
ನವದೆಹಲಿ: ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನ ಪ್ರೇಯಸಿ ಗೀತಾ ಬಸ್ರಾ ಅವರನ್ನು ಮದುವೆಯಾಗಲಿದ್ದಾರೆ. ಅಕ್ಟೋಬರ್ 29ರಂದು ಜಲಂಧರ್ ನಿಂದ 20 ಕಿಮೀ ದೂರದಲ್ಲಿರುವ ಪಗ್‌ವಾರಾದಲ್ಲಿ ಹರ್ಭಜನ್ -ಗೀತಾ ಮದುವೆ ನಡೆಯಲಿದೆ ಎಂದು ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ.
ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯವನ್ನಾಡಲು ಹರ್ಭಜನ್‌ಗೆ ಅವಕಾಶ ಸಿಕ್ಕಿದರೆ ಮದುವೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ.
ಯಾರು ಈ ಗೀತಾ ಬಸ್ರಾ?: ಬಾಲಿವುಡ್ ನಟಿ ಗೀತಾ ಬಸ್ರಾ ಹಲವಾರು ವರ್ಷಗಳಿಂದ ಹರ್ಭಜನ್ ಸಿಂಗ್‌ನ ಗೆಳತಿಯಾಗಿದ್ದಾಳೆ. ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಇವರಿಬ್ಬರೂ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಆಗಾಗ್ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದದ್ದು ವದಂತಿಗಳಿಗೆ ಕಾರಣವಾಗಿತ್ತು. ಗೀತಾ ಬಸ್ರಾ ಅವರ ನೂತನ ಚಿತ್ರ ಸೆಕೆಂಡ್ ಹ್ಯಾಂಡ್ ಹಸ್ಪೆಂಡ್‌ನಲ್ಲಿ ಹರ್ಭಜನ್ ಸಿಂಗ್ ಕೂಡಾ ಕಾಣಿಸಿಕೊಂಡಿದ್ದರು.
ಈ ಬಗ್ಗೆ ಬಸ್ರಾ ಅವರಲ್ಲಿ ಕೇಳಿದಾಗ ಹಾಗೇನೂ ಇಲ್ಲ, ನಾನು ಮದುವೆಯಾಗುತ್ತಿದ್ದರೆ ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ. ಕದ್ದು ಮುಚ್ಚಿ ಮದುವೆಯಾಗಲ್ಲ. ಪಂಜಾಬಿ ಹುಡುಗಿ ನಾನು ಮದುವೆಯಾಗುವುದಾದರೆ ಅದ್ಧೂರಿಯಾಗಿಯೇ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಳು.
ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಸಿಂಗ್ ವಾಪಸ್ ಬಂದ ನಂತರವೇ ಆಮಂತ್ರಣ ಪತ್ರಿಕೆ ಮತ್ತು ಇನ್ನಿತರ ತಯಾರಿಗಳನ್ನು ಮಾಡಿಕೊಳ್ಳಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.
Advertisement