ರೋಚಕ ಜಿಗಿತದಲ್ಲಿ ಸಿಲ್ವಾಗೆ ಸ್ವರ್ಣ

ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ ಮೊಟ್ಟಮೊದಲ ಲ್ಯಾಟಿನ್ ಅಮೆರಿಕ ಅಥ್ಲೀಟ್ ಎನಿಸಿಕೊಂಡಿದ್ದ ಕ್ಯೂಬಾದಫೋಲ್ಟ್ ಸ್ಪರ್ಧಿ ಯಾರಿಸ್ಲೇಯ್ ಸಿಲ್ವಾ ಬೀಜಿಂಗ್‍ನಲ್ಲಿ..
ಕ್ಯೂಬಾದ ಫೋಲ್ಟ್ ಸ್ಪರ್ಧಿ ಯಾರಿಸ್ಲೇಯ್ ಸಿಲ್ವಾ (ಚಿತ್ರಕೃಪೆ: ಬಿಬಿಸಿ)
ಕ್ಯೂಬಾದ ಫೋಲ್ಟ್ ಸ್ಪರ್ಧಿ ಯಾರಿಸ್ಲೇಯ್ ಸಿಲ್ವಾ (ಚಿತ್ರಕೃಪೆ: ಬಿಬಿಸಿ)

ಬೀಜಿಂಗ್: ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ ಮೊಟ್ಟಮೊದಲ ಲ್ಯಾಟಿನ್ ಅಮೆರಿಕ ಅಥ್ಲೀಟ್ ಎನಿಸಿಕೊಂಡಿದ್ದ ಕ್ಯೂಬಾದಫೋಲ್ಟ್ ಸ್ಪರ್ಧಿ ಯಾರಿಸ್ಲೇಯ್ ಸಿಲ್ವಾ ಬೀಜಿಂಗ್‍ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್ ನಲ್ಲಿ ರೋಚಕ ಪ್ರದರ್ಶನದೊಂದಿಗೆ ಸ್ವರ್ಣ ಪದಕ ಗೆದ್ದುಕೊಂಡರು.

ಬುಧವಾರ ನಡೆದ ಮಹಿಳೆಯರ ಫೋಲ್ ವಾಲ್ಟ್ ನಲ್ಲಿ 40 ಮೀಟರ್ ಜಿಗಿದ ಸಿಲ್ವಾ ಬಂಗಾರದ ಪದಕ ಜಯಿಸಿದರು. ಇನ್ನುಳಿದಂತೆ ಬ್ರೆಜಿಲ್‍ನ ಫ್ಯಾಬಿಯಾನ ಮೌರೆರ್ (4.85 ಮೀ.)ಹಾಗೂ ಗ್ರೀಸ್‍ನ ನಿಕೋಲೆಟಾ ಕಿರಿಯಾಕೊಪೊಲೊವ್ 4.80 ಮೀಟರ್ ಸಾಧನೆಯೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮೊ ಫರಾ ಫೈನಲ್‍ಗೆ ಬ್ರಿಟನ್‍ನ ಹೆಸರಾಂತ ಓಟಗಾರ ಮೊ ಫರಾ ಶನಿವಾರ ನಡೆಯಲಿರುವ ಪುರುಷರ 5,000 ಮೀಟರ್ ಓಟದ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ವಾರಾಂತ್ಯದಲ್ಲಿ ನಡೆದ 10,000 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಆರನೇ ವಿಶ್ವ ಅಥ್ಲೆಟಿಕ್ ಪದಕ ಪದಕ ಪಡೆದ ಹಿರಿಮೆಗೆ ಭಾಜನವಾದ ಮೊಫರಾ, ಬುಧವಾರ ನಡೆದ ಹೀಟ್ಸ್‍ನಲ್ಲಿ 13 ನಿಮಿಷ 19.44 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com