3ನೇ ಟೆಸ್ಟ್: ಶತಕ ರಹಾನೆ, ಕೊಹ್ಲಿ

ಭಾರತ-ಆಸ್ಟ್ರೇಲಿಯ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ...
3ನೇ ಟೆಸ್ಟ್: ಶತಕ ರಹಾನೆ, ಕೊಹ್ಲಿ

ಮೆಲ್ಬರ್ನ್: ಭಾರತ-ಆಸ್ಟ್ರೇಲಿಯ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೌರವ ಮೊತ್ತ ದಾಖಲಿಸಿದೆ. ಭಾರತ ಪರ ಅಂಜಿಕ್ಯಾ ರಹಾನೆ 147 ರನ್ ಹಾಗೂ ವಿರಾಟ್ ಕೊಹ್ಲಿ 163 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯದ ಮೊದಲ ಇನಿಂಗ್ಸ್ನಲ್ಲಿ 530 ರನ್ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಪ್ರಥಮ ಇನ್ನಿಂಗ್ಸ್ನಲ್ಲಿ ಭಾರತವು ಮೂರನೇ ದಿನದಾಟದಲ್ಲಿ ಇದುವರೆಗೆ 7 ವಿಕೆಟ್ ನಷ್ಟಕ್ಕೆ 440 ರನ್ ಗಳಿಸಿದೆ ಹೋರಾಟ ಮುಂದುವರೆಸಿದೆ.

ಮೂರನೇ ದಿನದಾಟ ಆರಂಭಿಸಿದ ಮುರಳಿ ವಿಜಯ್ ಮತ್ತು ಪೂಜಾರ ವಿಕೆಟ್ಗಳು ಉರುಳಿದವು. ಅಂತಹ ಸಂದರ್ಭದಲ್ಲಿ ಟೀ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ಮತ್ತು ಅಂಜಿಕ್ಯಾ ರಹಾನೆ. ನಾಲ್ಕನೇ ವಿಕೆಟ್ಗೆ ಈ ಜೋಡಿ ಭರ್ಜರಿ 250 ರನ್ಗಳ ಜೊತೆಯಾಟ ನೀಡಿದರು.

ಅಂತಿಮವಾಗಿ ರಹಾನೆ 147 ರನ್ಗಳಿಗೆ ಔಟಾದರು. ಬಳಿಕ ಬಂದ ಕರ್ನಾಟಕದ ಕೆ.ಎಲ್ ರಾಹುಲ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕೇವಲ 3 ರನ್ ಗಳಿಸಿ ಔಟಾದರು.

ವಿರಾಟ್ ಕೊಹ್ಲಿ 163 ರನ್ ಗಳಿಸಿ ಭಾರತದ ರನ್ ಗತಿ ಏರಿಸಿದ್ದಾರೆ. ಕೊಹ್ಲಿಗೆ ಜತೆಯಾಗಿ ಮೊಹಮ್ಮದ್ ಶಮಿ 6 ರನ್ ಗಳಿಸಿ ಕಣದಲ್ಲಿದ್ದಾರೆ.

ಆಸ್ಟ್ರೇಲಿಯ ಪರ ಹ್ಯಾರಿಸ್ 4 ಪಡೆದರೆ ಲಿಯಾನ್ 2 ಮತ್ತು ವಾಟ್ಸನ್ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com