ಮೊದಲ ಟೆಸ್ಟ್: ಬಾಂಗ್ಲಾಕ್ಕೆ ಮೊಮಿನುಲ್ ಹಕ್ ಆಸರೆ

ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಆತಿಥೇಯ ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಉತ್ತಮ ಸ್ಥಿತಿಯಲ್ಲಿದೆ...
ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಂಗ್ಲಾದೇಶ
ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಂಗ್ಲಾದೇಶ

ಖುಲ್ನಾ (ಬಾಂಗ್ಲಾದೇಶ): ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಆತಿಥೇಯ ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಉತ್ತಮ ಸ್ಥಿತಿಯಲ್ಲಿದೆ. ಶೇಖ್ ಅಬು ನಾಸಿರ್ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಆನಂತರ ಮೊದಲ ದಿನದಾಟ ಮುಕ್ತಾಯಕ್ಕೆ 89.5 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 236 ರನ್ ದಾಖಲಿಸಿದೆ. ಇನಿಂಗ್ಸ್ ಆರಂಭಿಸಿದ ತಮೀಮ್ ಇಕ್ಬಾಲ್ ಹಾಗೂ ಇಮ್ರುಲ್ ಕಯಾಸ್ (51) ಅರ್ಧಶತಕದ ಜತೆಯಾಟ ನೀಡುವ ಮೂಲಕ ಉತ್ತಮ ಆರಂಭ ತಂದುಕೊಟ್ಟರು. ಇಕ್ಬಾಲ್ 25 ರನ್ ಗಳಿಸಿ ಔಟಾದರು. ಈ ವೇಳೆ 51 ರನ್ ದಾಖಲಿಸಿ ಅರ್ಧಶತಕದ ಗಡಿ ಮುಟ್ಟಿದ ಇಮ್ರುಲ್, ಮೊಹಮದ್ ಹಫೀಜ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ ಆಗಿ ಹೊರ ನಡೆದರು. ನಂತರ ಮೊಮಿನುಲ್ ಹಕ್ ಮತ್ತು ಮಹಮದ್ದುಲ್ಲಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.

ಬಾಂಗ್ಲಾ 3ನೇ ವಿಕೆಟ್‍ಗೆ 95 ರನ್ ಸಂಪಾದಿಸಿತು. ಮಹಮದ್ದುಲ್ಲಾ 49 ರನ್ ಗಳಿಸಿದರು. ದಿನದಾಟದಲ್ಲಿ  ಬಾಂಗ್ಲಾದೇಶ ಇನಿಂಗ್ಸ್ ಕಟ್ಟಿದ ಮೊಮಿನುಲ್ 8 ಬೌಂಡರಿಗಳ ನೆರವಿನಿಂದ  80 ರನ್ ದಾಖಲಿಸಿದರು. ಆಲ್ರೌಂಡರ್ ಶಕಿಬ್ ಅಲ್ ಹಸನ್ 19 ರನ್ ಗಳಿಸಿ ಅಜೇಯರಾಗುಳಿದಿದ್ದು, ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com