ಶೆಲ್ಲಿ ಅನ್ ಫೆರೀಸರ್ ಪ್ರೈಸ್ (ಚಿತ್ರಕೃಪೆ: ಎಬಿಸಿ.ನೆಟ್)
ಶೆಲ್ಲಿ ಅನ್ ಫೆರೀಸರ್ ಪ್ರೈಸ್ (ಚಿತ್ರಕೃಪೆ: ಎಬಿಸಿ.ನೆಟ್)

ಬೋಲ್ಟ್ ಸಾಧನೆ ಸರಿಗಟ್ಟಿದ ಜಮೈಕಾದ ಶೆಲ್ಲಿ ಫೆರೀಸರ್

ಭಾನುವಾರವಷ್ಟೇ ಜಮೈಕಾದ ಖ್ಯಾತ ಸ್ಪ್ರಿಂಟರ್ ಉಸೇನ್ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ ಬೆನ್ನಿಗೇ ಜಮೈಕಾದ ಮಹಿಳಾ ಸ್ಪ್ರಿಂಟರ್ ಶೆಲ್ಲಿ ಅನ್ ಫೆರೀಸರ್ ಪ್ರೈಸ್...

ಬೀಜಿಂಗ್: ಭಾನುವಾರವಷ್ಟೇ ಜಮೈಕಾದ ಖ್ಯಾತ ಸ್ಪ್ರಿಂಟರ್ ಉಸೇನ್ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ ಬೆನ್ನಿಗೇ ಜಮೈಕಾದ ಮಹಿಳಾ ಸ್ಪ್ರಿಂಟರ್  ಶೆಲ್ಲಿ ಅನ್ ಫೆರೀಸರ್ ಪ್ರೈಸ್ ಮಹಿಳೆಯರ 100 ಮೀ. ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಜಮೈಕಾ ವೇಗದೋಟದಲ್ಲಿ ತನ್ನ ಪಾರುಪತ್ಯ ಮುಂದುವರೆಸಿದೆ.

ಸೋಮವಾರ ನಡೆದ ಫೈನಲ್ ರೇಸ್‍ನಲ್ಲಿ ಶೆಲ್ಲಿ 10.76 ಸೆ.ಗಳಲ್ಲಿ ಗಮ್ಯ ಸ್ಥಾನ ತಲುಪುವುದರೊಂದಿಗೆ ಅಗ್ರಸ್ಥಾನದೊಂದಿಗೆ ಸ್ವರ್ಣ ಸಾಧಕಿ ಎನಿಸಿದರು. ಮೂರನೇ ಬಾರಿಗೆ ವಿಶ್ವ ಅಥ್ಲೆಟಿಕ್ಸ್  ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಬೋಲ್ಟ್ ಅವರ ಸಾಧನೆಯನ್ನು ಸಮಗೊಳಿಸಿದ್ದಾರೆ. ಈ ಹಿಂದೆ ಶೆಲ್ಲಿ 2009, 2013ರ ವಿಶ್ವ ಚಾಂಪಿಯನ್‍ಶಿಪ್‍ನ 100  ಮೀ. ಓಟದಲ್ಲಿ ಚಿನ್ನ ಸಂಪಾದಿಸಿದ್ದರು. ಯೂರೋಪಿಯನ್ ಚಾಂಪಿಯನ್ ಡ್ಯಾಫ್ ನ ಸ್ಚಿಪ್ಪರ್ಸ್ 10.81 ಸೆ.ಗಳಲ್ಲಿ ರೇಸ್ ಪೂರ್ಣಗೊಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

Related Stories

No stories found.

Advertisement

X
Kannada Prabha
www.kannadaprabha.com