ಮಾಧ್ಯಮಗಳ ವರದಿ ತಿರಸ್ಕರಿಸಿದ ಸಾನಿಯಾ ಪತಿ..
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲ್ಲಿಕ್ (ಸಂಗ್ರಹ ಚಿತ್ರ)
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲ್ಲಿಕ್ (ಸಂಗ್ರಹ ಚಿತ್ರ)
Updated on

ದುಬೈ: ಸಾನಿಯಾ ಮತ್ತು ನಾನು ಈಗಲೂ ಒಟ್ಟಿಗೆ ಸಂಸಾರ ಮಾಡುತ್ತಿದ್ದು, ನಮ್ಮ ನಡುವೆ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲ್ಲಿಕ್ ಹೇಳಿದ್ದಾರೆ.

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅವರ ನಡುವಿನ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ. ದಕ್ಷಿಣ ಭಾರತದ ಖ್ಯಾತ ನಟರೊಬ್ಬರ ಮಗ ಸಾನಿಯಾ ಹಿಂದೆ ಬಿದ್ದಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಶೋಯೆಬ್ ಮಲ್ಲಿಕ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

'ಸಾನಿಯಾ ಹಾಗೂ ನನ್ನ ಸಂಬಂಧ ಹಳಸಿಲ್ಲ. ನಾವು ಆನಂದವಾಗಿಯೇ ಇದ್ದೇವೆ. ನಮ್ಮ ಸಂಸಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಈಗಲೂ ನಾನು ಮತ್ತು ಸಾನಿಯಾ ದುಬೈನಲ್ಲಿ ಒಟ್ಟಿಗೆ ವಾಸಿಸುತ್ತಿದ್ದೇವೆ. ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ಒಟ್ಟಿಗೇ ಕಳೆಯಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇಬ್ಬರೂ ವೃತ್ತಿಪರ ಕ್ರೀಡಾಪಟುಗಳಾದ್ದರಿಂದ ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆಯಲಾಗುತ್ತಿಲ್ಲ. ಕ್ರೀಡೆಯ ಮೇಲಿನ ನಮ್ಮ ಬದ್ಧತೆಗಾಗಿ ನಾವು ನಮ್ಮ ಸಮಯವನ್ನು ತ್ಯಾಗ ಮಾಡಬೇಕಾಗುತ್ತದೆ. ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುತ್ತಿಲ್ಲ ಎಂದ ಮಾತ್ರಕ್ಕೆ ನಮ್ಮ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎಂದು ತೀರ್ಮಾನಿಸುವುದು ಸರಿಯಲ್ಲ' ಎಂದು ಶೋಯೆಬ್ ಖಾಸಗಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಅಲ್ಲದೆ ಮಾಧ್ಯಮಗಳ ವರದಿಯಿಂದ ಬೇಸರಗೊಂಡಿರುವ ಶೋಯೆಬ್, 'ನಾನು ಮತ್ತು ಸಾನಿಯಾ ಗಟ್ಟಿ ಸಂಬಂಧವನ್ನು ಹೊಂದಿದ್ದೇವೆ. ಆದರೆ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಸುಳ್ಳುಸುದ್ದಿಗಳಿಂದ ಬೇಸರವಾಗುತ್ತಿದೆ' ಎಂದು ಹೇಳಿದ್ದಾರೆ. ಅಂತೆಯೇ ತಮ್ಮ ಮತ್ತು ಹುಮೈಮಾ ನಡುವಿನ ಸಂಬಂಧ ಕುರಿತು ಮಾತನಾಡಿರುವ ಶೋಯೆಬ್, 'ಹುಮೈಮಾ ಮತ್ತು ನಾನು ಕೇವಲ ಸ್ನೇಹತರಷ್ಟೇ. ನಮ್ಮ ನಡುವೆ ಬೇರಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಸಾನಿಯಾ ಮತ್ತು ಶೋಯೆಬ್ ಮಲ್ಲಿಕ್ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಇಬ್ಬರು ಪರಸ್ಪರ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಭಾರತ ಮತ್ತು ಪಾಕಿಸ್ತಾನಿ ಮಾಧ್ಯಮಗಳ ವರದಿ ಮಾಡಿದ್ದವು. ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಪಾಕಿಸ್ತಾನದ ನಟಿ ಹುಮೈಮಾ ಮಲ್ಲಿಕ್ ಹಿಂದೆ ಸುತ್ತುತ್ತಿದ್ದು, ಅವರು ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ. ಇದರಿಂದ ಬೇಸರಗೊಂಡಿರುವ ಪತ್ನಿ ಸಾನಿಯಾ ಮಿರ್ಜಾ ಮಲ್ಲಿಕ್‌ರಿಂದ ದೂರವಾಗಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಖ್ಯಾತ ಚಿತ್ರ ಚಿರಂಜೀವಿ ಅವರ ಮಗ ರಾಮಚರಣ್ ತೇಜಾ ಅವರೊಂದಿಗೆ ಸುತ್ತಾಡುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು.

ಇದೀಗ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಪ್ರಯತ್ನಿಸಿರುವ ಸಾನಿಯಾ ಪತಿ ಶೋಯೆಬ್ ಮಲ್ಲಿಕ್ ತಮ್ಮ ಸಂಸಾರ ಚೆನ್ನಾಗಿಯೇ ಇದೆ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com