ಮುಂಬಾ ಮುಡಿಗೆ ಚಾಂಪಿಯನ್ ಕಿರೀಟ

ಪಂದ್ಯದ ಆರಂಭದಿಂದ ಅಂತಿಮ ಹಂತದವರೆಗೂ ತಮ್ಮ ಸಂಘಟಿತ ಪ್ರದರ್ಶನದ ಮೂಲಕ ಬುಲ್ಸ್ ಬಳಗವನ್ನು ಪಳಗಿಸುವಲ್ಲಿ ಯಶಸ್ವಿಯಾದ ಯು ಮುಂಬಾ ತಂಡ ಎರಡನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ...
ಚಾಂಪಿಯನ್ ಯು ಮುಂಬಾ (ಸಂಗ್ರಹ ಚಿತ್ರ)
ಚಾಂಪಿಯನ್ ಯು ಮುಂಬಾ (ಸಂಗ್ರಹ ಚಿತ್ರ)
Updated on

ಮುಂಬೈ: ಪಂದ್ಯದ ಆರಂಭದಿಂದ ಅಂತಿಮ ಹಂತದವರೆಗೂ ತಮ್ಮ ಸಂಘಟಿತ ಪ್ರದರ್ಶನದ ಮೂಲಕ ಬುಲ್ಸ್ ಬಳಗವನ್ನು ಪಳಗಿಸುವಲ್ಲಿ ಯಶಸ್ವಿಯಾದ ಯು ಮುಂಬಾ ತಂಡ ಎರಡನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಭಾನುವಾರ ಎನ್‍ಎಸ್‍ಸಿಐ ಎಸ್‍ವಿಪಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆತಿಥೇಯ ಯು ಮುಂಬಾ ತಂಡ 3630 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸುವ ಮೂಲಕ  ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಯು ಮುಂಬಾ ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇತ್ತ ಬೆಂಗಳೂರು  ಬುಲ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ರಕ್ಷಣಾತ್ಮಕ ವಿಭಾಗದ ಆಟಗಾರರು ಉತ್ತಮ ಕಾಣಿಕೆ ನೀಡಿದರು. ಆದರೆ ಹೆಚ್ಚು ಅವಲಂಬಿತವಾಗಿದ್ದ ಅಜಯï ಠಾಕೂರ್ ಮತ್ತು ಮಂಜೀತ್ ಚಿಲ್ಲರ್  ಪಂದ್ಯದ 33ನೇ ನಿಮಿಷದವರೆಗೂ ಒಂದೇ ಒಂದು ರೈಡಿಂಗ್ ಅಂಕ ದಾಖಲಿಸದೇ ಇರುವುದು ತಂಡಕ್ಕೆ ತೀವ್ರ ಪೆಟ್ಟು ನೀಡಿತು. ಈ ಇಬ್ಬರನ್ನು ರೈಡಿಂಗ್ ವೇಳೆ ಉತ್ತಮವಾಗಿ ನಿಭಾಯಿಸಿದ  ಮುಂಬೈ ಪಡೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.

ಇದರ ಜತೆಗೆ ಬೆಂಗಳೂರು ಬುಲ್ಸ್ ಆರಂಭಿಕ ನಿಮಿಷದಲ್ಲಿ ರಿವ್ಯೂ ಅವಕಾಶ ಕೈಚೆಲ್ಲಿಕೊಂಡು ಅನಗತ್ಯ ಒತ್ತಡ ಮೈಮೇಲೆ ಎಳೆದುಕೊಂಡಿತು. ಇನ್ನು ಕೆಲ ಮಹತ್ವದ ಹಂತದಲ್ಲಿ ಸುಲಭ  ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಯು ಮುಂಬಾ ತಂಡದ ಪರ ಶಬ್ಬೀರ್ ಬಾಪು 10, ನಾಯಕ ಅನೂಪ್ ಕುಮಾರ್ 7, ವಿಶಾಲ್  ಪ್ರಭಾಕರ್ ಮಾನೆ ಹಾಗೂ ರಿಶಾಂಕ್ ದೇವಾಡಿಗ ತಲಾ 5 ಅಂಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಶಬ್ಬೀರ್ ಬಾಪು ಸಾಕಷ್ಟು ಮಹತ್ವದ ಹಂತದಲ್ಲಿ ತಂಡಕ್ಕೆ ಅಂಕ  ತಂದುಕೊಟ್ಟರು. ಇನ್ನು 34ನೇ ನಿಮಿಷದಲ್ಲಿ ದಾಖಲಿಸಿದ ಸೂಪರ್ ರೈಡ್ ತಂಡಕ್ಕೆ ಗೆಲುವಿನ ತಿರುವು ಕೊಟ್ಟಿತು.

ಟೂರ್ನಿಯ ಉತ್ತಮ ಆಟಗಾರರು
ಉದಯೋನ್ಮುಖ ಆಟಗಾರ ಸಂದೀಪ್ (ತೆಲುಗು ಟಾಟಾನ್ಸ್)
ಅತ್ಯುತ್ತಮ ರೈಡರ್ ಕಾಶಿಲಿಂಗ ಅಡಕೆ (ದಬಾಂಗ್ ಡೆಲ್ಲಿ)
ಅತ್ಯುತ್ತಮ ಡಿಫೆಂಡರ್ ರವಿಂದರ್ ಸಿಂಗ್ ಪಹಲ್(ದಬಾಂಗ್ ಡೆಲ್ಲಿ)
ಅತ್ಯುತ್ತಮ ಆಟಗಾರ ಮಂಜೀತ್ ಚಿಲ್ಲರ್ (ಬೆಂಗಳೂರು ಬುಲ್ಸ್)

ಟೈಟಾನ್ಸ್ ಗೆ 3ನೇ ಸ್ಥಾನ
ಆರಂಭದಲ್ಲಿ ಮಂದಗತಿಯ ಆಟ ಪ್ರದರ್ಶಿಸಿದ ತೆಲುಗು ಟೈಟಾನ್ಸ್ ತಂಡ ನಂತರ ತನ್ನ ಲಯ ಕಂಡುಕೊಂಡು ಪಾಟ್ನಾ ಪೈರೇಟ್ಸ್ ಮೇಲೆ ಸವಾರಿ ನಡೆಸುವ ಮೂಲಕ ಪ್ರಸಕ್ತ ಸಾಲಿನ ಪ್ರೊ  ಕಬ್ಬಡ್ಡಿ ಲೀಗ್ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ತೆಲುಗು ಟೈಟಾನ್ಸ್ ತಂಡ 34-26 ಅಂಕಗಳ ಅಂತರದಲ್ಲಿ ಜಯ ದಾಖಲಿಸಿದೆ. ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡದ ಪರ  ರಾಹುಲ್ ಚೌಧರಿ 11 ಉತ್ತಮ ಪ್ರದರ್ಶನ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com