
ಪುಣೆ: ವಿಶ್ವಕಪ್ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಸಿಗದೆ ಆಯ್ಕೆಗಾರರ ನಿರ್ಲಕ್ಷ್ಯಕ್ಕೆ ಒಳಪಟಿದ್ದ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್, ಪ್ರಸಕ್ತ ರಣಜಿ ಟೂರ್ನಿಯಲ್ಲಿ ಮತ್ತೆ ಲಯ ಕಂಡುಕೊಂಡಿರುವ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿರುವ ಯುವರಾಜ್ ಸಿಂಗ್ ಪಂಜಾಬ್ ತಂಡಕ್ಕೆ ಇನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದಾರೆ.
ಸೋಮವಾರ ಪಂದ್ಯದ ಎರಡನೇ ದಿನದಾಟದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಪಂಬಾಬ್ ತಂಡ ದಿನದಾಟ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 370 ರನ್ ದಾಖಲಿಸಿದ್ದು, ಮೊದಲ ಇನಿಂಗ್ಸ್‌ನಲ್ಲಿ 160 ರನ್‌ಗಳ ಮುನ್ನಡೆ ದಾಖಲಿಸಿದೆ.
ಮಧ್ಯಮ ಕ್ರಮಾಂಕದಲ್ಲಿ ಪಂಜಾಬ್ ಇನಿಂಗ್ಸ್ ಕಟ್ಟಿದ ಯುವರಾಜ್ ಸಿಂಗ್ 160 ಎಸೆತ ಎದುರಿಸಿ 25 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 136 ರನ್ ದಾಖಲಿಸಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಯುವರಾಜ್ ಆಡಿರುವ 3 ಇನಿಂಗ್ಸ್‌ಗಳ ಪೈಕಿ 2 ಶತಕ ಹಾಗೂ 1 ಅರ್ಧಶತಕ ದಾಖಲಿಸಿದ್ದಾರೆ.
ಸ್ಕೋರ್ ವಿವರ
ಮಹಾರಾಷ್ಟ್ರ ಮೊದಲ ಇನಿಂಗ್ಸ್ 210
ಪಂಜಾಬ್ ಮೊದಲ ಇನಿಂಗ್ಸ್ 8 ವಿಕೆಟ್‌ಗೆ 370
(ಯುವರಾಜ್ ಸಿಂಗ್ 136, ಜೀವನ್ ಜೋತ್ ಸಿಂಗ್ 68, ಸಂಕ್ಲೇಜಾ 75ಕ್ಕೆ 3)
Advertisement