ಬೆಂಗಳೂರಿಗೆ ಬಂದ 'ದಿ ಫಾಸ್ಟೆಸ್ಟ್ ಇಂಡಿಯನ್‌'

ಅಥ್ಲೀಟ್ಗಳು
ಅಥ್ಲೀಟ್ಗಳು

ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್ನಲ್ಲಿ ಹೊಸ ಅಲೆಯನ್ನು ಮೂಡಿಸಿ ಒಲಿಂಪಿಕ್ ಮಟ್ಟದ ಸ್ಪ್ರಿಂಟರ್ಗಳನ್ನು ತಯಾರಿಸಲು ಗೇಲ್ (ಇಂಡಿಯಾ) ಲಿಮಿಟೆಡ್ ಸಹಭಾಗಿತ್ವದಲ್ಲಿ ಗೇಲ್ -ದಿ ಫಾಸ್ಟೆಸ್ಟ್ ಇಂಡಿಯನ್ನ 10ನೇ ಹೆಜ್ಜೆಯನ್ನು ಸ್ಪೊಮೆಂಟ್ ಆರಂಭಿಸಿದೆ.

ಟ್ಯಾಲೆಂಟ್ ಹಂಟ್ ಕಾರ್ಯಕ್ರಮವು ಈಗಾಗಲೇ ಎಂಟು ನಗರಗಳನ್ನು ವ್ಯಾಪಿಸಿದ್ದು, ಚಂಡೀಗಢ, ಅಹಮದಾಬಾದ್, ಜೈಪುರ, ಗೋವಾ ಮತ್ತು ದೆಹಲಿಯಲ್ಲಿ ಅಸ್ತಿತ್ವ ಪಡೆದುಕೊಂಡಿದೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ದೇಶದ ಇನ್ನಷ್ಟು ನಗರಗಳಿಗೆ ಇದು ವ್ಯಾಪಿಸಲಿದೆ. ಈವರೆಗೆ 9 ನಗರಗಳ 3000 ವಿದ್ಯಾಥರ್ಿಗಳು ಭಾಗವಹಿಸಿದ್ದಾರೆ.

ಈ ಅಪರೂಪದ ಆರಂಭದ ಹೆಜ್ಜೆಯು ಮುಂದಿನ ಮಿಕಾ ಸಿಂಗ್ ಹುಡುಕಾಟದ್ದಾಗಿದ್ದು, 2020ರ ಟೋಕಿಯೋ ಒಲಿಂಪಿಕ್ಸ್ನ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಪದಕ ಗಳಿಸುವ ಉದ್ದೇಶವನ್ನು ಹೊಂದಿದೆ. ಅಥ್ಲೀಟ್ ದಂತಕಥೆ ಪದ್ಮಶ್ರೀ ಮಿಕಾ ಸಿಂಗ್ ಈ ವಾಷರ್ಿಕ ಕಾರ್ಯಕ್ರಮಕ್ಕೆ ಸಹಾಯಕರಾಗಿದ್ದಾರೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಸ್ಫಧರ್ಾಥರ್ಿಗಳ ಆಯ್ಕೆ ಮತ್ತು ತಯಾರಿಗೆ ನೆರವಾಗುತ್ತಾರೆ.

ಬೆಂಗಳೂರಿನ ಕೋರಮಂಗಲದ ಸೇಂಟ್ ಜಾನ್ಸ್ ಹಾಸ್ಪಿಟಲ್ ಗ್ರೌಂಡ್ಸ್ನಲ್ಲಿ ಟ್ಯಾಲೆಂಟ್ ಹಂಟ್ ಕಾರ್ಯಕ್ರಮವನ್ನು ಪ್ಯಾರಾಲಿಂಪಿಕ್ ಈಜುಗಾರ ಶರತ್ ಗಾಯಕ್ವಾಡ್ ಉದ್ಘಾಟಿಸಿದರು. ಅಭ್ಯಥರ್ಿಗಳು ಮತ್ತು ಗಣ್ಯರ ಸ್ವಾಗತ ಭಾಷಣದ ನಂತರ ಪ್ರತಿಭೆಯ ಭಾರಿ ಪ್ರದರ್ಶನವನ್ನು ಉತ್ಸಾಹಿ ವಿದ್ಯಾಥರ್ಿಗಳು ನಡೆಸುತ್ತಾರೆ ಮತ್ತು ಕೆಲವು ಓಟಗಾರರು ಮತ್ತು ಇತರ ಅಥ್ಲೀಟ್ಗಳು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಕುತೂಹಲದಿಂದ ಕಾದಿದ್ದಾರೆ.

ಭಾಗವಹಿಸಿದ ಪೋಷಕರು ಮತ್ತು ವಿದ್ಯಾಥರ್ಿಗಳಿಂದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಯೋಜನೆಯ ಕಲ್ಪನೆಯನ್ನು ಮೆಚ್ಚಿಕೊಳ್ಳಲಾಗಿದೆ. ಭಾರತದಲ್ಲಿ ಟ್ಯಾಲೆಂಟ್ಗೆ ಇದು ಸದ್ಯದ ಅಗತ್ಯ ಎಂದು ಪರಿಗಣಿಸಲಾಗಿದೆ. ಸ್ಪಧರ್ಾತ್ಮಕತೆಯ ಕೊರತೆಯಿಂದಾಗಿ ಇದು ಸದ್ಯದ ಅಗತ್ಯವಾಗಿದೆ. ಗೇಲ್- ದಿ ಫಾಸ್ಟೆಸ್ಟ್ ಇಂಡಿಯನ್ ಕಾರ್ಯಕ್ರಮದಲ್ಲಿ ಭಾರತವನ್ನು ಗೆಲುವಿನೆಡೆಗೆ ಕೊಂಡೊಯ್ಯುವ ಚಾಂಪಿಯನ್ಗಳನ್ನು ಗುರುತಿಸಿ, ತಯಾರಿಸಿ ಅಭಿವೃದ್ಧಿಪಡಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶರತ್ ಗಾಯಕ್ವಾಡ್, `ಈ ಟ್ಯಾಲೆಂಟ್ ಹಂಟ್ನಲ್ಲಿ ಭಾಗವಹಿಸುವುದಕ್ಕೆ ವಿದ್ಯಾಥರ್ಿಗಳ ಪ್ರೋತ್ಸಾಹವನ್ನು ನೋಡುವುದೇ ಒಂದು ಖುಷಿ. ಅವರು ಯಶಸ್ಸು ಸಿಗುವ ತನಕವೂ ಇದೇ ಉತ್ಸಾಹದಿಂದ ಸ್ಪಧರ್ಿಸಲಿ' ಎಂದರು.

ಮೂರು ತಿಂಗಳ ಅವಧಿಯಲ್ಲಿ ಗೇಲ್-ಟಿಎಫ್ಐ ಟ್ಯಾಲೆಂಟ್ ಹಂಟ್ ಕಾರ್ಯಕ್ರಮವನ್ನು 19 ನಗರಗಳ 3,000 ಶಾಲೆಗಳನ್ನು ತಲುಪಲಿದೆ. 12ರಿಂದ 14 ವರ್ಷದೊಳಗಿನ ಯುವಕರು, ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯಲಿದ್ದಾರೆ. ಪ್ರತಿಯೊಂದು ಕ್ಯಾಟಗರಿಯಲ್ಲೂ 19 ನಗರಗಳ ಪ್ರಮುಖ 8 ಅಭ್ಯಥರ್ಿಗಳು ಅವರ ಸಮಯಕ್ಕೆ ಅನುಗುಣವಾಗಿ ರಾಷ್ಟ್ರೀಯ ಫೈನಲ್ನಲ್ಲಿ ಬೆಂಗಳೂರಿನಲ್ಲಿ ಡಿಸೆಂಬರ್ 14, 2014ರಂದು ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.

ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಅಂತಿಮ ಸುತ್ತಿನಲ್ಲಿ ಗೆಲ್ಲುವವರು ಅವರ ಸ್ನಾತಕೋತ್ತರ ಪದವಿಯವರೆಗೆ ಸಂಪೂರ್ಣ ವಿದ್ಯಾಥರ್ಿವೇತನವನ್ನು ಪಡೆಯುತ್ತಾರೆ. ಇದರಿಂದ ಅವರ ಓಟಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ತರಬೇತುದಾರರಿಂದ ಅವರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com