ದಾಖಲೆ ಬರೆದರೂ ಇಂದರ್ ಜೀತ್‍ಗೆ ನಿರಾಸೆ

ಹಾಲಿ ಏಷ್ಯನ್ ಕ್ರೀಡಾಕೂಟ ಚಾಂಪಿಯನ್ ಇಂದರ್‍ಜೀತ್ ಸಿಂಗ್, ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಯ ಪುರುಷರ ಶಾಟ್‍ಪುಟ್ ವಿಭಾಗದಲ್ಲಿ ಅಂತಿಮ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು...
ಇಂದರ್ ಜೀತ್ ಸಿಂಗ್ (ಸಂಗ್ರಹ ಚಿತ್ರ)
ಇಂದರ್ ಜೀತ್ ಸಿಂಗ್ (ಸಂಗ್ರಹ ಚಿತ್ರ)

ಬೀಜಿಂಗ್: ಹಾಲಿ ಏಷ್ಯನ್ ಕ್ರೀಡಾಕೂಟ ಚಾಂಪಿಯನ್ ಇಂದರ್‍ಜೀತ್ ಸಿಂಗ್, ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಯ ಪುರುಷರ ಶಾಟ್‍ಪುಟ್ ವಿಭಾಗದಲ್ಲಿ ಅಂತಿಮ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

ಇದಕ್ಕೂ ಮೊದಲ ನಡೆದಿದ್ದ ಅರ್ಹಕಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ, ಅಂತಿಮ ಸುತ್ತಿಗೆ ಕಾಲಿಟ್ಟಿದ್ದ ಅವರು, ವಿಶ್ವ ಅಥ್ಲೆಟಿಕ್ಸ್ ನ ಶಾಟ್‍ಪುಟ್ ನಲ್ಲಿ ಫೈನಲ್‍ಗೆ ಕಾಲಿಟ್ಟ ಮೊದಲ ಭಾರತೀಯ  ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಈ ಹೆಗ್ಗಳಿಕೆಯ ಬೆನ್ನಲ್ಲೇ  ಅವರು ಪದಕ ವಂಚಿತರಾಗಿ ನಿರಾಸೆ ತಂದರು.

ನಿರಾಸೆಯ ನಡಿಗೆ: ಪುರುಷರ 20 ಕಿ.ಮೀ. ರೇಸ್‍ವಾಕ್ ಸ್ಪರ್ಧೆಯಲ್ಲಿ ಭಾರತದ ಬಲ್ಜಿಂದರ್ ಸಿಂಗ್ 12ನೇ ಸ್ಥಾನ ಪಡೆದಿದ್ದಾರೆ.ಇವರಲ್ಲಿ ಬಲ್ಜಿಂದರ್ 1 ಗಂಟೆ, 21 ನಿಮಿಷ 44 ಸೆಕೆಂಡ್ ಗಳಲ್ಲಿ ರೇಸ್ ಪೂರ್ಣಗೊಳಿದರೆ, ಇದೇ  ವಿಭಾಗದಲ್ಲಿ ಸ್ಪರ್ಧಿಸಿದ್ದ ಗುರ್ಮೀತ್ ಸಿಂಗ್ (1:25:22)ಮತ್ತು ಚಂದನ್ ಸಿಂಗ್ (1:26:40) ಕ್ರಮವಾಗಿ 36ನೇ ಹಾಗೂ 42ನೇ ಸ್ಥಾನ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com