ಮಾರ್ಟಿನ್ ಬಿಸಿಸಿಐನ ಫಲಾನುಭವಿ

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕಣದ ಆರೋಪಿಗಳಾದ ಎಸ್. ಶ್ರೀಶಾಂತ್, ಅಂಕಿತ್ ಚೌಹಾಣ್ ಮತ್ತು ಅಜಿತ್ ಚಾಂಡಿಲಾ ಅವರಿಗೆ ನೀಡಬೇಕಾದ ಕೆಲವು ಆರ್ಥಿಕ ನೆರವನ್ನು ತಡೆ ಹಿಡಿದಿರುವ ಬಿಸಿಸಿಐ..
ಮಾಜಿ ಆಟಗಾರ ಜಾಕಬ್ ಮಾರ್ಟೀನ್  (ಸಂಗ್ರಹ ಚಿತ್ರ)
ಮಾಜಿ ಆಟಗಾರ ಜಾಕಬ್ ಮಾರ್ಟೀನ್ (ಸಂಗ್ರಹ ಚಿತ್ರ)

ನವದೆಹಲಿ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕಣದ ಆರೋಪಿಗಳಾದ ಎಸ್. ಶ್ರೀಶಾಂತ್, ಅಂಕಿತ್ ಚೌಹಾಣ್ ಮತ್ತು ಅಜಿತ್ ಚಾಂಡಿಲಾ ಅವರಿಗೆ ನೀಡಬೇಕಾದ ಕೆಲವು ಆರ್ಥಿಕ ನೆರವನ್ನು ತಡೆ ಹಿಡಿದಿರುವ ಬಿಸಿಸಿಐ, 2011ರಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಆಟಗಾರ ಜಾಕಬ್ ಮಾರ್ಟೀನ್ ಅವರಿಗೆ ವಿಭಿನ್ನ ನೀತಿ ತೋರಿದೆ.

ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬರೋಡಾ ಮೂಲದ ಮಾಜಿ ಆಟಗಾರನಿಗೆ ಬಿಸಿಸಿಐ, ಒನ್ ಟೈಮ್ ಗ್ರಾಂಟ್ ಯೋಜನೆಯಲ್ಲಿ ಆರ್ಥಿಕ ನೆರವು ನೀಡಲು ಮುಂದಾಗಿದೆ.  ಮಾಜಿ ಕ್ರಿಕೆಟಿಗರಿಗೆ ನೀಡಲಾಗುವ ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಮಾರ್ಟೀನ್ 118ನೇ ಯವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com