ಸೆಮಿಯಲ್ಲಿ ಎಡವಿದ ಭಾರತ

ಪಂದ್ಯದ ಆರಂಭದಲ್ಲೇ ಪ್ರತಿಸ್ಪರ್ಧಿ ಬೆಲ್ಜಿಯಂ ತಂಡಕ್ಕೆ ಮುನ್ನಡೆ ಬಿಟ್ಟುಕೊಟ್ಟ ಭಾರತ ತಂಡ, ನಂತರದ ಹಂತದಲ್ಲಿ ಪ್ರಬಲ ಹೋರಾಟ ನಡೆಸಿದರೂ...
ವಿಶ್ವ ಹಾಕಿ ಲೀಗ್ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ಪಂದ್ಯ (ಕೃಪೆ: ಪಿಟಿಐ)
ವಿಶ್ವ ಹಾಕಿ ಲೀಗ್ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ಪಂದ್ಯ (ಕೃಪೆ: ಪಿಟಿಐ)
ರಾಯ್ ಪುರ:  ಪಂದ್ಯದ ಆರಂಭದಲ್ಲೇ ಪ್ರತಿಸ್ಪರ್ಧಿ ಬೆಲ್ಜಿಯಂ ತಂಡಕ್ಕೆ ಮುನ್ನಡೆ ಬಿಟ್ಟುಕೊಟ್ಟ ಭಾರತ ತಂಡ, ನಂತರದ ಹಂತದಲ್ಲಿ ಪ್ರಬಲ ಹೋರಾಟ ನಡೆಸಿದರೂ
ವಿಶ್ವ ಹಾಕಿ ಲೀಗ್ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಶನಿವಾರ ಸರ್ದಾರ್ ವಲ್ಲಭಾಯ್  ಪಟೇಲ್ ಅಂತಾರಾಷ್ಟ್ರೀಯ ಕ್ರೀಡಾಂಗಣ  ದಲ್ಲಿ ನಡೆದ ಸೆಮಿಫೈನಲ್ ಪಂದ್ಯ ದಲ್ಲಿ ಭಾರತ ತಂಡ 0-1 ಗೋಲಿನ ಅಂತರದಲ್ಲಿ ಪ್ರಬಲ ಬೆಲ್ಜಿಯಂ ವಿರುದ್ಧ ಪರಾಭವಗೊಂಡಿತು.
ಆ ಮೂಲಕ ಬೆಲ್ಜಿಯಂ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇನ್ನು ಭಾರತ ತಂಡ ಹಾಲೆಂಡ್ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣಸಲಿದೆ. ಬೆಲ್ಜಿಯಂ ತಂಡದ ಪರ ಚಾರ್ಲಿಯರ್ 5ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದಲ್ಲಿ ಭಾರತ ತಂಡ ತನಗಿಂತ ಅತ್ಯುನ್ನತ ರ್ಯಾಂಕಿಂಗ್ ಪಡೆದಿರುವ ಬೆಲ್ಜಿಯಂ ವಿರುದ್ಧ ಒತ್ತಡದಲ್ಲಿ ಕಣಕ್ಕಿಳಿ ದಿತ್ತಾದರೂ, ಆರಂಭದಲ್ಲಿ ಪ್ರತಿಸ್ಪರ್ಧಿ ತಂಡಕ್ಕೆ  ಗೋಲು ಬಿಟ್ಟು ಕೊಟ್ಟಿದ್ದು ಹೊರತು ಪಡಿಸಿ ಉಳಿದಂತೆ ಪಂದ್ಯದುದ್ದಕ್ಕೂ ಗಮನಾರ್ಹ ಹೋರಾಟ ನಡೆಸಿತು. ಭಾರತ ತಂಡ ಪಂದ್ಯದಲ್ಲಿ ಯಾವುದೇ ಪೆನಾಲ್ಟಿ ಅವಕಾಶ ಪಡೆಯದ ಹಿನ್ನೆಲೆ ಯಲ್ಲಿ ಹಿನ್ನಡೆ ಅನುಭವಿಸಿತು. ಅಲ್ಲದೆ ಬೆಲ್ಜಿಯಂ ತಂಡದ ಕಠಿಣ ರಕ್ಷಣಾತ್ಮಕ ವಿಭಾಗ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಮುಂದಿನ ವರ್ಷ ಒಲಿಂಪಿಕ್ಸ್‍ಗೆ ಸಕಲ ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯ ಭಾರತಕ್ಕೆ ಮಹತ್ವವೆನಿಸಿದೆ. ಏಕೆಂದರೆ, ಈ ಪಂದ್ಯದಲ್ಲಿನ ಗೆಲುವು ತವರಿನಲ್ಲಿ ಕುಸಿದ ಆತ್ಮವಿಶ್ವಾಸವನ್ನು ಮತ್ತೆ ತಂದುಕೊಡಲಿ ದೆ. ಹೀಗಾಗಿ ಸರ್ದಾರ್ ಸಿಂಗ್ ಪಡೆ ಈ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿ ಗೆಲುವು ಸಾಧಿಸುವುದರತ್ತ ಚಿತ್ತ ಹರಿಸಬೇಕಿದೆ. 
ಇಂದು ಫೈನಲ್: ಭಾನುವಾರ ನಡೆಯಲಿರುವ ಫೈನಲ್‍ನಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ ಚಿನ್ನದ ಪದಕಕ್ಕಾಗಿ ಸೆಣಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com