
ಸಿಡ್ನಿ: ಕಳೆದ ತಿಂಗಳು ಪಂದ್ಯದ ವೇಳೆ ಬೌನ್ಸರ್ ಎಸೆತಕ್ಕೆ ಬಲಿಯಾದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್‌ಗೆ ಗೌರ ನೀಡುವ ನಿಟ್ಟಿನಲ್ಲಿ, ವಿಶ್ವದ ಅತ್ಯಂತ ಎತ್ತರದ ಶಿಖರವಾಗಿರುವ ಗೌರಿಶಂಕರ(ಮೌಂಟ್ ಎವರೆಸ್ಟ್)ನ ತುತ್ತತುದಿಯಲ್ಲಿ ಹ್ಯೂಸ್ ಅವರು ಬಳಸಿದ್ದ ಬ್ಯಾಟನ್ನು ಇಡಲು ನಿರ್ಧರಿಸಲಾಗಿದೆ.
ನೇಪಾಳ ಕ್ರಿಕೆಟ್ ಸಂಸ್ಥೆ ಈ ಯೋಜನೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾಗೆ ತಿಳಿಸಿದೆ. ಅಲ್ಲದೆ ಹ್ಯೂಸ್ ನೆನಪಿನ ಹಿನ್ನೆಲೆಯಲ್ಲಿ ನೇಪಾಳದಲ್ಲಿ 63 ಓವರ್‌ಗಳ ಪಂದ್ಯವನ್ನಾಡಿಸಲು ನಿರ್ಧರಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ವ್ಯಾಲಿ ಎಡ್ವರ್ಡ್ ತಿಳಿಸಿದ್ದಾರೆ.
ಹ್ಯೂಸ್ ಬಳಸುತ್ತಿದ್ದ ಒಂದು ಬ್ಯಾಟ್ ನೀಡುವಂತೆ ನೇಪಾಳ ಕ್ರಿಕೆಟ್ ಸಂಸ್ಥೆ ಕೋರಿದೆ. ಜೊತೆಗೆ ಹ್ಯೂಸ್ ಬಳಸುತ್ತಿದ್ದ ಬಟ್ಟೆ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ಬಾವುಟವನ್ನು ಶಿಖರದ ತುದಿಯಲ್ಲಿಡಲೂ ಯೋಜನೆ ರೂಪಿಸಲಾಗಿದೆ.
Advertisement