
ಚೆನ್ನೈ: ಅಖಿಲ ಭಾರತ ಮಹಿಳಾ ಬಾಲ್ ಬ್ಯಾಂಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ಪ್ರಥಮ ಬಹುಮಾನ ಅಲಂಕರಿಸಿದೆ.
ಕ್ವಾಟರ್‌ಫೈನಲ್‌ನಲ್ಲಿ ಕೇರಲದ ಕಲ್ಲಿಕೋಟೆಯನ್ನು ಸೋಲಿಸಿ 11ನೇ ಬಾರಿ ಲೀಗ್ ಹಂತಕ್ಕೆ ಅರ್ಹತೆಯನ್ನು ಪಡೆದ ಮಂಗಳೂರು ವಿವಿ ತಂಡ ಲೀಗ್ ಹಂತದಲ್ಲಿ ಚೆನ್ನೈನ ಅಣ್ಣ ವಿವಿಯನ್ನು 29-19, 29-19, ಆತಿಥೇಯ ಕ್ರೆಸೆಂಟ್ ತಂಡವನ್ನು 29-12, ಹಾಗೂ 29-18 ಹಾಗೂ ನಿರ್ಣಾಯಕ ಫೈನಲ್‌ನಲ್ಲಿ ಚೆನ್ನೈನ ಎಸ್.ಆರ್.ಎಮ್. ವಿವಿಯನ್ನು 29-10, 29-15 ನೇರ ಸೆಟ್‌ಗಳಿಂದ ಸೋಲಿಸಿ 2014-15ನೇ ಸಾಲಿನ ಅಂತರ್ ವಿವಿ ಚಾಂಪಿಯನ್‌ಶಿಪ್‌ನ್ನು ಪಡೆಯಿತು.
ಈ ಸಾಧನೆಗೆ ವಿವಿಯ ಕುಲಪತಿಗಳಾದ ಪ್ರೊ.ಕೆ.ಬೈರಪ್ಪ, ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಕಿಶೋರ್ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಶೃತಿ ಎ.ಆರ್‌ರವರಿಗೆ ಸರ್ವಾಂಗೀಣ ಪ್ರಶಸ್ತಿ ಲಭಿಸಿತು. ಮಂಗಳೂರು ವಿಶ್ವ ವಿದ್ಯಾಲಯ ತಂಡದಲ್ಲಿ ಎಂಟು ಮಂದಿ ಆಳ್ವಾಸ್‌ನ ಹಾಗೂ ಎರಡು ಮಂದಿ ಮಂಗಳೂರು ಕ್ಯಾಂಪಸ್ ತಂಡದಲ್ಲಿದ್ದರು.
Advertisement