ಕೋಲ್ಕತಾಗೆ ಜಯ

ವೆಸ್ಟ್ ಇಂಡೀಸ್ ಮೂಲದ ಆ್ಯಂಡ್ರೆ ರಸೆಲ್ ಅವರ ಅಮೋಘ 66 ರನ್‍ಗಳ ನೆರವಿನಿಂದ ಕೋಲ್ಕತಾ ನೈಟ್‍ರೈಡರ್ಸ್ ತಂಡ, ಶನಿವಾರ ನಡೆದ...
ಕೋಲ್ಕತಾ ತಂಡ
ಕೋಲ್ಕತಾ ತಂಡ

ಪುಣೆ: ವೆಸ್ಟ್ ಇಂಡೀಸ್ ಮೂಲದ ಆ್ಯಂಡ್ರೆ ರಸೆಲ್ ಅವರ ಅಮೋಘ 66 ರನ್‍ಗಳ ನೆರವಿನಿಂದ ಕೋಲ್ಕತಾ ನೈಟ್‍ರೈಡರ್ಸ್ ತಂಡ, ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್
ಪಂಜಾಬ್ ತಂಡವನ್ನು 4 ವಿಕೆಟ್‍ಗಳಿಂದ ಮಣಿಸಿತು.

ಮೊದಲು ಬ್ಯಾಟ್ ಮಾಡಿದ ಪಂಜಾಪ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳ ಸಾಧಾರಣ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ 17.5 ಓವರ್ ಗಳಲ್ಲಿ 6
ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಜಯ ದಾಖಲಿಸಿತು. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತಾ ತಂಡದ ನಾಯಕ ಗೌತಮ್ ಗಂಭೀರ್, ಎದುರಾಳಿಗಳನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು. ಅಲ್ಪಮೊತ್ತಕ್ಕೆ ಪಂಜಾಬ್ ತಂಡವನ್ನು ಕಟ್ಟಿಹಾಕುವ ಅವರ ಕನಸನ್ನುಬೌಲರ್‍ಗಳಾದ ಉಮೇಶ್ ಯಾದವ್, ಮಾರ್ನೆ ಮಾರ್ಕೆಲ್ ಹಾಗೂ ಆ್ಯಂಡ್ರೆ ರಸೆಲ್ ನನಸು ಮಾಡಿದರು.

ಆರಂಭಿಕ ಮುರಳಿ ವಿಜಯ್ ಸೇರಿದಂತೆ ಮಧ್ಯಮ ಕ್ರಮಾಂಕದ ಮ್ಯಾಕ್ಸ್ ವೆಲ್, ಗುರುಕೀರತ್ ಸಿಂಗ್ ಅವರ ವಿಕೆಟ್ ಅನ್ನು ಉಮೇಶ್ ಕಬಳಿಸಿದರೆ, ರಸೆಲ್ ಅವರು ಮತ್ತೊಬ್ಬ ಆರಂಭಿಕ
ವೀರೇಂದ್ರ ಸೆಹ್ವಾಗ್, ತಿಸಾರಾ ಪೆರಾರಾ ವಿಕೆಟ್ ಪಡೆದರು. ಇನ್ನು, ಮಾರ್ಕೆಲ್ ಅವರು ವೃದ್ಧಿಮಾನ್ ಸಾಹಾ, ಮಿಚೆಲ್ ಜಾನ್ಸನ್ ಅವರನ್ನು ಪೆವಿಲಿಯನ್‍ಗೆ ಅಟ್ಟಿದರು. ಆದರೆ ಜಾರ್ಜ್ ಬೈಯ್ಲಿ (60 ರನ್, 45 ಎಸೆತೆ ಗಳಲ್ಲಿ 5 ಬೌಂಡರಿ, 2 ಸಿಕ್ಸರ್) ನೆರವಿನಿಂದ ಪಂಜಾಬ್ 155 ರನ್ ಮೊತ್ತ ಪೇರಿಸಿತು.

ಪಂಜಾಬ್ ನೀಡಿದ್ದ ಸುಲಭ ಸವಾಲನ್ನು ಬೆನ್ನಟ್ಟಲು ಕ್ರೀಸ್‍ಗೆ ಇಳಿದ ಕೋಲ್ಕತಾ ತಂಡ ಆರಂಭಿಕ ರಾಬಿನ್ ಉತ್ತಪ್ಪ ಅವರನ್ನು ಬೇಗನೆ ಕಳೆದುಕೊಂಡಿತು. ಆಗ ಮತ್ತೊಬ್ಬ ಆರಂಭಿಕ ಹಾಗೂ ನಾಯಕ ಗೌತಮ್ ಗಂಭೀರ್ ಗೆ ಜೊತೆಯಾದ ಮನೀಶ್ ಪಾಂಡೆ, 2ನೇ ವಿಕೆಟ್‍ಗೆ 18 ರನ್ ಸೇರಿಸಿದರು. ಆದರೆ, ಅಷ್ಟರಲ್ಲಿ ಪಾಂಡೆ ವಿಕೆಟ್ ಬೀಳುವ ಮೂಲಕ ಬೇರ್ಪಟ್ಟಿತು. ಆಗ ಬಂದ ಸೂರ್ಯಕುಮಾರ್ ಜೊತೆ ಗಂಭೀರ್ ಅವರು, 3ನೇ ವಿಕೆಟ್‍ಗೆ 26 ರನ್ ಸೇರಿಸಿದರು. ಆದರೆ, 23 ರನ್ ಗಳಿಸಿ ಆಡುತ್ತಿದ್ದ ಸೂರ್ಯಕುಮಾರ್ ಬೇಗನೇ ವಿಕೆಟ್ ಒಪ್ಪಿಸಿದರು. ಅದರ
ನಂತರ ಎಸೆತದಲ್ಲೇ ಗಂಭೀರ್ ಸಹ ಔಟಾದರು. ಅವರ ನಂತರ ಬಂದ ಡೋಚೆಟ್ ಸಹ ಹೆಚ್ಚು ಆಡಲಿಲ್ಲ. ಆಗ 6ನೇ ವಿಕೆಟ್ ಗೆ 95 ರನ್ ಜೊತೆಯಾಟವಾಡಿದ ರಸೆಲ್ ಹಾಗೂ ಯೂಸುಫ್ ಪಠಾಣ್ ಬಿರುಸಿನ ಆಟವಾಡಿ ತಂಡವನ್ನು ಗೆಲವಿನ ದಡಕ್ಕೆ ಕೊಂಡೊಯ್ದರು. ಗೆಲವಿನ ಹೊಸ್ತಿಲಲ್ಲಿ ತಂಡವಿದ್ದಾಗ 18ನೇ ಓವರ್‍ನಲ್ಲಿ ರಸೆಲ್ ವಿಕೆಟ್ (36 ಎಸೆತ, 9 ಬೌಂಡರಿ, 2 ಸಿಕ್ಸರ್) ಉರುಳಿದರೂ ಅಜೇಯರಾಗುಳಿದ ಪಠಾಣ್, ತಂಡಕ್ಕೆ ಗೆಲವು ತಂದರು. ಕೋಲ್ಕತಾ ತಂಡದ ಆರಂಭಿಕರ ವಿಕೆಟ್ ಸೇರಿದಂತೆ ನಾಲ್ವರನ್ನು ಬಲಿಪಡೆದ ಪಂಜಾಬ್ ತಂಡದ ಮಧ್ಯಮ ವೇಗಿ ಸಂದೀಪ್ ಅವರ ಉತ್ತಮ ಪ್ರದರ್ಶನ ವ್ಯರ್ಥವಾಯಿತು.

ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್‍ಗಳಲ್ಲಿ 155ಕ್ಕೆ 9
ಮುರಳಿ ವಿಜಯ್ ಸಿ ರಸೆಲ್ ಬಿ ಉಮೇಶ್ ಯಾದವ್ 0,
ವೀರೇಂದ್ರ ಸೆಹ್ವಾಗ್ ಸಿ ಚಾವ್ಲಾ ಬಿ ರಸೆಲ್ 11, ವೃದ್ಧಿಮಾನ್ ಸಾಹಾ ಸಿ ಪಠಾಣ್ ಬಿ ಮಾರ್ಕೆಲ್ 15, ಗ್ಲೆನ್ ಮ್ಯಾಕ್ಸ್ ವೆಲ್ ಸಿ ರಸೆಲ್ ಬಿ ಉಮೇಶ್ ಯಾದವ್ 33, ಜಾರ್ಜ್ ಬೇಯ್ಲಿ ರನೌಟ್ 60, ತಿಸಾರಾ ಪೆರೇರಾ ಸಿ ಪಾಂಡೆ ಬಿ ರಸೆಲ್ 9, ಗುರುಕೀರತ್ ಸಿಂಗ್ ಸಿ ಸೂರ್ಯಕುಮಾರ್ ಯಾದವ್ ಬಿ ಉಮೇಶ್ ಯಾದವ್ 11, ಅಕ್ಷರ್ ಪಟೇಲ್ ಸಿ ಸೂರ್ಯಕುಮಾರ್ ಯಾದವ್ ಬಿ ಸುನಿಲ್ ನಾರಾಯಣ್ 2, ಮಿಚೆಲ್ ಜಾನ್ಸನ್ ಸಿ ಗಂಭೀರ್ ಬಿ ಮಾರ್ಕೆಲ್ 1, ಅನುರೀತ್ ಸಿಂಗ್ ಅಜೇಯ 0. ಇತರೆ (ಬೈ 9, ಲೆಗ್‍ಬೈ 1, ವೈಡ್ 3) 13.

ವಿಕೆಟ್ ಪತನ: 1--0, 2--23, 3--27, 4--90, 5--107, 6--131, 7--146, 8--154, 9--155.
ಬೌಲಿಂಗ್ ವಿವರ: ಉಮೇಶ್ ಯಾದವ್ 4-0-33-3, ಮಾರ್ನೆ ಮಾರ್ಕೆಲ್ 4-0-27-2, ರಸೆಲ್ 4-0-39-2, ಸುನಿಲ್ ನಾರಾಯಣ್ 4-0-17-1, ಪಿsಯೂಶ್ ಚಾವ್ಲಾ 4-0-29-0.

ಕೋಲ್ಕತಾ ನೈಟ್ ರೈಡರ್ಸ್ -17.5 ಓವರ್‍ಗಳಲ್ಲಿ 156ಕ್ಕೆ 6
ರಾಬಿನ್ ಉತ್ತಪ್ಪ ಎಲ್‍ಬಿ ಸಂದೀಪ್ ಶರ್ಮಾ 13, ಗೌತಮ್ ಗಂಭೀರ್ ಸಿ ವೃದ್ಧಿಮಾನ್ ಸಾಹಾ ಬಿ ಸಂದೀಪ್ ಶರ್ಮಾ 11, ಮನೀಶ್ ಪಾಂಡೆ ಸಿ ಬೇಯ್ಲಿ ಬಿ ಸಂದೀಪ್ 12, ಸೂರ್ಯಕುಮಾರ್ ಯಾದವ್ ಸಿ ವೃದ್ಧಿಮಾನ್ ಬಿ ಪೆರೇರಾ 23, ಯೂಸುಫ್ ಪಠಾಣ್ ಅಜೇಯ 28, ರಿಯಾನ್ ಡೋಚೆಟ್ ಎಲ್‍ಬಿ ಬಿ ಸಂದೀಪ್ 0, ರಸೆಲ್ ಬಿ ಜಾನ್ಸನ್ 66, ಪಿಯೂಶ್ ಚಾವ್ಲಾ ಅಜೇಯ 4. ಇತರೆ (ಲೆಗ್‍ಬೈ 1, ವೈಡ್ 1) 2.

ವಿಕೆಟ್ ಪತನ: 1--16, 2--34, 3--60, 4--60, 5--60, 6-- 155.

ಬೌಲಿಂಗ್ ವಿವರ: ಸಂದೀಪ್ ಶರ್ಮಾ 4-1-25-4, ಅನುರೀತ್ ಸಿಂಗ್ 4-0-37-0, ಮಿಚೆಲ್ ಜಾನ್ಸನ್ 3.5-0-41-1, ಪೆರೇರಾ 4-0-33-1, ಅಕ್ಷರ್ ಪಟೇಲ್ 2-0-22-0.

ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com