
ನವದೆಹಲಿ: ಬಿಸಿಸಿಐ ಶಿಸ್ತುಪಾಲನಾ ಸಮಿತಿಯ ಸಭೆಗೂ ಮುನ್ನ, ಡಿ. 23ರಂದು ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮಂಡಳಿಯ ಸಭೆ ನಡೆಯಲಿದೆ.
ಮುಂಬೈನ ಕ್ರಿಕೆಟ್ ಸೆಂಟರ್‍ನಲ್ಲಿ ನಡೆಯಲಿರುವ ಈ ಸಭೆಯಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ)ಗಳ ಪುನಾರಚನೆ ಹಾಗೂ ಬ್ಯಾಟಿಂಗ್, ಬೌಲಿಂಗ್ ಕೋಚ್‍ಗಳ ನೂತನ ನೇಮಕಾತಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಎನ್‍ಸಿಎ ಮಂಡಳಿಯ ಅಧ್ಯಕ್ಷ ನಿರಂಜನ್ ಶಾ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಮಂಡಳಿಯ ಸದಸ್ಯರೂ ಹಾಗೂ ಮಾಜಿ ಕ್ರಿಕೆಟಿಗರೂ ಆಗಿರುವ ದಿಲೀಪ್ ವೆಂಗ್‍ಸರ್ಕಾರ್ ಹಾಗೂ ಚೇತನ್ ಚೌಹಾಣ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
Advertisement