ಜ.30ರಿಂದ ಪ್ರೊ.ಕಬ್ಬಡ್ಡಿ ಲೀಗ್ ಚಾಂಪಿಯನ್ ಷಿಪ್

ದೇಶದಲ್ಲಿ ಕಬಡ್ಡಿ ಕ್ರೀಡೆಗೆ ಹೊಸ ತಿರುವು ನೀಡಿದ ಪ್ರೊ. ಕಬಡ್ಡಿ ಲೀಗ್‍ನ ಮೂರನೇ ಆವೃತ್ತಿಯು ಮುಂದಿನ ವರ್ಷ ಜನವರಿ 30ರಿಂದ ಆರಂಭವಾಗಲಿದೆ...
ಪ್ರೊ.ಕಬ್ಬಡ್ಡಿ (ಸಂಗ್ರಹ ಚಿತ್ರ)
ಪ್ರೊ.ಕಬ್ಬಡ್ಡಿ (ಸಂಗ್ರಹ ಚಿತ್ರ)

ಮುಂಬೈ: ದೇಶದಲ್ಲಿ ಕಬಡ್ಡಿ ಕ್ರೀಡೆಗೆ ಹೊಸ ತಿರುವು ನೀಡಿದ ಪ್ರೊ. ಕಬಡ್ಡಿ ಲೀಗ್‍ನ ಮೂರನೇ ಆವೃತ್ತಿಯು ಮುಂದಿನ ವರ್ಷ ಜನವರಿ 30ರಿಂದ ಆರಂಭವಾಗಲಿದೆ.

ಪ್ರೊ. ಕಬಡ್ಡಿ ಲೀಗ್‍ಗೆ ದೇಶಾದ್ಯಂತ ಅಭೂತಪೂರ್ವ ಯಶಸ್ಸು ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಜನಪ್ರಿಯ ಟೂರ್ನಿಯನ್ನು ವರ್ಷಕ್ಕೆ ಎರಡು ಬಾರಿ ಆಯೋಜಿಸಲು ನಿರ್ಧರಿಸಲಾಗಿದೆ. ಮೂರನೇ  ಆವೃತ್ತಿಯ ಟೂರ್ನಿಯು ತೆಲುಗು ಟೈಟಾನ್ಸ್ ತಂಡದ ತವರು ಅಂಗಣ ಹೈದರಾಬಾದ್‍ನ ಗಚ್ಚಿಬೊಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು  ಟೈಟಾನ್ಸ್ ತಂಡ ಹಾಲಿ ಚಾಂಪಿಯನ್ ಯು ಮುಂಬಾ ತಂಡವನ್ನು ಎದುರಿಸಲಿದೆ. ಕಳೆದ ಆವೃತ್ತಿಗಳಂತೆ ಈ ಬಾರಿಯೂ ಕ್ಯಾರವಾನ ಶೈಲಿ ಮಾದರಿಯಲ್ಲಿ ಟೂರ್ನಿಯ ಲೀಗ್ ಹಂತವನ್ನು  ನಡೆಸಲಾಗುತ್ತಿದೆ.

34 ದಿನಗಳ ಕಾಲ 8 ತಂಡಗಳು 60 ಪಂದ್ಯಗಳನ್ನಾಡಲಿವೆ. ಲೀಗ್ ಹಂತ ಮುಕ್ತಾಯದ ನಂತರ ಪ್ಲೇ ಆಫ್ ಸುತ್ತಿನ ಪಂದ್ಯಗಳು ನವದೆಹಲಿಯಲ್ಲಿ ಮಾರ್ಚ್ 3 ಮತ್ತು 4ರಂದು ನಡೆಯಲಿದೆ. ಇನ್ನು  ಫೈನಲ್ ಪಂದ್ಯ ಮಾ.5 ಅಥವಾ 6ರಂದು ನಡೆಯಲಿದೆ ಎಂದು ಆಯೋಜಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com