ಅಭ್ಯಾಸ ಪಂದ್ಯದಲ್ಲಿ ಪ್ರಭುತ್ವ ಮೆರೆದ ಭಾರತ

ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲಿ ಪ್ರಭುತ್ವ ಮೆರೆದ ಭಾರತ...
ಇಶಾಂತ್ ಶರ್ಮಾ (ಕೃಪೆ: ಎಎಫ್ ಪಿ)
ಇಶಾಂತ್ ಶರ್ಮಾ (ಕೃಪೆ: ಎಎಫ್ ಪಿ)

ಕೊಲಂಬೊ: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲಿ ಪ್ರಭುತ್ವ ಮೆರೆದ ಭಾರತ, ಆ ಮೂಲಕ ಆತಿಥೇಯ ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಿಗೆ ಭರ್ಜರಿಯಾಗಿಯೇ  ಕಸರತ್ತು ನಡೆಸಿತು. ಬ್ಯಾಟಿಂಗ್‍ಗೆ ಹೋಲಿಸಿದರೆ ಬೌಲಿಂಗ್‍ನಲ್ಲಿ ಸದ್ದು ಮಾಡಿದ ಪ್ರವಾಸಿ  ಭಾರತ, ಇದೇ   12ರಿಂದ ಶುರುವಾಗಲಿರುವ ಮೊದಲ ಟೆಸ್ಟ್ ಗೆ ಆತ್ಮವಿಶ್ವಾಸದಿಂದ ಸೆಣಸುವ ಅವಕಾಶವನ್ನು ಸೃಷ್ಟಿಸಿಕೊಂಡಿತು. ಇನ್ನು ನಿರೀಕ್ಷೆಯಂತೆಯೇ ಮೂರು ದಿನಗಳ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. 411 ರನ್ ಗುರಿ ಪಡೆದ ಶ್ರೀಲಂಕಾ ಅಧ್ಯಕ್ಷರ ಮಂಡಳಿ ಇಲೆವೆನ್ 54 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿದರು. ಉಪುಲ್ ತರಂಗ (52) ಹಾಗೂ ಆರಂಭಿಕ ಕೌಶಲ್ ಸಿಲ್ವಾ ಅಜೇಯ 83 ರನ್‍ಗಳ ನೆರವಿನೊಂದಿಗೆ ಪಂದ್ಯ ಡ್ರಾ ಆಯಿತು. ಆರ್. ಅಶ್ವಿನ್ 38ಕ್ಕೆ 3 ವಿಕೆಟ್ ಪಡೆದು ಗಮನ ಸೆಳೆದರು. ಇನ್ನುಳಿದಂತೆ ಉಮೇಶ್ ಯಾದವ್, ವರುಣ್ ಏರಾನ್ ಹಾಗೂ ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು.

ಮಿಂಚಿದ ಬೌಲರ್‍ಗಳು
: ಅಭ್ಯಾಸ ಪಂದ್ಯದಲ್ಲಿ ಭಾರತದ ಬೌಲರ್‍ಗಳು ಗಮನ ಸೆಳೆದಷ್ಟು ಬ್ಯಾಟ್ಸ್‍ಮನ್‍ಗಳು ಸದ್ದು ಮಾಡಲಿಲ್ಲ. ಮೊದಲ ಇನ್ನಿಂಗ್ಸ್‍ನಲ್ಲಿ ವೇಗಿ ಶ್ರೀಶಾಂತ್ 5
ವಿಕೆಟ್ ಪಡೆದರೆ, ಎರಡೂ ಇನ್ನಿಂಗ್ಸ್‍ಗಳಲ್ಲಿ 5 ವಿಕೆಟ್ ಪಡೆದ ಆರ್. ಅಶ್ವಿನ್ ಕೂಡ 5 ವಿಕೆಟ್ ಗಳಿಸಿದರು. ಇನ್ನು ಬ್ಯಾಟಿಂಗ್ ನಲ್ಲಿ ಮೊದಲ ಇನ್ನಿಂಗ್ಸ್‍ನಲ್ಲಿ ತಡವರಿಸಿದ್ದ ಭಾರತದ ಇನ್ನಿಂಗ್ಸ್ ಗೆ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಗಳಿಸಿದ ಶತಕ ಬಲ ತಂದಿತ್ತು. ಅದರ ಫಲವಾಗಿ ಭಾರತ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಆದರೆ ಮೊಟ್ಟಮೊದಲ ಬಾರಿಗೆ ಟೆಸ್ಟ್ ಸರಣಿಯೊಂದರಲ್ಲಿ ಪೂರ್ಣ ಪ್ರಮಾಣದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿಗೆ ಈ ಸರಣಿ ಪ್ರತಿಷ್ಠೆಯದ್ದಾಗಿದ್ದು ಫಾರ್ಮ್ ಗೆ ಮರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಸಂಕ್ಷಿಪ್ತ ಸ್ಕೋರ್ :ಭಾರತ: 351 ಮತ್ತು 180
ಶ್ರೀಲಂಕಾ ಇಲೆವೆನ್: 121 ಮತ್ತು 200/6
ಫಲಿತಾಂಶ  ಪಂದ್ಯ ಡ್ರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com