
ಮುಂಬೈ: ಈ ಬಾರಿಯ ಐಪಿಎಲ್‍ನಲ್ಲಿ ನತದೃಷ್ಟ ತಂಡವೆಂದೇ ಬಿಂಬಿತವಾಗಿರುವ ಮುಂಬೈ ಇಂಡಿಯನ್ಸ್ ತಂಡ, ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದಟಛಿದ ಪಂದ್ಯದಲ್ಲಿಯೂ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ್ದ ಮುಂಬೈ, 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಈ ಸ್ಪರ್ಧಾತ್ಮಕ ಮೊತ್ತ ಚೆನ್ನೈ ಪಾಲಿಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಯಿತು.
ಎಂದಿನ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಚೆನ್ನೈ ತಂಡ, 16.4 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 189ರನ್ ದಾಖಲಿಸಿ, 6 ವಿಕೆಟ್‍ಗಳ ಜಯ ಗಳಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ಇನಿಂಗ್ಸ್ ಆರಂಭದಲ್ಲೇ ಅಪಾಯದ ಸುಳಿಗೆ ಸಿಲುಕಿತು. ಆರಂಭಿಕರಾದ ಲೆಂಡ್ಲ್ ಸಿಮನ್ಸ್, ಪಾರ್ಥೀವ್ ಪಟೇಲ್ ಹಾಗೂ ಮೂರನೇ ಕ್ರಮಾಂಕದ ಕೋರಿ ಆ್ಯಂಡರ್ಸನ್ ಬೇಗನೆ ಪೆವಿಲಿಯನ್‍ಗೆ ಸೇರಿದರು.
ಕೇವಲ 12 ರನ್ ಮೊತ್ತಕ್ಕೆ ಮುಂಬೈ ತಂಡ, ಮೂರು ಪ್ರಮುಖ ವಿಕೆಟ್ ಕಳೆದುಕೊಂಡಿದ್ದು ಆತಂಕ ತಂದಿತ್ತು. ಆದರೆ, 4ನೇ ವಿಕೆಟ್‍ಗೆ ಜೊತೆಯಾದ ರೋಹಿತ್ ಶರ್ಮಾ ಹಾಗೂ ಹರ್ಭಜನ್ ಸಿಂಗ್ ತಂಡವನ್ನು ಈ ಆರಂಭಿಕ ಆಘಾತದಿಂದ ಪಾರು ಮಾಡಿತು. ಒಟ್ಟು 45 ರನ್ ಗಳ ಜೊತೆಯಾಟವಾಡಿದ ಇವರು, ತಂಡದ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದರು.
ತಂಡದ ಮೊತ್ತ 57 ರನ್ ಆಗಿದ್ದಾಗ ಭಜ್ಜಿ ನಿರ್ಗಮಿಸಿದರು. ಇದಾದ ನಂತರ, ಕ್ರೀಸ್‍ಗೆ ಆಗಮಿಸಿದ ಕೀರನ್ ಪೊಲಾರ್ಡ್ 5ನೇ ವಿಕೆಟ್‍ಗೆ ಭರ್ಜರಿ 75 ರನ್‍ಗಳ ಜೊತೆಯಾಟವಾಡಿ ಇನಿಂಗ್ಸ್ ಗೆ
ಶಕ್ತಿ ತುಂಬಿದರು. ಅದರಲ್ಲೂ 30 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸೇರಿದಂತೆ 64 ರನ್ ಚಚ್ಚಿದ ಪೊಲಾರ್ಡ್, ತಂಡ ಅನುಭವಿಸಿದ್ದ ಆರಂಭಿಕ ಆಘಾತವನ್ನು ಮರೆಯುವಂತೆ ಮಾಡಿದರು.
ಇವರ ಬ್ಯಾಟಿಂಗ್ ಆರ್ಭಟದಿಂದ 16 ಓವರ್ ಮುಗಿಯುವಷ್ಟರಲ್ಲಿ 130 ರನ್ ಗಡಿ ದಾಟಿತ್ತು. ಈ ಹಂತದಲ್ಲಿ, ಅರ್ಧಶತಕ ಗಳಿಸಿ ಆಡುತ್ತಿದ್ದ ರೋಹಿತ್ ಅವರ ವಿಕೆಟ್ ಪಡೆದ ನೆಹ್ರಾ ಇವರಿಬ್ಬರ ಆರ್ಭಟದ ಜೊತೆಯಾಟವನ್ನು ಮುರಿದರು. ರೋಹಿತ್ ನಂತರ, ಕ್ರೀಸ್‍ಗೆ ಕಾಲಿಟ್ಟಿದ್ದು ಆಂಬಟಿ ರಾಯುಡು. ಆಗಮಿಸುತ್ತಿದ್ದಂತೆ ಅಬ್ಬರದ ಆಟಕ್ಕೆ ಮುಂದಾದ ಅವರು, 16 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸೇರಿದಂತೆ 29 ರನ್ ಬಾರಿಸಿದರು. ಆದರೆ, ಇನಿಂಗ್ಸ್‍ನ ಕೊನೆಯ ಓವರ್‍ನಲ್ಲಿ ಅವರು ಬ್ರಾವೊ ಬೌಲಿಂಗ್‍ಗೆ ಬಲಿಯಾದರು. ರಾಯುಡು ನಂತರ, ಕ್ರೀಸ್‍ನಲ್ಲಿದ್ದ ಪೊಲಾರ್ಡ್‍ಗೆ ಜೊತೆಯಾಗಿದ್ದು ಜಗದೀಶ ಸುಚಿತ್. ಅಷ್ಟರಲ್ಲಿ ಪೊಲಾರ್ಡ್ ಅವರು ವಿಕೆಟ್ ಒಪ್ಪಿಸಿ ಹೊರನಡೆದರು.
ಕೊನೆಯ ಓವರ್‍ನ ಐದನೇ ಎಸೆತದಲ್ಲಿ ಬ್ರಾವೊ ಅವರಿಗೆ ವಿಕೆಟ್ ಒಪ್ಪಿಸುವ ಮೂಲಕ ಪೊಲಾರ್ಡ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‍ಗೆ ಅಂತ್ಯ ಹಾಡಿದರು. ಇನ್ನು, ಕೊನೆಯ ಎಸೆತ ಎದುರಿಸಲು ಬಂದ ವಿನಯ್ ಕುಮಾರ್ ಯಾವ ರನ್ ಗಳಿಸಲಿಲ್ಲ. ಅಂತಿಮವಾಗಿ, ಮುಂಬೈ ತಂಡ 20 ಓವರ್‍ಗಳಲ್ಲಿ 183 ರನ್ ಗಳಿಸಿತು.
ಶತಕದ ಜೊತೆಯಾಟ
ಮುಂಬೈ ನೀಡಿದ್ದ ಸ್ಪರ್ಧಾತ್ಮಕ ಮೊತ್ತದ ಸವಾಲನ್ನು ಬೆನ್ನಟ್ಟಲು ಕ್ರೀಸ್‍ಗೆ ಇಳಿದಿದ್ದ ಚೆನ್ನೈ ತಂಡದ ಆರಂಬಿsಕರಾದ ಡ್ವೈನ್ ಸ್ಮಿತ್ ಹಾಗೂ ಬ್ರೆಂಡಾನ್ ಮೆಕಲಂ, ಶತಕದ ಜೊತೆಯಾಟವಾಡುವ ಮೂಲಕ ಇನಿಂಗ್ಸ್ ಭದ್ರ ಅಡಿಪಾಯ ಹಾಕಿದರು. ಇನಿಂಗ್ಸ್ ನ ಆರಂಭದ 7.2 ಓವರ್‍ಗಳಲ್ಲಿ ಸರಾಸರಿ 14.66 ರನ್ ವೇಗದಲ್ಲಿ ಮೊದಲ ವಿಕೆಟ್‍ಗೆ ಭರ್ಜರಿ 109 ರನ್ ಪೇರಿಸಿದ ಈ ಇಬ್ಬರೂ ತಂಡದ ಗೆಲವಿಗೆ ಆಗಲೇ ಶ್ರೀಕಾರ ಹಾಕಿದರು.
ಕ್ರೀಸ್‍ನಲ್ಲಿ ಇವರಿಬ್ಬರ ಆರ್ಭಟವನ್ನು ಮುರಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದು ಹರ್ಭಜನ್ ಸಿಂಗ್. ಇನಿಂಗ್ಸ್ ನ 8ನೇ ಓವರ್‍ನಲ್ಲಿ ಮೆಕಲಂ ಅವರ ವಿಕೆಟ್ ಪಡೆದಲ್ಲದೇ, ಅದೇ ಓವರ್‍ನಲ್ಲಿ ಸ್ಮಿತ್ ಅವರನ್ನೂ ಪೆವಿಲಿಯನ್‍ಗೆ ಅಟ್ಟಿದರು. ಆಗ ಕ್ರೀಸ್‍ಗೆ ಕಾಲಿಟ್ಟಿದ್ದು ಸುರೇಶ್ ರೈನಾ. ಆದರೆ, ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ. ಇಲ್ಲಿಂದ ಮುಂದಕ್ಕೆ ನಿಗದಿತ ಅಂತರದಲ್ಲಿ ಚೆನ್ನೈ ತಂಡ ಮತ್ತೆರಡು ವಿಕೆಟ್‍ಗಳನ್ನು ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಡು ಪ್ಲೆಸಿಸ್, ನಾಯಕ ಧೋನಿ ಆದರೆ, ಕ್ರೀಸ್‍ನಲ್ಲಿ ಗಟ್ಟಿಯಾಗಿ ಬೇರೂರಿದ ರೈನಾ ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದರಲ್ಲದೆ, 29 ಎಸೆತಗಳಲ್ಲಿ 4 ಬೌಂಡರಿ, ಸಿಕ್ಸರ್ ಸೇರಿದಂತೆ 43 ರನ್ ಗಳಿಸುವ ಮೂಲಕ ತಂಡವನ್ನು ಯಶಸ್ವಿಯಾಗಿ ಗೆಲವಿನ ದಡ ಸೇರಿದರು. ಚೆನ್ನೈ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿ, 3 ವಿಕೆಟ್ ಗಳಿಸಿದ್ದ ಮಧ್ಯಮ ವೇಗಿ ಆಶೀಶ್ ನೆಹ್ರಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರ್‍ಗಳಲ್ಲಿ 183ಕ್ಕೆ 7
ಲೆಂಡ್ಲ್ ಸೈಮನ್ಸ್ ಸಿ ಡು ಪ್ಲೆಸಿಸ್ ಬಿ ಈಶ್ವರ್ ಪಾಂಡೆ 5 (13 ಎಸೆತ, 1 ಬೌಂಡರಿ), ಪಾರ್ಥೀವ್ ಪಟೇಲ್ ಎಲ್‍ಬಿ ನೆಹ್ರಾ 0 (1 ಎಸೆತ), ಕೋರಿ ಆ್ಯಂಡರ್ಸನ್ ಸಿ ಡು ಪ್ಲೆಸಿಸ್ ಬಿ ನೆಹ್ರಾ 4 (7 ಎಸೆತ, 1 ಬೌಂಡರಿ), ರೋಹಿತ್ ಶರ್ಮಾ ಸಿ ಬ್ರಾವೊ ಬಿ ನೆಹ್ರಾ 50 (31 ಎಸೆತ, 5 ಬೌಂಡರಿ, 1 ಸಿಕ್ಸರ್), ಹರ್ಭಜನ್ ಸಿಂಗ್ ಸಿ ಜಡೇಜಾ ಬಿ ಮೋಹಿತ್ ಶರ್ಮಾ 24 (21 ಎಸೆತ, 2 ಬೌಂಡರಿ, 1 ಸಿಕ್ಸರ್), ಕೀರನ್ ಪೊಲಾರ್ಡ್ ಸಿ ಸ್ಮಿತ್ ಬಿ ಬ್ರಾವೊ 64 (30 ಎಸೆತ, 4 ಬೌಂಡರಿ, 5 ಸಿಕ್ಸರ್), ಆಂಬಟಿ ರಾಯುಡು ಸಿ ಜಡೇಜಾ ಬಿ ಬ್ರಾವೊ 29 (16 ಎಸೆತ, 1 ಬೌಂಡರಿ, 3 ಸಿಕ್ಸರ್), ಸುಚಿತ್ ಅಜೇಯ 0 (0), ವಿನಯ್ ಕುಮಾರ್ 0 (1 ಎಸೆತ). ಇತರೆ (ಬೈ 2, ಲೆಗ್‍ಬೈ 1, ವೈಡ್ 4) 7.
ವಿಕೆಟ್ ಪತನ: 1--1, 2--6, 3--12, 4--57, 5--132, 6--181, 7--181.
ಬೌಲಿಂಗ್ ವಿವರ: ಆಶೀಶ್ ನೆಹ್ರಾ 4-0-23-3,
ಈಶ್ವರ್ ಪಾಂಡೆ 3-1-22-1, ಮೋಹಿತ್
ಶರ್ಮಾ 4-0-43-1, ರವೀಂದ್ರ ಜಡೇಜಾ
4-0-49-0, ರವಿಚಂದ್ರನ್ ಅಶ್ವಿನ್
1-0-13-0, ಡ್ವೈನ್ ಬ್ರಾವೊ 4-0-30-2.
ಚೆನ್ನೈ ಸೂಪರ್ ಕಿಂಗ್ಸ್ 16.4 ಓವರ್‍ಗಳಲ್ಲಿ 189ಕ್ಕೆ 4
ಡ್ವೈನ್ ಸ್ಮಿತ್ ಸಿ ಶರ್ಮಾ ಬಿ ಹರ್ಭಜನ್ ಸಿಂಗ್ 62 (30 ಎಸೆತ, 8 ಬೌಂಡರಿ, 4 ಸಿಕ್ಸರ್), ಬ್ರೆಂಡಾನ್ ಮೆಕಲಂ ಸಿ ವಿನಯï ಕುಮಾರ್ ಬಿ ಹರ್ಭಜನ್ ಸಿಂಗ್ 46 (20 ಎಸೆತ, 6 ಬೌಂಡರಿ, 2 ಸಿಕ್ಸರ್), ಸುರೇಶ್ ರೈನಾ ಅಜೇಯ 43 (29 ಎಸೆತ, 4 ಬೌಂಡರಿ, 2 ಸಿಕ್ಸರ್), ಡು ಪ್ಲೆಸಿಸ್ ಬಿ ಮಾಲಿಂಗ 11 (13 ಎಸೆತ, 2 ಬೌಂಡರಿ), ಧೋನಿ ಸಿ ಆ್ಯಂಡ್ ಬಿ ಪೊಲಾರ್ಡ್ 3 (6 ಎಸೆತ), ಡ್ವೈನ್ ಬ್ರಾವೊ ಅಜೇಯ 13 (5 ಎಸೆತ, 1 ಬೌಂಡರಿ, 1 ಸಿಕ್ಸರ್).
ಇತರೆ (ವೈಡ್ 8, ನೋಬಾಲ್ 8) 11.
ವಿಕೆಟ್ ಪತನ: 1--109, 2---115, 3---144, 4--166.
ಬೌಲಿಂಗ್ ವಿವರ
ಪವನ್ ಸುಯಲ್ 3-0-28-0, ಮಾಲಿಂಗ 4-0-40-1, ಸುಚಿತ್ 2-0-33-0, ಹರ್ಭಜನ್ ಸಿಂಗ್ 4-0-44-2, ವಿನಯ್ ಕುಮಾರ್ 2-0-18-0, ಪೊಲಾರ್ಡ್ 1.4-0-26-1.
ಪಂದ್ಯಶ್ರೇಷ್ಠ: ಆಶಿಶ್ ನೆಹ್ರಾ
Advertisement