ಇಂದಿನಿಂದ ವಿಶ್ವ ಅಥ್ಲೆಟಿಕ್ಸ್

ಬಹುನಿರೀಕ್ಷಿತ 15ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಶನಿವಾರದಿಂದ ಬೀಜಿಂಗ್‍ನಲ್ಲಿ ಆರಂಭಗೊಳ್ಳಲಿದ್ದು, ಏಷ್ಯನ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ...
2015ರ ಬೀಜಿಂಗ್ ಅಥ್ಲೆಟಿಕ್ಸ್ (ಸಾಂದರ್ಭಿಕ ಚಿತ್ರ)
2015ರ ಬೀಜಿಂಗ್ ಅಥ್ಲೆಟಿಕ್ಸ್ (ಸಾಂದರ್ಭಿಕ ಚಿತ್ರ)

ಬೀಜಿಂಗ್: ಬಹುನಿರೀಕ್ಷಿತ 15ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಶನಿವಾರದಿಂದ ಬೀಜಿಂಗ್‍ನಲ್ಲಿ ಆರಂಭಗೊಳ್ಳಲಿದ್ದು, ಏಷ್ಯನ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಇಂದರ್ಜೀತ್ ಸಿಂಗ್ ಹಾಗೂ 2014ರ ಇಂಚಾನ್ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಕರ್ನಾಟಕದ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಅವರುಳ್ಳ 17 ಜನರ ಭಾರತೀಯ ಅಥ್ಲೀಟ್ ಗಳ ತಂಡ ಭಾಗವಹಿಸುತ್ತಿದೆ.

ಇಲ್ಲಿನ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ಆಗಸ್ಟ್ 30ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ರಾಜ್ಯದ ಓಟಗಾರ್ತಿ ಪೂವಮ್ಮ ಸಹ ಗಮನ ಸೆಳೆದಿದ್ದಾರೆ. 800 ಮೀ. ರೇಸ್‍ನಲ್ಲಿ ಟಿಂಟು ಲೂಕಾ, ಅನು ರಾಘವನ್, ಎಂ.ಆರ್. ಪೂವಮ್ಮ, ದೇಬಶ್ರೀ ಮಜುಂದಾರ್ ಹಾಗೂ ಜಿಸ್ನಾ ಮ್ಯಾಥ್ಯೂ ರಿಲೇ ತಂಡದ ಮೇಲೆ ಹೆಚ್ಚಿನ ಭರವಸೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com