ಕರ್ನಾಟಕದ ಮಾಳವಿಕಾಗೆ ಬೆಳ್ಳಿ

ಕರ್ನಾಟಕದ ವಿ.ಮಾಳವಿಕಾ ಮಹಿಳೆಯರ 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ...
ಮಹಿಳೆಯರ 50ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದ ಮಹಾರಾಷ್ಚ್ರದ ಆದಿತಿ ಧುಮತ್ಕರ್.
ಮಹಿಳೆಯರ 50ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದ ಮಹಾರಾಷ್ಚ್ರದ ಆದಿತಿ ಧುಮತ್ಕರ್.

ಕೊಲ್ಕತಾ: ಕರ್ನಾಟಕದ ವಿ.ಮಾಳವಿಕಾ ಬಂಗಾಳ ಅಮೆಚೂರ್ ಈಜು ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 68ನೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನ ಮಹಿಳೆಯರ 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಶನಿವಾರ ನಡೆದ 4ನೇ ದಿನದ ಸ್ಪರ್ಧೆಗಳಲ್ಲಿ ವಿ.ಮಾಳವಿಕಾ, ಒಟ್ಟು 17: 47.45 ಸೆಕೆಂಡುಗಳಲ್ಲಿ ಗುರಿ ಕ್ರಮಿಸುವ ಮೂಲಕ ಎರಡನೇ ಸ್ಥಾನದ ಗೌರವ ಪಡೆದರು. ಅನುಭವಿ ಈಜುಗಾರ್ತಿ, ಪೊಲೀಸ್ ತಂಡದ ರಿಚಾ ಮಿಶ್ರಾ 17:47.12 ಸೆಕೆಂಡುಗಳಲ್ಲಿ ವಿಜಯದ ಗೆರೆ ತಲುಪಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ತಮಿಳುನಾಡಿನ ಅಭಿಷಿಕ್ತಾ(18.17.89 ಸೆ.) ಕಂಚಿನ ಪದಕಕ್ಕೆ ತೃಪ್ತಿ ಹೊಂದಿದರು.

ಅದೇ ರೀತಿ ಮಹಿಳೆಯರ 4X100ಮೀ . ಫ್ರೀಸ್ಟೈಲ್ ರೀಲೇ ಸ್ಪರ್ಧೆಯಲ್ಲೂ ಕರ್ನಾಟಕ ತಂಡಕ್ಕೆ ಬೆಳ್ಳಿ ಪದಕ ಲಭಿಸಿತು. ಕರ್ನಾಟಕದ ಈಜುಗಾರ್ತಿಯರು 4:11:91 ಸೆ.ಗಳಲ್ಲಿ ಎರಡನೇಯವರಾಗಿ ಗುರಿ ತಲುಪಿದರು.

ಇಂದಿನ ಸ್ಪರ್ಧೆಗಳಲ್ಲಿ ಒಟ್ಟು ನಾಲ್ಕು ಹೊಸ ರಾಷ್ಟ್ರೀಯ ದಾಖಲೆಗಳು ನಿರ್ಮಾಣವಾದವು. ಪುರುಷರ ವಿಭಾಗದಲ್ಲಿ 50ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಎಸ್‌ಎಸ್‌ಸಿಬಿಯ ಪಿ.ಎಸ್.ಮಧು 27.02ಸೆ.ಗಳಲ್ಲಿ ಮೊದಲಿಗರಾಗಿ ವಿಜಯದ ಗೆರೆ ದಾಟುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ಮತ್ತೆರಡು ದಾಖಲೆಗಳು ಮಹಿಳೆಯರ ವಿಭಾಗದಲ್ಲಿ ಹೊರಹೊಮ್ಮಿದವು.

50ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಗುಜರಾತ್‌ನ ಮಾನಾ ಪಟೇಲ್(30.38ಸೆ.) ಮತ್ತು 4X100ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಈಜುಗಾರ್ತಿಯರು ರಾಷ್ಟ್ರೀಯ ದಾಖಲೆ ಬರೆದರು.

ಇನ್ನು ಡೈವಿಂಗ್ ವಿಭಾಗದಲ್ಲಿ ಪುರುಷರ 4X100ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಶರ್ಮಾ ನಾಯರ್, ಅರ್ಜುನ್ ಜೆ.ಪಿ., ಸಾಜನ್ ಪ್ರಕಾಶ್ ಮತ್ತು ಅರುಣ್ ಡಿಸೋಜಾ ಅವರಿದ್ದ ಕರ್ನಾಟಕ ತಂಡ ಹೊಸ ರಾಷ್ಟ್ರೀಯ ದಾಖಲೆ (3:29:32ಸೆ.) ಸಾಧನೆಯೊಂದಿಗೆ ಚಿನ್ನದ ಹಾರ ಕೊರಳಿಗೆ ಹಾಕಿಕೊಂಡಿತು.

ಮಹಿಳೆಯರ 4X100ಮೀ. ಫ್ರೀಸ್ಟೈಲ್ ರಿಲೇಯಲ್ಲಿ ದಾಮಿನಿ ಗೌಡ, ದೀಕ್ಷಾ ರಮೇಶ್, ಸಿಯಾ ಮಂಜೇಶ್ವರ್ ಮತ್ತು ವಿ.ಮಾಳವಿಕಾ ಅವರನ್ನೊಳಗೊಂಡ ಕರ್ನಾಟಕ ತಂಡದ ಈಜು ಪ್ರತಿಭೆಗಳು ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಈ ಮಧ್ಯೆ ಏಷ್ಯನ್ ಗೇಮ್ಸ್ ಕಂಚು ವಿಜೇತ ಸಂದೀಪ್ ಸೆಜ್ವಾಲ್, 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದರು. ಇದು ಅವರಿಗೆ 4ನೇ ಪ್ರಶಸ್ತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com