ಉಸೇನ್ ಬೋಲ್ಟ್ ಗೆ ಮತ್ತೊಮ್ಮೆ ವಿಶ್ವ ಗರಿ

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಕಣಕ್ಕಿಳಿದ ಜಮೈಕಾ ಸ್ಪ್ರಿಂಟರ್ ಉಸೇನ್ ಬೋಲ್ಟ್, ಮತ್ತೊಮ್ಮೆ ತಾವು ವಿಶ್ವ ಚಾಂಪಿಯನ್ ಓಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ...
ಉಸೇನ್ ಬೋಲ್ಟ್ (ಸಂಗ್ರಹ ಚಿತ್ರ)
ಉಸೇನ್ ಬೋಲ್ಟ್ (ಸಂಗ್ರಹ ಚಿತ್ರ)

ಬೀಜಿಂಗ್: ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಕಣಕ್ಕಿಳಿದ ಜಮೈಕಾ ಸ್ಪ್ರಿಂಟರ್ ಉಸೇನ್ ಬೋಲ್ಟ್, ಮತ್ತೊಮ್ಮೆ ತಾವು ವಿಶ್ವ ಚಾಂಪಿಯನ್ ಓಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಭಾನುವಾರ ಬರ್ಡ್‍ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀ. ಓಟದ ಫೈನಲ್ ನಲ್ಲಿ ಬೋಲ್ಟ್ ತಮ್ಮ ಪ್ರತಿ ಸ್ಪರ್ಧಿ ಅಮೆರಿಕದ ಜಸ್ಟಿನ್ ಗಾಟ್ಲಿನ್ ಅವರನ್ನು ಕೇವಲ 0.01 ಸೆಕೆಂಡ್  ಅಂತರದಲ್ಲಿ ಹಿಂದಿಕ್ಕುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಅಂತಿಮ ಸುತ್ತಿನಲ್ಲಿ ಬೋಲ್ಟ್ 9.79 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರೆ, ಅಮೆರಿಕದ ಜಸ್ಟಿನ್ ಗಾಟ್ಲಿನ್ 9.80  ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರು.

ಕಳೆದ ವರ್ಷ ಗಾಯದ ಸಮಸ್ಯೆಯಿಂದ ಟ್ರ್ಯಾಕ್ ನಿಂದ ಹೊರಗುಳಿದಿದ್ದ ಬೋಲ್ಟ್ ಮತ್ತೆ ತಮ್ಮ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವರೇ ಎಂಬುದರ  ಮೇಲೆ ಸಾಕಷ್ಟು ಕುತೂಹಲ ಮೂಡಿದ್ದವು. ಪ್ರಸಕ್ತ ಸಾಲಿನಲ್ಲಿ  ಬೋಲ್ಟ್ ತಮ್ಮ ಲಯವನ್ನು ಕಂಡುಕೊಳ್ಳಲು ಪರದಾಡುತ್ತಿದ್ದರು. ಮತ್ತೊಂದೆಡೆ ಜಸ್ಟಿನ್ ಡೋಪಿಂಗ್‍ನಲ್ಲಿ ಸಿಕ್ಕಿಬಿದ್ದು ಅಮಾನತಿನ  ಶಿಕ್ಷೆ ಪೂರೈಸಿ ಮತ್ತೆ ಟ್ರ್ಯಾಕ್ ಗೆ ಇಳಿದಿದ್ದರು.

ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಡೈಮಂಡ್ ಲೀಗ್ ಸೇರಿದಂತೆ ಇತರೆ ಸ್ಪರ್ಧೆಗಳಲ್ಲಿ ಗಾಟ್ಲಿನ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹಾಗಾಗಿ ಈ ಓಟದಲ್ಲಿ ಈ ಇಬ್ಬರು ಖ್ಯಾತ ಓಟಗಾರರ ನಡುವಣ ಪೈಪೋಟಿ ಎಂದೇ ಬಿಂಬಿಸಲಾಗಿತ್ತು.ಜಸ್ಟಿನ್ ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರದರ್ಶನದಿಂದ ಮಿಂಚಿದ್ದರು. ಈ ರೇಸ್ ನಲ್ಲಿ ಜಸ್ಟಿನ್ ಮೇಲೂ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಆದರೆ ಫೈನಲ್   ರೇಸ್‍ನಲ್ಲಿ ಒತ್ತಡ ನಿಭಾಯಿಸಲು ಜಸ್ಟಿನ್ ವಿಫಲರಾಗಿ ನಿರಾಸೆ ಅನುಭವಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com