ರು.30 ಕೋಟಿ ಫ್ಲಾಟ್ ಖರೀದಿಸಿದ ರೋಹಿತ್

ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಮುಂಬೈನ ವರ್ಲಿಯಲ್ಲಿ ಸುಮಾರು ರು.30 ಕೋಟಿ ಮೌಲ್ಯದ ಫ್ಲಾಟ್...
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಮುಂಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಮುಂಬೈನ ವರ್ಲಿಯಲ್ಲಿ ಸುಮಾರು ರು.30 ಕೋಟಿ ಮೌಲ್ಯದ ಫ್ಲಾಟ್ ಖರೀದಿಸಿದ್ದಾರೆ. ಅಹುಜಾ ಅಪಾರ್ಟ್ ಮೆಂಟ್ ನ 29ನೇ ಮಹಡಿಯಲ್ಲಿ ಈ ಫ್ಲಾಟ್ ಇದೆ ಎಂದು ಕ್ರಿಕೆಟ್ ಕಂಟ್ರಿ ಜಾಲತಾಣ ವರದಿ ಮಾಡಿದೆ.

4ಬಿಎಚ್ ಕೆ ಮಾದರಿಯ ಈ ಫ್ಲಾಟ್ 6,200 ಚ.ಅಡಿ ವಿಸ್ತೀರ್ಣದ್ದಾಗಿದ್ದು, ಪ್ರತಿ ಚದರ ಅಡಿಯ ಮೌಲ್ಯ ರು.50,000 ಎನ್ನಲಾಗಿದೆ. ಪಲ್ಮಾರ್ ಹಾಗೂ ಟರ್ನರ್ ಆರ್ಕಿಟೆಕ್ಸ್ಟ್ ಎಂಬ ಸಂಸ್ಥೆಯು ಈ ಅಪಾರ್ಟ್ ಮೆಂಟ್ ಅನ್ನು ವಿನ್ಯಾಸಗೊಳಿಸಿದ್ದು, ಇದರಲ್ಲಿ ಆತ್ಯಾಧುನಿಕ ಜಿಮ್, ಯೋಗ, ಸ್ನೂಕರ್ ಗಾಗಿ ಪ್ರತ್ಯೇಕ ಕೊಠಡಿಗಳಿದ್ದು, ಬ್ಯುಸಿನೆಸ್ ವಿಭಾಗ, ಮಿನಿ ಥಿಯೇಟರ್, ಸ್ವಿಮ್ಮಿಂಗ್ ಪೂಲ್ ಮುಂತಾದ ಸೌಕರ್ಯಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com