ಜವಾಬ್ದಾರಿಯುತ ಬ್ಯಾಟಿಂಗ್ ನಿಂದ ಭಾರತಕ್ಕೆ ಮೇಲುಗೈ

ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

ಭಾರತ ತಂಡವು ಒಟ್ಟು 403 ರನ್ ಮುನ್ನಡೆ ಸಾಧಿಸಿದ್ದು, ಇನ್ನೂ ಎರಡು ದಿನದ ಆಟ ಬಾಕಿ ಇರುವುದರಿಂದ ಪಂದ್ಯದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ. ಮೂರನೇ ದಿನ 2ನೇ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತೀಯ ಆರಂಭಿಕ ಆಟಗಾರರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಭಾರತ 57 ರನ್ ಆಗುವಷ್ಟರಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜತೆಯಾದ ವಿರಾಟ್ ಕೊಹ್ಲಿ (83*) ಮತ್ತು ಅಜಿಂಕ್ಯ ರಹಾನೆ (52*) ಹರಿಣಗಳ ಪಡೆಯ ಬೌಲರ್​ಗಳಿಗೆ ಹೆಚ್ಚಿನ ಮೇಲುಗೈ ಸಾಧಿಸಲು ಅವಕಾಶ ನಿರಾಕರಿಸಿದರು.

ಬೌಲರ್​ಗಳಿಗೆ ನೆರವಾಗುತ್ತಿದ್ದ ಪಿಚ್​ನಲ್ಲಿ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದ ಇಬ್ಬರೂ ಆಟಗಾರರು 5ನೇ ವಿಕೆಟ್ ಜತೆಯಾಟದಲ್ಲಿ 133 ರನ್ ಗಳಿಸಿದ್ದಾರೆ. ಭಾರತ ಮೂರನೇ ದಿನದಂತ್ಯಕ್ಕೆ 81 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ಪರ ಪ್ರಬಲ ದಾಳಿ ನಡೆಸಿದ ಮಾರ್ಕೆಲ್ 29 ಕ್ಕೆ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್ 117.5 ಓವರ್ 334 ಆಲೌಟ್ (ಅಜಿಂಕ್ಯ ರಹಾನೆ 127, ಅಶ್ವಿನ್ 56, ಅಬಾಟ್ 40 ಕ್ಕೆ 5)

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 49.3 ಓವರ್ 121 ಆಲೌಟ್ (ಡಿವಿಲಿಯರ್ಸ್ 42, ಜಡೇಜಾ 30 ಕ್ಕೆ 5)

ಭಾರತ ಎರಡನೇ ಇನ್ನಿಂಗ್ಸ್ 81 ಓವರ್ 4 ವಿಕೆಟ್​ಗೆ 190 (ವಿರಾಟ್ ಕೊಹ್ಲಿ 83*, ಅಜಿಂಕ್ಯ ರಹಾನೆ 52*, ಮಾರ್ಕೆಲ್ 29 ಕ್ಕೆ 3)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com