ಶ್ರೀಲಂಕಾಗೆ 405 ರನ್‌ಗಳ ಬೃಹತ್ ಸವಾಲು

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

ಕೊಲ್ಕತ್ತಾ: ಭಾರತ - ಶ್ರೀಲಂಕಾ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ 404 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಕೊಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಬೃಹತ್ ಮೊತ್ತ ಕಲೆ ಹಾಕಿದೆ. ಭಾರತ ಪರ ಮುಂಬೈನ ರೋಹಿತ್ ಶರ್ಮಾ ವೈಯಕ್ತಿಕ 264 ರನ್‌ಗಳ ನೇರವಿನೊಂದಿಗೆ ಭಾರತ 404 ರನ್‌ಗಳನ್ನು ಗಳಿಸಿದ್ದು, ಶ್ರೀಲಂಕಾ ಗೆಲ್ಲಲು 405 ರನ್‌ಗಳ ಬೃಹತ್ ಸವಾಲು ನೀಡಿದೆ.

ಆರಂಭಿಕ ಆಟಗಾರ ಅಜಿಂಕ್ಯ ರಹಾನೆನೊಂದಿಗೆ ಕಣಕ್ಕೀಳಿದ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದರು. 173 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಬದುಕಿನಲ್ಲಿ ವೈಯಕ್ತಿಕ 264 ರನ್‌ಗಳನ್ನು ಕಲೆ ಹಾಕಿ ದಾಖಲೆ ನಿರ್ಮಿಸಿದರು.

ಅಜಿಂಕ್ಯ ರಹಾನೆ 24 ಎಸೆತಗಳಲ್ಲಿ 28 ರನ್‌ಗಳಿಸಿ ಔಟಾದರು. ಬಳಿಕ ಬಂದ ಅಂಬಟ್ಟಿ ರಾಯುಡು ಕೇವಲ 8 ರನ್ ಗಳಿಸಿ ನಿರ್ಗಮಿಸಿದರು. ಇದರ ನಡುವೆಯೇ ರೋಹಿತ್ ಶರ್ಮಾ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದರು. ನಂತರ ಬಂದ ವಿರಾಟ್ ಕೊಹ್ಲಿ ನಾಯಕನ ಆಟ ಪ್ರದರ್ಶಿಸಿದರು.

ರೋಹಿತ್ ಶರ್ಮಾ ಜತೆಯಾದ ವಿರಾಟ್ ಕೊಹ್ಲಿ 66 ರನ್‌ಗಳನ್ನು ಗಳಿಸಿ ಔಟಾದರು. ಬಳಿಕ ಬಂದ ಸುರೇಶ್ ರೈನಾ ನಿರಾಸೆ ಮೂಡಿಸಿದರು. ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ರಾಬಿನ್ ಉತ್ತಪ್ಪ ರೋಹಿತ್‌ಗೆ ಸ್ಟ್ರೈಕ್ ಕೊಡುವ ಮೂಲಕ ದ್ವಿಶತಕಕ್ಕೆ ನೇರವಾದರು. ಉತ್ತಪ್ಪ ಅಜೇಯ 16 ರನ್ ಗಳಿಸಿದರು.

ಶ್ರೀಲಂಕಾ ಪರ ಮ್ಯಾಥ್ಯೂಸ್ 2 ವಿಕೆಟ್ ಪಡೆದರೆ, ಕುಲಶೇಖರ, ಶಮಿಂದಾ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com