
ನವದೆಹಲಿ: ಬಿಸಿಸಿಐಗೆ ಸಡ್ಡು ಹೊಡೆದು, ಕ್ರಿಕೆಟ್ ಪ್ರಪಂಚದಲ್ಲಿ ತಾನು ಕಳೆದುಕೊಂಡಿರುವ ಸ್ಥಾನಮಾನಗಳನ್ನು ಮರಳಿ ಪಡೆಯಲು ಶತಪ್ರಯತ್ನ ನಡೆಸುತ್ತಿರುವ ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೂ ಸಡ್ಡು ಹೊಡೆಯಲು ಸನ್ನಾಹ ಮಾಡಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜಾಗತಿಕ ಮಟ್ಟದಲ್ಲಿ ಈಗಿರುವ ಕ್ರಿಕೆಟ್ ಮಂಡಳಿಗೆ ಪರ್ಯಾಯವಾಗಿ ಹೊಸ ಮಂಡಳಿ ಕಾರ್ಯ ನಿರ್ವಹಿಸಲಿದೆ. ಕಾಲ ಕೂಡಿ ಬಂದಾಗ ಹಾಲಿ ಐಸಿಸಿ ಆಡಳಿತ ಮಂಡಳಿಯನ್ನೇ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲೂಬಹುದು ಎಂಬ ಅಶಾವಾದವನ್ನು ಮೋದಿ ವ್ಯಕ್ತಪಡಿಸಿದ್ದಾರೆ.
Advertisement