
ಲಂಡನ್: ಏಳನೇ ಶ್ರೇಯಾಂಕಿತ ಆಟಗಾರ್ತಿ ಸರ್ಬಿಯಾದ ಅನಾ ಇವಾನೊವಿಚ್ ಪ್ರಸಕ್ತ ಯುಎಸ್ ಓಪನ್ ಟೆನಿಸ್ ಟೂರ್ನಿಯ ಆರಂಭದಲ್ಲೇ ಆಘಾತ ಅನುಭವಿಸಿದ್ದಾರೆ.
ಸೋಮವಾರ ಆರಂಭವಾದ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಇವಾ ನೊವಿಚ್ ತಮ್ಮ ಪ್ರತಿಸ್ಪರ್ಧಿ ಸ್ಲೊವಾಕಿಯಾದ ಡೊಮಿನಿಕಾ ಕಿಬುಲ್ಕೊವಾ ಅವರ ವಿರುದ್ಧ 3-6, 6-3, 3-6 ಸೆಟ್‍ಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಸ್ಲೊವಾಕಿಯಾದ ಆಟಗಾರ್ತಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ಆರಂಭದಿಂದಲೇ ಇವಾನೊವಿಚ್ ವಿರುದ್ಧ ನಿಯಂತ್ರಣ ಸಾಧಿಸಿದ ಕಿಬುಲ್ಕೊವಾ 6-3 ಅಂತರದ ಮುನ್ನಡೆ ಸಾಧಿಸಿದರು. ನ್ನು ಎರಡನೇ ಸೆಟ್‍ನಲ್ಲಿ ತಿರುಗಿ ಬಿದ್ದ ಇವಾನೊವಿಚ್ 6-3 ಸೆಟ್‍ಗಳ ಅಂಕಗಳೊಂದಿಗೆ ಪಂದ್ಯದಲ್ಲಿ ಸಮಬಲ ಸಾಧಿಸಿದರು.
ಅಂತಿಮ ಸೆಟ್‍ನಲ್ಲಿ ಮತ್ತೆ ನಿಯಂತ್ರಣ ಕಂಡುಕೊಂಡ ಕಿಬುಲ್ಕೊವಾ 6-3 ಅಂಕ ಸಂಪಾದಿಸಿ ಪಂದ್ಯವನ್ನು ಬಾಚಿಕೊಂಡು ಸಂಭ್ರಮಿಸಿದರು. ಮಹಿಳೆಯರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಅಮೆರಿಕದ ಲೌರೆನ್ ಡೆವಿಸ್, ತಮ್ಮ ಪ್ರತಿಸ್ಪರ್ಧಿ ಬ್ರಿಟನ್‍ನ ಹೀದರ್ ವಾಟ್ಸನ್ ಅವರನ್ನು 7-6 (7-3), 7-6 (7) ಸೆಟ್‍ಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದರು
ನಿಶಿಕೊರಿಗೆ ಆಘಾತ
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಜಪಾನ್‍ನ ನಾಲ್ಕನೇ ಶ್ರೇಯಾಂಕಿತ ಆಟಗಾರ ಕೀ ನಿಶಿಕೊರಿಗೆ ಆಘಾತ ಎದುರಾಯಿತು. ಆರಂಭಿಕ ಪಂದ್ಯದಲ್ಲಿ ಫ್ರಾನ್ಸ್ ನ ಬೆನೊಯ್ಟ್ ಪೇರ್ ವಿರುದ್ಧ ಸೆಣಸಿದ ನಿಶಿಕೊರಿ, 4-6, 6-3, 6-4, 6-7(6-8), 4-6 ಸೆಟ್‍ಗಳ ಅಂತರದಲ್ಲಿ ಪರಾಭವಗೊಂಡರು. ಆರಂಭಿಕ ಸೆಟ್‍ನಲ್ಲಿ ಫ್ರಾನ್ಸ್ ಆಟಗಾರನ ವಿರುದ್ಧ ಹಿನ್ನಡೆ ಅನುಭವಿಸಿದ ನಿಶಿಕೊರಿ, ನಂತರದ ಎರಡು ಸೆಟ್‍ಗಳಲ್ಲಿ ಹೋರಾಟ ನಡೆಸಿ ಪಂದ್ಯದಲ್ಲಿ ಮುನ್ನಡೆ ಸಾಧಿಸಿದರು. ನಾಲ್ಕನೇ ಸೆಟ್‍ನಲ್ಲಿ ಜಿದ್ದಾಜಿದ್ದಿನ ಹೋರಾಟದ ಹೊರತಾಗಿಯೂ ನಿಶಿಕೊರಿ ಹಿನ್ನಡೆ ಅನುಭವಿಸಿದರು. ಅಂತಿಮ ಸೆಟ್‍ನಲ್ಲೂ ಎಡವಿದ ಪರಿಣಾಮ ಜಪಾನ್ ಆಟಗಾರ ಸೋಲನುಭವಿಸಿದರು.
Advertisement