
ಬೆಂಗಳೂರು: ಸೆಮಿಫೈನಲ್‍ನಲ್ಲಿ ಹಿಮಾಚಲ ಪ್ರದೇಶದ ವಿರುದ್ಧದ ಪ್ರಚಂಡ ಗೆಲವಿನಿಂದಾಗಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಗಂಭೀರ್ ನೇತೃತ್ವದ ದೆಹಲಿ ಪಡೆ, ಸೋಮವಾರ ನಡೆಯಲಿರುವ ವಿಜಯ್ ಹಜಾರೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದ್ದು, 2ನೇ ಬಾರಿಗೆ ಈ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದೆ. 2012-13ರ ಸಾಲಿನ ಟ್ರೋಫಿಗೆ ದೆಹಲಿ ತಂಡ ಭಾಜನವಾಗಿತ್ತು. ಟೂರ್ನಿಯುದ್ದಕ್ಕೂ ಮಿಂಚಿರುವ ಆಲ್ರೌಂಡರ್ ಅಕ್ಷರ್ ಪಟೇಲ್ ಗುಜರಾತ್ ತಂಡದ ಪ್ರಮುಖ ಆಧಾರಸ್ತಂಭವಾಗಿದ್ದರೆ, ದೆಹಲಿ ಪಾಲಿಗೆ ಸ್ಫೋಟಕ ಆರಂಭಿಕ ಬ್ಯಾಟ್ಸ್‍ಮನ್ ಶಿಖರ್ ಧವನ್ ಆಸರೆಯಾಗಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 2:30ಕ್ಕೆ
Advertisement