
ಬೆಂಗಳೂರು; ಭಾರತದ ಭರವಸೆಯ ಮಹಿಳಾ ಸ್ನೂಕರ್ ತಾರೆಗಳಾದ ವಿದ್ಯಾ ಪಿಳ್ಳೈ, ಚಿತ್ರಾ ಮಗಿಮೇರಾಜನ್, ಅಮೀ ಕಮಾನಿ, ನೀನಾ ಪ್ರವೀಣ್ ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನ ಗೆಲುವಿನ ಹಾದಿಯಲ್ಲಿ ಸಾಗಿದ್ದಾರೆ.
ಈ ಮೂಲಕ ಭಾರತದ ವನಿತೆಯರು ಉತ್ತಮ ಪ್ರದರ್ಶನ ಮುಂದುವರಿಸಿದ್ದು, ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ಗುರುವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ದಿನದ ಲೀಗ್ ಪಂದ್ಯಗಳಲ್ಲಿ ವಿದ್ಯಾ ಪಿಳ್ಳೈ, ತಮ್ಮ ಎದುರಾಳಿ ಬ್ರೆಜಿಲ್‌ನ ಪ್ರೆನಾಂಡಾ ಐರಿನೆಲ ವಿರುದ್ದ 3-0 (65-26, 100-14. 85-13) ಫ್ರೇಮ್‌ಗಳ ಸುಲಭ ಗೆಲುವು ದಾಖಲಿಸಿದರು.
ಪಂದ್ಯದ ಆರಂಭದಿಂದ ಅಂತ್ಯದವರೆಗೂ ಎದುರಾಳಿ ವಿರುದ್ಧ ಪ್ರಾಬಲ್ಯ ಮೆರೆದ ವಿದ್ಯಾ, ಪಂದ್ಯದ ಯಾವುದೇ ಫ್ರೇಮ್‌ನಲ್ಲೂ ಎದುರಾಳಿಯಿಂದ ತೀವ್ರವಾದ ಪೈಪೋಟಿ ಎದುರಿಸಲಿಲ್ಲ. ಮೊದಲ ಪ್ರತಿ ಫ್ರೇಮ್‌ನಲ್ಲೂ ಸೂಕ್ತವಾದ ಅಂತರ ಕಾಯ್ದುಕೊಂಡ ವಿದ್ಯಾ, ಸುಲಭವಾಗಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ತಮ್ಮ ಜಯದ ಲಯವನ್ನು ಮುಂದುವರಿಸಿದ್ದಾರೆ.
ಕರ್ನಾಟಕದ ಆಟಗಾರ್ತಿಯಾಗಿರುವ ಚಿತ್ರಾ ಮಗಿಮೈರಾಜನ್, ತಮ್ಮ ಎದುರಾಳಿ ಬ್ರಿಜಿಲ್‌ನ ಕಾರ್ಮೆಲಿಟಾ ಯುಮಿಟೊ ವಿರುದ್ಧ 3-1 (51-16, 49-70, 60-18, 76-08) ಫ್ರೇಮ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದರು. ಪಂದ್ಯದ ಮೊದಲ ಫ್ರೇಮ್‌ನಲ್ಲಿ ಮುನ್ನಡೆ ಸಾಧಿಸಿದ ಚಿತ್ರಾ, ಎರಡನೇ ಫ್ರೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ನಂತರದ ಎರಡು ಫ್ರೇಮ್‌ಗಳಲ್ಲಿ ಎಚ್ಚರಿಕೆಯ ಆಟದಿಂದ ಗೆಲುವು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ನೀನಾ ಪ್ರವೀಣ್, ಬ್ರೆಜಿಲ್‌ನ ಎದುರಾಳಿ ಕ್ಲೌಡಿಯಾ ಜಾರ್ಡೊ ಕೊರ್ಡಿರೊ ವಿರುದ್ಧ 3-1(51-16, 49-70, 60-18, 76-08) ಫ್ರೇಮ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದರು.
ಪಂದ್ಯದ ಮೊದಲ ಫ್ರೇಮ್‌ನಲ್ಲಿ ಮುನ್ನಡೆ ಸಾಧಿಸಿದ ಚಿತ್ರಾ, ಎರಡನೇ ಫ್ರೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ನಂತರದ ಎರಡು ಫ್ರೇಮ್‌ಗಳಲ್ಲಿ ಎಚ್ಚರಿಕೆಯ ಆಟದಿಂದ ಗೆಲುವು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ನೀನಾ ಪ್ರವೀಣ್, ಬ್ರೆಜಿಲ್‌ನ ಎದುರಾಳಿ ಕ್ಲೌಡಿಯಾ ಜಾರ್ಡೊ ಕೊರ್ಡಿರೊ ವಿರುದ್ಧ 3-1 ಫ್ರೇಮ್‌ಗಳ ಅಂತರದಲ್ಲಿ ಗೆದ್ದುಕೊಂಡರು. ದಿನದ ಮೊದಲನೇ ಅವಧಿಯಲ್ಲಿ ನಡೆದ ಪಂದ್ಯದಲ್ಲಿ ಅಮೀ ಕಮಾನಿ ಅತ್ಯುತ್ತಮ ಪ್ರದರ್ಶನ ನೀಡಿದರು. ತಮ್ಮ ಎದುರಾಳಿ ಬ್ರೆಜಿಲ್‌ನ ಅಲೆಕ್ಲಾಂಡ್ರಾ ಟೆರಾಮೊಟೊ ಮಿಯುಕಿ ವಿರುದ್ಧ 3-0 ಫ್ರೇಮ್‌ಗಳ ಗೆಲುವು ದಾಖಲಿಸಿದರು.
ಪಂದ್ಯದುದ್ದಕ್ಕೂ ತಮ್ಮ ಲಯ ಕಾಯ್ದುಕೊಂಡ ಅಮೀ ಕ್ರಮವಾಗಿ 74-10, 44-35 ಹಾಗೂ 67-27 ಫ್ರೇಮ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದರು. ಮೊದಲ ಹಾಗೂ ಮೂರನೇ ಫ್ರೇಮ್‌ನಲ್ಲಿ ಉತ್ತಮ ಅಂತರ ಕಾಯ್ದುಕೊಂಡ ಅಮೀ, ಎರಡನೇ ಫ್ರೇಮ್‌ನಲ್ಲಿ ಸ್ವಲ್ಪ ಪ್ರತಿರೋಧ ಎದುರಿಸಬೇಕಾಯಿತು. ಆದರೆ ತಮ್ಮ ತಾಳ್ಮೆ ಕಳೆದುಕೊಳ್ಳದೇ ಆಡದಿ ಅಮೀ ಗೆಲುವಿನ ನಗೆ ಬೀರಿದರು.
ಪಂದ್ಯಾವಳಿಗೆ ಹೊಂದಿಕೊಳ್ಳುತ್ತಿದ್ದೇನೆ. ಆರಂಭಿಕ ಲೀಗ್ ಪಂದ್ಯಗಳು ಅಭ್ಯಾಸ ಪಂದ್ಯಗಳಿದ್ದಂತೆ. ಟೂರ್ನಿಯಲ್ಲಿ ಪ್ರಮುಖ ಆಟಗಾರರನ್ನು ಎದುರಿಸಲು ಎದುರು ನೋಡುತ್ತಿದ್ದೇನೆ. ಪ್ರತಿ ಪಂದ್ಯವನ್ನು ಒಂದೊಂದಾಗಿ ಸ್ವೀಕರಿಸುತ್ತೇನೆ. ತವರಿನಲ್ಲಿ ಚಾಂಪಿಯನ್‌ಶಿಪ್ ನಡೆಯುತ್ತಿರುವುದರಿಂದ ನಮ್ಮವರ ಬೆಂಬಲ ಸಿಗುತ್ತಿರುವುದು ಖುಷಿ ನೀಡಿದೆ.
ವಿದ್ಯಾ ಪಿಳ್ಳೈ,
ಭಾರತದ ಸ್ನೂಕರ್ ಆಟಗಾರ್ತಿ
ಚಾವ್ಲಾ ಕಮಾಲ್
ಭಾರತದ ಪ್ರಮುಖ ಸ್ನೂಕರ್ ಆಟಗಾರರಲ್ಲಿ ಒಬ್ಬರಾದ ಕಮಲ್ ಚಾವ್ಲಾ ತಮ್ಮ ಎರಡನೇ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಮೊದಲ ಪಂದ್ಯದಲ್ಲಿ ಸ್ವಯಂಕೃತ ಅಪರಾಧದಿಂದ ಕಠಿಣ ಪರಿಸ್ಥಿತಿ ಎದುರಿಸಿದ್ದ ಕಮಲ್ ಚಾವ್ಲಾ, ಗುರುವಾರದ ತಮ್ಮ ಎರಡನೇ ಪಂದ್ಯದಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಯುಎಇಯ ಆಟಗಾರ ಮರ್ವಾನ್ ಅಲ್ಫಾಲಸಿ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಚಾವ್ಲಾ, ಅದ್ಭುತ ಪ್ರದರ್ಶನ ನೀಡಿದರು. ಈ ಮೂಲಕ 4-1 ಫ್ರೇಮ್‌ಗಳ ಸುಲಭ ಗೆಲುವು ದಾಖಲಿಸಿದರು. ಆರಂಭದಲ್ಲೇ ಎದುರಾಳಿಗೆ ಅಂಕ ಗಳಿಸಲು ಅವಕಾಶ ನೀಡದ ಕಮಲ್, ಪ್ರಾರಂಭದ ಎರಡು ಫ್ರೇಮ್‌ಗಳಲ್ಲಿ ತಲಾ 97-00, 97-00 ಭಾರಿ ಅಂತರದ ಮುನ್ನಡೆ ಪಡೆದರು.
ನಂತರ ಮೂರನೇ ಫ್ರೇಮ್‌ನಲ್ಲಿ 76-41 ಅಂತರ ಕಾಯ್ದುಕೊಂಡು ಗೆಲುವಿನ ಸನಿಹಕ್ಕೆ ಬಂದರು. ಈ ವೇಳೆ ನಾಲ್ಕನೇ ಫ್ರೇಮ್‌ನಲ್ಲಿ ಎಚ್ಚೆತ್ತ ಎದುರಾಳಿ ಆಟಗಾರ 63-23 ಅಂತರದಲ್ಲಿ ಮುನ್ನಡೆ ಸಾಧಿಸಿ, ಕಮಲ್‌ಗೆ ಸವಾಲು ನೀಡಿದರು. ಆದರೆ ನಿಯಂತ್ರಣ ಕೈ ತಪ್ಪುವ ಮುನ್ನ ಎಚ್ಚೆತ್ತ ಕಮಲ್ ಐದನೇ ಫ್ರೇಮ್ ಅನ್ನು 77-01 ಅಂತರದಲ್ಲಿ ಗೆದ್ದುಕೊಂಡರು.
ಪಂಕಜ್‌ಗೆ ಸುಲಭ ತುತ್ತು: ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದೇ ಬಿಂಬಿತವಾಗಿರುವ ವಿಶ್ವ ಚಾಂಪಿಯನ್ ಕರ್ನಾಟಕದ ಪ್ರತಿಭೆ ಪಂಕಜ್ ಅಡ್ವಾಣಿ ತಮ್ಮ ಎರಡನೇ ಪಂದ್ಯದಲ್ಲೂ ಗೆಲುವು ದಾಖಲಿಸಿ, ಜಯದ ಯಾತ್ರೆ ಮುಂದುವರಿಸಿದ್ದಾರೆ. ಹಾಂಕಾಂಗ್ ಆಟಗಾರ ಚಿ ವೈ ಔ ವಿರುದ್ಧ ಅಬ್ಬರಿಸಿದ ಪಂಕಜ್, 4-0 ಫ್ರೇಮ್‌ಗಳ ಅಂತರದ ಗೆಲುವು ದಾಖಲಿಸಿದರು. ಪಂದ್ಯದ ಯಾವುದೇ ಹಂತದಲ್ಲೂ ಎದುರಾಳಿಯಿಂದ ಪ್ರತಿರೋಧ ಎದುರಿಸದ ಪಂಕಜ್, 99-24, 67-39, 65-0 ಹಾಗೂ 84-45 ಅಂಕಗಳ ಅಂತರದಿಂದ ಅರ್ಹ ಗೆಲುವು ದಾಖಲಿಸಿದರು.
ಟಲಾಟ್‌ಗೆ ಜಯ
ಒಂದೇ ಬ್ರೇಕ್‌ನಲ್ಲಿ 75 ಅಂಕಗಳಲ್ಲಿ ದಾಖಲಿಸುವ ಮೂಲಕ ವಿಶ್ವ ದಾಖಲೆಯನ್ನು ಹೊಂದಿರುವ ಈಜಿಪ್ಟ್ ಪ್ರಮುಖ ಆಟಗಾರ ವೇಲ್ ಟಲಾಟ್, ಎರಡನೇ ಸುತ್ತಿನಲ್ಲಿ ಸುಲಭ ಗೆಲುವು ದಾಖಲಿಸಿದ್ದಾರೆ.
ಸ್ವೀಡನ್‌ನ ಎದುರಾಳಿ ಜಿನ್ ಜೊಹಾನ್‌ಸನ್ ವಿರುದ್ಧ ಅತ್ಯುತ್ತಮ ಪ್ರದರ್ಶ ನೀಡಿದ ಟಲಾಟ್, 4-1 ಫ್ರೇಮ್‌ಗಳ ಗೆಲುವು ದಾಖಲಿಸಿದರು. ಮೋದಲ ಫ್ರೇಮ್‌ನಲ್ಲಿ 85-47 ಅಂತರದ ಮುನ್ನಡೆಯೊಂದಿಗೆ ಶುಭಾರಂಭ ಮಾಡಿದ ವೇಲ್, ನಂತರದ ಎರಡು ಫ್ರೇಮ್‌ಗಳಲ್ಲಿ 62-01, ಮತ್ತು 56-19 ಮುನ್ನಡೆಯೊಂದಿಗೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಇನ್ನು ನಾಲ್ಕನೇ ಫ್ರೇಮ್‌ನಲ್ಲಿ 22-58 ಹಿನ್ನಡೆ ಅನುಭವಿಸಿದರೂ, ಐದನೇ ಫ್ರೇಮ್‌ನಲ್ಲಿ 63-49 ಅಂಕಗಳ ಅಂತರದ ಮುನ್ನಡೆಯೊಂದಿಗೆ ಗೆಲುವು ದಾಖಲಿಸಿದರು. ಇತರೆ ಪಂದ್ಯದಲ್ಲಿ ಇರಾನ್‌ನ ಅಮೀರ್ ಸರ್ಕೋಶ್, ಕೆನಾಡಾದ ಆ್ಯಲನ್ ವೈಟ್ ಫೀಲ್ಡ್ ವಿರುದ್ಧ 4-1 ಫ್ರೇಮ್‌ಗಳ ಗೆಲುವು ದಾಖಲಿಸಿದರು. ಜಪಾನ್‌ನ ಟೆಟ್ಸುಯಾ ಕುವಾಟ, ಕ್ಯಾಡರ್ ಮೊಹಮದ್ ವಿರುದ್ಧ 4-1 ಅಂತರದ ಜಯ ಸಾಧಿಸಿದರು.
Advertisement