ಯುವರಾಜ್ ಸಿಂಗ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಯುವರಾಜ್ ಸಿಂಗ್ 12ನೇ ಸಂಖ್ಯೆಯ ಜೆರ್ಸಿ ಧರಿಸುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ?
ಯುವರಾಜ್ ಸಿಂಗ್
ಯುವರಾಜ್ ಸಿಂಗ್
ಡಿಸೆಂಬರ್ 12, ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಹುಟ್ಟುಹಬ್ಬ. 1981ರಲ್ಲಿ ಶಬ್‌ನಂ ಸಿಂಗ್ ಮತ್ತು ಯೋಗರಾಜ್ ಸಿಂಗ್ ದಂಪತಿಗಳ ಮಗನಾಗಿ ಹುಟ್ಟಿದ್ದ ಈ ಸ್ಟೈಲಿಶ್ ಕ್ರಿಕೆಟರ್‌ಗೆ ಈಗ 34ರ ಹರೆಯ. 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನ ರೂವಾರಿ ಯುವರಾಜ್ ಸಿಂಗ್ ಹುಟ್ಟುಹಬ್ಬದ ಸಂಭ್ರಮದ ಹೊತ್ತಲ್ಲಿ, ಆತನ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು
1. ಯುವರಾಜ್ ಸಿಂಗ್‌ನ ಅಪ್ಪ ಯೋಗರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ ಮಾಜಿ ಫಾಸ್ಟ್ ಬೌಲರ್ ಮತ್ತು ಪಂಜಾಬಿ ಸಿನಿಮಾ ನಟರಾಗಿದ್ದರು.
2. ಸಚಿನ್ ತೆಂಡೂಲ್ಕರ್ ನಂತರ ಇಂಗ್ಲಿಷ್ ಕೌಂಟಿ ಯೋಕ್‌ಶೇರ್ ನಲ್ಲಿ ಸ್ಥಾನಗಿಟ್ಟಿಸಿದ ಭಾರತೀಯ ಕ್ರಿಕೆಟಿಗ
3. 2006ರಲ್ಲಿ ಭಾರತದಲ್ಲಿ ಎಕ್ಸ್‌ಬಾಕ್ಸ್ 360 ವೀಡಿಯೋ ಗೇಮ್ ಬಿಡುಗಡೆಯಾದಾಗ ಯುವರಾಜ್ ಸಿಂಗ್ ಮೈಕ್ರೋಸಾಫ್ಟ್  ಕಂಪನಿಯ ರಾಯಭಾರಿಯಾಗಿ ಆಯ್ಕೆಯಾಗಿದ್ದರು.
4. ರೋಲರ್ ಸ್ಕೇಟಿಂಗ್‌ನಲ್ಲಿ ಅತೀವ ಆಸಕ್ತಿ ಹೊಂದಿದ್ದ ಯುವಿ 14ರ ಹರೆಯದವರ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಆಗಿದ್ದರು.
5. ಯುವರಾಜ್ ಸಿಂಗ್ 12ನೇ ಸಂಖ್ಯೆಯ ಜೆರ್ಸಿ ಧರಿಸುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ? ಅವರು ಹುಟ್ಟಿದ ದಿನಾಂಕ ಮತ್ತು ತಿಂಗಳು 12!. 12 ಅವರ ಅದೃಷ್ಟ ಸಂಖ್ಯೆಯೂ ಹೌದು.  ತನ್ನ ಮೊಣಕೈಗೆ ಕಪ್ಪು ದಾರವನ್ನು ಕಟ್ಟಿಕೊಂಡೇ ಯುವಿ ಮೈದಾನಕ್ಕಿಳಿಯುತ್ತಾರೆ.
6. ಬಾಲ್ಯದಿಂದಲೇ ಸಚಿನ್ ತೆಂಡೂಲ್ಕರ್ ಅಭಿಮಾನಿ ಈತ
7. ಚಂಡೀಗಢದ ಡಿಎವಿ ಶಾಲೆಯಲ್ಲಿ ಯುವಿ ಶಿಕ್ಷಣ ಪಡೆದಿದ್ದರು. ಕ್ಲಾಸ್ ರೂಂನ ಒಳಗೆ ಇರುವುದಕ್ಕಿಂತ ಹೆಚ್ಚು ಹೊತ್ತು ಈತ ಆಟದ ಮೈದಾನದಲ್ಲೇ ಇರುತ್ತಿದ್ದ. ಈತ ಹೊಡೆಯುತ್ತಿದ್ದ ಸಿಕ್ಸರ್‌ಗೆ ಶಾಲೆಯ ಹೆಸರು ಬರೆದಿರುವ ಫಲಕ ಕೂಡಾ ಒಡೆದು ಹೋಗುತ್ತಿತ್ತು!
8. 7 ರ ಹರೆಯದಲ್ಲಿ ಸೈಕಲ್ ಬೇಕೆಂದು ಹಠ ಹಿಡಿದವನಿಗೆ ಅಮ್ಮ ಸೈಕಲ್ ಕೊಡಿಸಿದ್ದರು. ಆದರೆ ವೇಗವಾಗಿ ಸೈಕಲ್ ಓಡಿಸಿ ರಿಕ್ಷಾವೊಂದಕ್ಕೆ ಗುದ್ದಿದ್ದ ಯುವಿ ದೇಹಕ್ಕೆ 10 ಹೊಲಿಗೆಗಳನ್ನು ಹಾಕಬೇಕಾಗಿ ಬಂದಿತ್ತು.
9. ಬಾಲಿವುಡ್ ನ ಅನಿಮೇಟೆಡ್ ಸಿನಿಮಾ ಜಂಬೋದಲ್ಲಿ ಯುವಿ ಕಂಠದಾನ ಮಾಡಿದ್ದಾರೆ.
10. ಕ್ಯಾನ್ಸರ್ ಪೀಡಿತರಾಗಿ ಗುಣಮುಖ ಹೊಂದಿದ ನಂತರ ಯುವಿ you we can ಎಂಬ ಸಂಘಟನೆ ಜತೆಯಲ್ಲಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com