ಫೈನಲ್‍ಗೆ ಚೆನ್ನೈಯಿನ್

ತವರಿನ ಅಂಗಣದಲ್ಲಿ ನಡೆದ ಅಂತಿಮ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಸೋತರೂ, ಎರಡೂ ಸೆಮಿಫೈನಲ್ ಪಂದ್ಯಗಳ ಸರಾಸರಿ ಗೋಲಿನ ಆಧಾರದ ಮೇಲೆ ಚೆನ್ನೈಯಿನ್ ಎಫ್ ಸಿ...
ಐಎಸ್‍ಎಲ್ ಟೂರ್ನಿಯ ಪಂದ್ಯ
ಐಎಸ್‍ಎಲ್ ಟೂರ್ನಿಯ ಪಂದ್ಯ

ಕೋಲ್ಕತಾ: ತವರಿನ ಅಂಗಣದಲ್ಲಿ ನಡೆದ ಅಂತಿಮ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಸೋತರೂ, ಎರಡೂ ಸೆಮಿಫೈನಲ್ ಪಂದ್ಯಗಳ ಸರಾಸರಿ ಗೋಲಿನ ಆಧಾರದ ಮೇಲೆ ಚೆನ್ನೈಯಿನ್ ಎಫ್ ಸಿ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಫೈನಲ್‍ಗೆ ಪ್ರವೇಶಿಸಿತು.

ಬುಧವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ತಂಡ 2-1 ಗೋಲುಗಳ ಅಂತರದಲ್ಲಿ  ಜಯ ಸಾಧಿಸಿತು. ಮೊದಲ ಹಂತದ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ 3-0 ಅಂತರದಿಂದ ಜಯಿಸಿತ್ತು. ಎರಡೂ ಪಂದ್ಯಗಳ ಗೋಲಿನ ಸರಾಸರಿಯಿಂದ ಚೆನ್ನೈಯಿನ್ ಎಫ್ ಸಿ 4-2 ಮುನ್ನಡೆ  ಸಾಧಿಸಿದ ಪರಿಣಾಮ ಹಾಲಿ ಚಾಂಪಿಯನ್ನರು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು.

ಅಟ್ಲೆಟಿಕೊ ಡಿ ಕೋಲ್ಕತಾ ತಂಡದ ಪರ ಲೆಕಿಕ್ 22ನೇ ಮತ್ತು ಹ್ಯೂಮೆ 87ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಚೆನ್ನೈಯಿನ್ ಎಫ್ ಸಿ ಪರ ಫಿಕ್ರು 90ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಮೊದಲ ಹಂತದ ಪಂದ್ಯದಲ್ಲಿ ಕೊಲ್ಕತಾ ತಂಡ 0-3 ಅಂತರದ ಸೋಲಿನಿಂದ ತೀವ್ರ ಹಿನ್ನಡೆ ಸಾಧಿಸಿತ್ತು. ಹಾಗಾಗಿ ಫೈನಲ್ ಪ್ರವೇಶಿಸಲು ಅರ್ಹತೆ ಪಡೆಯಬೇಕಾದರೆ, ಹಾಲಿ ಚಾಂಪಿಯನ್  ಕೋಲ್ಕತಾ ಈ ಪಂದ್ಯದಲ್ಲಿ ಕನಿಷ್ಠ 4 ಗೋಲಿನ ಅಂತರದಲ್ಲಿ ಜಯಿಸಬೇಕಿತ್ತು. ಆದರೆ ಕೋಲ್ಕತಾ ಕೇವಲ 1 ಗೋಲಿನ ಅಂತರದಲ್ಲಿ ಮಾತ್ರ ಜಯಿಸಲು ಶಕ್ತವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com