
ಚೆನ್ನೈ: ಅಲ್ಪ ಮೊತ್ತ ದಾಖಲಿಸಿದರೂ ಪರಿಣಾಮಕಾರಿ ಬೌಲಿಂಗ್ ಹಾಗೂ ಅತ್ಯುತ್ತಮವಾದ ಫೀಲ್ಡಿಂಗ್ ಪ್ರದರ್ಶನ ನೀಡಿದ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್‍ರೈಡರ್ಸ್ ವಿರುದ್ಧ ಗೆಲವು ದಾಖಲಿಸಿದೆ.
ಎಂ.ಚಿದಂಬರಮ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತಾ ನೈಟ್‍ರೈಡರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 134 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ ನೈಟ್‍ರೈಡರ್ಸ್ 20 ಓವರ್‍ಗಳಲ್ಲಿ 9 ವಿಕೆಟ್‍ಗೆ 132 ರನ್ ಗಳಿಸಿತು. ಈ ಮೂಲಕ ಸಿಎಸ್‍ಕೆ 2 ರನ್‍ಗಳ ರೋಚಕ ಗೆಲವು ದಾಖಲಿಸಿತು.
ಪರದಾಡಿದ ಸಿಎಸ್‍ಕೆ
ಕೋಲ್ಕತಾ ನೈಟ್‍ರೈಡರ್ಸ್ ತಂಡದ ದಾಳಿಯನ್ನು ಆರಂಭದಲ್ಲಿ ಉತ್ತಮವಾಗಿ ಎದುರಿಸಿದರೂ ಅಂತಿಮ ಹಂತದಲ್ಲಿ ಪರದಾಡಿತು. ಮಧ್ಯಮ ಕ್ರಮಾಂಕದಲ್ಲಿ ಫಫ್ ಡುಪ್ಲೆಸಿಸ್ ಅಜೇಯ 29 ರನ್ ದಾಖಲಿಸಿದ್ದು, ತಂಡದ ಪರ ಗರಿಷ್ಠ ಮೊತ್ತವಾಯಿತು. ಉಳಿದಂತೆ ಡ್ವೈನ್ ಸ್ಮಿತ್ (25), ಮೆಕಲಂ (19), ರೈನಾ (17), ಜಡೇಜಾ (15) ಉತ್ತಮ ಆರಂಭ ಪಡೆದರಾದರೂ ನಿಗದಿತ ಅಂತರದಲ್ಲಿ ವಿಕೆಟ್ ಒಪ್ಪಿಸಿದ ಪರಿಣಾಮ ಸಾಧಾರಣ ಮೊತ್ತಕ್ಕೆ ಕುಸಿಯಿತು. ಕೆಕೆಆರ್ ತಂಡದ ಪರ ಪಿಯೂಶ್ ಹಾಗೂ ರಸೆಲ್ 2 ವಿಕೆಟ್ ಪಡೆದರೆ, ಬ್ರಾಡ್ ಹಾಗ್ 1 ವಿಕೆಟ್ ಪಡೆದರು.
ಉತ್ತಪ್ಪ ಹೋರಾಟ ವ್ಯರ್ಥ
ನಂತರ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲಿ ನಾಯಕ ಗಂಭೀರ್ ವಿಕೆಟ್ ಕಳೆದುಕೊಂಡರೂ ನಂತರ ಉತ್ತಪ್ಪ ಚುರುಕಿನ ಆಟದಿಂದಾಗಿ ಗೆಲುವಿನತ್ತ ಮುನ್ನಡೆದಿತ್ತು. ಮಧ್ಯಮ ಕ್ರಮಾಂಕದಲ್ಲಿ ಆದರೆ ಅಂತಿಮ ಓವರ್‍ನಲ್ಲಿ ಚೆನ್ನೈ ದಾಳಿ ಎದುರಿಸಲು ಪರದಾಡಿದ ಪರಿಣಾಮ ಕೆಕೆಆರ್ ತಂಡ ಸೋಲನುಭ ವಿಸಬೇಕಾಯಿತು. ಕೆಕೆಆರ್ ಪರ 17 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 39 ರನ್ ದಾಖಲಿಸಿದ ಉತ್ತಪ್ಪ ಹೊರತು ಪಡಿಸಿದರೆ, ಉಳಿದ ಯಾವುದೇ ಬ್ಯಾಟ್ಸ್‍ಮನ್ ನಿರೀಕ್ಷಿತ ಮಟ್ಟದಲ್ಲಿ ರನ್ ದಾಖಲಿಸದಿರುವುದು ಸೋಲಿಗೆ ಕಾರಣವಾಯಿತು. 7ನೇ ಓವರ್ ನಂತರ 18ನೇ ಓವರ್ ವರೆಗೂ ಚೆನ್ನೈ ತಂಡ ಎದುರಾಳಿ ಬ್ಯಾಟ್ಸ್ ಮನ್‍ಗಳು ಬೌಂಡರಿ ಗಳಿಸಲು ಅವಕಾಶ ನೀಡದಿರುವುದು ತಂಡದ ಸಂಘಟಿತ ದಾಳಿಗೆ ಸಾಕ್ಷಿಯಾಯಿತು. ಅಂತಿಮ ಓವರ್ ನಲ್ಲಿ ಡಾಶ್ಕೆಟ್ ಅಬ್ಬರಿಸಿದರು ಜಯ ಸಿಗಲಿಲ್ಲ.
Advertisement