
ಮೆಲ್ಬರ್ನ್: ಐಪಿಎಲ್ ಎಂಟನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಎರಾನ್ ಫಿಂಚ್, ಅಹ್ಮದಾಬಾದ್ ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳತಕ್ಕೆ ಸಿಲುಕಿದ್ದರು.
ಈಗ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಕನಿಷ್ಠ 12 ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ. ಹಾಗಾಗಿ ಅವರು ಈ ಐಪಿಎಲ್ ಆವೃತ್ತಿಯಿಂದ ಹೊರಗುಲಿಯಲಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಏ.14ರಂದು ನಡೆದಿದ್ದ ಪಂದ್ಯದ ವೇಳೆ ಎಡಗಾಲಿನ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಫಿಂಚ್ ಅವರು ನಡೆಯಲು ಸಹ ಸಾಧ್ಯವಾಗದೇ ಇದ್ದ ಕಾರಣ ಇಬ್ಬರು ಸಹ ಆಟಗಾರರ ನೆರವಿನೊಂದಿಗೆ ಮೈದಾನದಿಂದ ಹೊರ ನಡೆದಿದ್ದರು.
ಐಪಿಎಲ್‍ನಿಂದ ಆಸ್ಟ್ರೇಲಿಯಾಕ್ಕೆ ಮರಳಿರುವ ಫಿಂಚ್, ಸ್ಕ್ಯಾನಿಂಗ್‍ಗೆ ಒಳಗಾಗಿದ್ದರು. ಆ ಮೂಲಕ ಅವರು ತೀವ್ರವಾದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಎಂಬುದು ಖಚಿತವಾಗಿದೆ. ಇವರನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ತಿಳಿಸಿದ್ದರು.
ಮಂಗಳವಾರ ಫಿಂಚ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, 12 ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ದೈಹಿಕ ತಜ್ಞ ಅಲೆಕ್ಸ್ ಕೌಂಟೊರಿಸ್ ಬುಧವಾರ ತಿಳಿಸಿದ್ದಾರೆ.
Advertisement