
ಕೊಲ್ಕತ್ತಾ: ಶ್ರೀಲಂಕಾ - ಭಾರತ ನಡುವೆ ನಡೆದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ 251 ರನ್‌ಗಳಿಗೆ ಸರ್ವ ಪತನ ಕಂಡಿತು.
ಕೊಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 405 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 43 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 153 ರನ್‌ಗಳ ಹೀನಾಯ ಸೋಲು ಕಂಡಿತು.
ಶ್ರೀಲಂಕಾ ಪರ ಮ್ಯಾಥ್ಯೂಸ್ 2 ವಿಕೆಟ್ ಪಡೆದು 75 ರನ್ ಗಳಿಸಿದ್ದು ಬಿಟ್ಟರೆ ಮತ್ಯಾರು ಹೇಳಿಕೊಳ್ಳುವಂತಾ ಆಟವಾಡಲಿಲ್ಲ.
ಆರಂಭಿಕರಾಗಿ ಕಣಕ್ಕೀಳಿದ ಕುಶಾಲ್ ಜನಿತ್ ಪೆರೆರಾ ಶೂನ್ಯಕ್ಕೆ ಔಟಾದರು. ನಂತರ ತಿಲಕರತ್ನೆ ದಿಲ್ಶಾನ್ 34 ರನ್ ಗಳಿಸಿ ಪೆವಿಲಿಯನ್ ಸೇರಿದರು. ದಿನೇಶ್ ಚಾಂಡಿಮಾಲ್ 9 ರನ್ ಗಳಿಸಿದರೆ, ಮಹೇಲ ಜಯವರ್ಧನೆ 2 ರನ್ ಗಳಿಸಿ ಔಟಾದರು.
ಅಲ್ಪ ಮೊತ್ತಕ್ಕೆ ಔಟಾಗುತ್ತಿದ್ದ ಲಂಕಾವನ್ನು 250 ಗಡಿ ದಾಟಿಸಿದ್ದು, ಮಾಥ್ಯೂಸ್ 75 ರನ್ ಸಿಡಿಸಿದರೆ, ತಿರುಮನೆ 59 ರನ್ ಗಳಿಸಿದರು. ತಿಶರ ಪೆರೆರಾ 29, ಪ್ರಸನ್ನ 11 ರನ್ ಗಳಿಸಿ ಔಟಾದರು. ಬಳಿಕ ಬಂದ ಬಾಲಂಗೊಚ್ಚಿಗಳು 16 ರನ್ ಗಳಿಸುವಲ್ಲಿ 2 ವಿಕೆಟ್ ಕಳೆದುಕೊಂಡರು. ಇನ್ನು 7 ಓವರ್ ಗಳಿರುಂತೆಯೇ ಶ್ರೀಲಂಕಾ ಸರ್ವ ಪತನ ಕಂಡಿತು.
Advertisement