30 ವರ್ಷಗಳ ನಂತರ ಸನ್ನಿ ಪಶ್ಚಾತ್ತಾಪ!

ಹೌದು. ನಾನು ಹಾಗೆ ಮಾಡಬಾರದಿತ್ತು...! ಇಂಥದ್ದೊಂದು ಉದ್ಗಾರ ಹೊರಬಿದ್ದಿದ್ದು ಮಾಜಿ...
ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್
ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್
Updated on

ಮೆಲ್ಬರ್ನ್: ಹೌದು. ನಾನು ಹಾಗೆ ಮಾಡಬಾರದಿತ್ತು...! ಇಂಥದ್ದೊಂದು ಉದ್ಗಾರ ಹೊರಬಿದ್ದಿದ್ದು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರಿಂದ.

30 ವರ್ಷಗಳ ಹಿಂದೆ ಇದೇ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಪಂದ್ಯದ ವೇಳೆ ತಾವು ನಡೆದುಕೊಂಡಿದ್ದ ರೀತಿಯ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.

ಅದು 1981ರ ಕಥೆ. ಮೆಲ್ಬರ್ನ್ನ ಕ್ರೀಡಾಂಗಣದಲ್ಲಿ 3ನೇ ಟೆಸ್ಟ್ ಆಡುತ್ತಿದ್ದಾಗ ಸುನಿಲ್ ಅಂಪೈರ್ ಅವರ ನಿರ್ಧಾರದ ವಿರುದ್ಧ ಸಿಟ್ಟಿಗೆದ್ದಿದ್ದರು. ಬೇರೆ ವಿಧಿಯಿಲ್ಲ ಎನ್ನುವಂತೆ ಅಂಪೈರ್ ನಿರ್ಣಯವನ್ನು ಒಪ್ಪಿಕೊಂಡು, ಅವರು ಕ್ರೀಸ್ನಿಂದ ಆಚೆ ನಡೆದರು.

ಅಲ್ಲದೆ ಕ್ರೀಸ್ನ ಮತ್ತೊಂದು ತುದಿಯಲ್ಲಿದ್ದ ಚೇತನ್ ಚೌಹಾನ್ ಅವರ ಬಳಿ ಬಂದು, ಮೈದಾನದಿಂದ ಆಚೆ ನಡೆಯುವಂತೆ ಸೂಚಿಸಿ ಹೊರನಡೆದರು. ಈ ಘಟನೆಯನ್ನು, ಶನಿವಾರ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ನ 2ನೇ ದಿನದಾಟದ ವೇಳೆ ನೆನಪಿಸಿಕೊಂಡ ಅವರು, ತಾವು ಅಂದು ಮೈದಾನದಿಂದ ಆಚೆ ನಡೆಯಬಾರದಿತ್ತು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com