ಎರಡನೇ ಇನಿಂಗ್ಸ್ ನಲ್ಲಿ ಭಾರತವನ್ನು 300 ರನ್ ಗಳಿಗೆ ಕಟ್ಟಿಹಾಕುತ್ತೇವೆ: ಶ್ರೀಲಂಕಾ ಆಟಗಾರ ತಿರಿಮಾನ್ನೆ

87ರನ್ ಹಿನ್ನಡೆ ಅನುಭವಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಶ್ರೀಲಂಕಾ ತಂಡದ ಲಹಿರು ತಿರಿಮಾನ್ನೆ, ಭಾರತವನ್ನು 300 ರನ್ ಗಳಿಗೆ ಕಟ್ಟಿಹಾಕುತ್ತೇವೆ ಎಂದು ಹೇಳಿದ್ದಾರೆ.
ಲಹಿರು ತಿರಿಮಾನ್ನೆ
ಲಹಿರು ತಿರಿಮಾನ್ನೆ

ಕೊಲಂಬೋ: ಭಾರತದ ವಿರುದ್ಧದ ಎರಡನೇ ಟೆಸ್ಟ್ ನ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ  87ರನ್  ಹಿನ್ನಡೆ ಅನುಭವಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಶ್ರೀಲಂಕಾ ತಂಡದ ಬ್ಯಾಟ್ಸ್ ಮ್ಯಾನ್ ಲಹಿರು ತಿರಿಮಾನ್ನೆ, ಎರಡನೇ ಇನಿಂಗ್ಸ್ ನಲ್ಲಿ ಭಾರತವನ್ನು 300 ರನ್ ಗಳಿಗೆ ಕಟ್ಟಿಹಾಕುತ್ತೇವೆ ಎಂದು ಹೇಳಿದ್ದಾರೆ.

ಭಾರತ ಮೂರನೇ ದಿನದಾಟದಲ್ಲಿ 70 ರನ್ ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಒಟ್ಟಾರೆ 157 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ಇದಕ್ಕೂ ಮುನ್ನ ಶ್ರೀಲಂಕಾ ತನ್ನ ಮೊದಲನೇ ಇನಿಂಗ್ಸ್ ನಲ್ಲಿ 306 ರನ್ ಗಳಿಗೆ ಸರ್ವಪತನ ಕಂಡಿತ್ತು. ಭಾರತ ಮೊದಲ ಇನಿಂಗ್ಸ್ ನಲ್ಲಿ 393  ರನ್ ಗಳಿಸಿ ಎರಡನೇ ಇನಿಂಗ್ಸ್ ಗೆ 87 ರನ್ ಗಳ ಮುನ್ನಡೆ ಕಾಯ್ದುಕೊಂಡಿತ್ತು.
ಊಟದ ವಿರಾಮದ ವರೆಗೂ ಬ್ಯಾಟಿಂಗ್ ಮಾಡುತ್ತೇವೆ ಎಂದು ನಿರೀಕ್ಷಿಸಿದ್ದೆವು, ಆ್ಯಂಜೆಲೊ ಮ್ಯಾಥ್ಯೂಸ್ ಕೂಡ ನನಗೆ ಸಕಾರಾತ್ಮವಾಗಿ ಬ್ಯಾಟಿಂಗ್ ಮಾಡಲು ಸಲಹೆ ನೀಡಿದ್ದರು. ಆದರೆ ಇಬ್ಬರೂ ಭಾರತದ ಬೌಲರ್ ಗಳ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು ಎಂದು ತಿರಿಮಾನ್ನೆ ಹೇಳಿದ್ದಾರೆ.
350 ಕ್ಕೂ ಹೆಚ್ಚು ರನ್ ಕಲೆಹಾಕಬೇಕಿತ್ತು, ಮೂರನೇ ದಿನದಾಟ ಸ್ಪಿನ್ನರ್ ಗಳಿಗೆ ಹೆಚ್ಚು ಅನುಕೂಲವಾಗಿದ್ದು, ಹೊಸ ಬಾಲ್ ಬಂದ ನಂತರ ಅವರ ದಾಳಿ ಮತ್ತಷ್ಟು ತೀಕ್ಷ್ಣವಾಯಿತು, ಆದರೆ ಭಾರತವನ್ನು ಎರಡನೇ ಇನಿಂಗ್ಸ್ ನಲ್ಲಿ 300 ರನ್ ಗಳಿಕೆಗೆ ಸೀಮಿತಗೊಳಿಸುತ್ತೇವೆ ಎಂದು ತಿರಿಮಾನ್ನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com