
ಲಂಡನ್: ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಲಂಡನ್ ಚೆಸ್ ಕ್ಲಾಸಿಕ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಕಪ್ಪು ಕಾಯಿಯನ್ನು ನಡೆಸಿದ ಆನಂದ್, ತಮ್ಮ ಪ್ರತಿಸ್ಪರ್ಧಿ ಅರ್ಮೇನಿಯಾದ ಲೆವೊನ್ ಆರೊನಿಯನ್ ವಿರುದ್ಧ ಡ್ರಾ ಫಲಿ ತಾಂಶಕ್ಕೆ ತೃಪ್ತರಾಗಿದ್ದಾರೆ. ಮೊದಲ ಪಂದ್ಯದಲ್ಲೂ ಡ್ರಾ ಸಾಧಿಸಿದ್ದ ಆನಂದ್, ಟೂರ್ನಿಯಲ್ಲಿ 1 ಅಂಕ ಸಂಪಾದಿಸಿದ್ದಾರೆ. ಆನಂದ್ ತಮ್ಮ ಮುಂದಿನ ಪಂದ್ಯದಲ್ಲಿ ನಾರ್ವೆಯ ಮ್ಯಾಗ್ ನಸ್ ಕಾರ್ಲ್‍ಸನ್ ವಿರುದ್ಧ ಸೆಣಸಲಿದ್ದಾರೆ.
Advertisement