ಐಪಿಎಲ್ ರೆಫರಿ, ಅಂಪೈರ್‍ಗಳಿಗೆ ಕಾರ್ಯಾಗಾರ

ಐಪಿಎಲ್ 8ನೇ ಆವೃತ್ತಿಯಲ್ಲಿ ಭಾಗವಹಿಸಲಿರುವ ಅಂಪೈರ್ ಮತ್ತು ರೆಫರಿಗಳಿಗೆ ಏಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಕಾಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಐಪಿಎಲ್ 8ನೇ ಆವೃತ್ತಿಯಲ್ಲಿ ಭಾಗವಹಿಸಲಿರುವ ಅಂಪೈರ್ ಮತ್ತು ರೆಫರಿಗಳಿಗೆ ಏಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಕಾಲ ಕಾರ್ಯಾಗಾರ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಐಸಿಸಿ ಉನ್ನತ ಅಂಪೈರ್ ಸಮಿತಿಯ ಮಾಜಿ ಸದಸ್ಯರು, ಐದು ಬಾರಿ ಐಸಿಸಿ ವರ್ಷದ ಅಂಪೈರ್ ಪ್ರಶಸ್ತಿ ವಿಜೇತ ಹಾಗೂ ಪ್ರಸ್ತುತ ಐಸಿಸಿ ಅಂಪೈರ್‍ಗಳ ಪ್ರದರ್ಶನ ಮತ್ತು ತರಬೇತಿ ನಿರ್ವಾಹಕರಾಗಿರುವ ಸೈಮನ್ ಟೌಫೆಲ್ ಈ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.

ಬಿಸಿಸಿಐನ ಪಂದ್ಯದ ಅ„ಕಾರಿಗಳ ಅಭಿವೃದ್ದಿ ಕಾರ್ಯಕ್ರಮದ ಅಡಿಯಲ್ಲಿ ಈ ಕಾರ್ಯಾಗಾರವನ್ನು ಸತತ ಮೂರನೇ ವರ್ಷ ನಡೆಸಲಾಗುತ್ತಿದೆ. ಈ ಬಾರಿ ಅಂಪೈರ್ ಹಾಗೂ ರೆಫರಿ ಸೇರಿದಂತೆ ಐಪಿಎಲ್‍ನಲ್ಲಿ ಪಾಲ್ಗೊಳ್ಳಲಿರುವ ಒಟ್ಟು 26 ಮಂದಿಯೂ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಪೈಕಿ 13 ಅಂಪೈರ್‍ಗಳು ಮತ್ತು 4 ರೆಫರಿಗಳು ಭಾರತದವರಾಗಿದ್ದು, ಕಾರ್ಯಾಗಾರದಲ್ಲಿ ಉಡುಗೆ ನಿಯಮಾವಳಿ, ಮೈದಾನದಲ್ಲಿ ಆಟಗಾರರ ನಡವಳಿಕೆ ಹಾಗೂ ಒಟ್ಟಾರೆ ಆಟದ ವಾತಾವರಣದ ಕುರಿತು ತರಬೇತಿ ನೀಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com