ಬಾರ್ಕಾಗೆ ನೇಮಾರ್ ಗುಡ್‍ಬೈ?

ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಆದ ಬಾರ್ಸಿಲೋನಾ (ಬಾರ್ಕಾ) ವನ್ನು ನೇಮಾರ್ ಅವರು ಶೀಘ್ರದಲ್ಲೇ ತೊರೆದು ಮಾ್ಯಂಚೆಸ್ಟರ್ ಸಿಟಿ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆಯೇ?...
ನೇಮರ್
ನೇಮರ್

ಬಾರ್ಸಿಲೊನಾ: ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಆದ ಬಾರ್ಸಿಲೋನಾ (ಬಾರ್ಕಾ) ವನ್ನು ನೇಮಾರ್ ಅವರು ಶೀಘ್ರದಲ್ಲೇ ತೊರೆದು ಮಾ್ಯಂಚೆಸ್ಟರ್ ಸಿಟಿ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆಯೇ? ಇಂಥ ದ್ದೊಂದು ಪ್ರಶ್ನೆ ಈಗ ಯೂರೋಪಿಯನ್ ಫುಟ್ಬಾಲ್ ಕ್ರೀಡಾ ಪ್ರೇಮಿಗಳ ನಿದ್ದೆಗೆಡಿಸಿದೆ. ನೇಮಾರ್ ಹಾಗೂ ಬಾರ್ಸಿಲೋನಾ ನಡುವಿನ ಒಪ್ಪಂದ 2018ರವರೆಗೆ  ಮುಂದುವರಿಯಲಿದೆ.

ಇದಕ್ಕಿನ್ನೂ ಮೂರು ವರ್ಷ ಬಾಕಿಯಿರುವಂತೆಯೇ ಅವರನ್ನು ತಮ್ಮತ್ತ ಸೆಳೆಯಲು ಇತರೆ ತಂಡಗಳು ಹಾತೊರೆಯುತ್ತಿವೆ ಎನ್ನಲಾಗಿದೆ. ಖುದ್ದು ನೇಮಾರ್ ಮಾ್ಯಂಚೆಸ್ಟರ್  ಯುನೈಟೆಡ್ ಸೇರುವ ಆಸೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಅತ್ತ, ರಿಯಲ್ ಮಾ್ಯಡ್ರಿಡ್ ಸಹ ನೇಮಾರ್ ಅವರನ್ನು ತಮ್ಮಲ್ಲಿ ಸೇರಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com