ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಕಪ್ :ಫೈನಲ್‍ಗೆ ಛೆಟ್ರಿ ಪಡೆ ಪ್ರವೇಶ

ಒತ್ತಡ ಮೆಟ್ಟಿನಿಂತ ಭಾರತ ಫುಟ್ಬಾಲ್ ತಂಡ ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಕಪ್ ಚಾಂಪಿಯನ್‌ಷಿಪ್‌ನಲ್ಲಿ ಮಾಲ್ಡೀವ್ಸ್ ತಂಡವನ್ನು ಹಣಿದು ಫೈನಲ್...
ಸುನಿಲ್ ಛೆಟ್ರಿ
ಸುನಿಲ್ ಛೆಟ್ರಿ

ಒತ್ತಡ ಮೆಟ್ಟಿನಿಂತ ಭಾರತ ಫುಟ್ಬಾಲ್ ತಂಡ ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಕಪ್ ಚಾಂಪಿಯನ್‌ಷಿಪ್‌ನಲ್ಲಿ ಮಾಲ್ಡೀವ್ಸ್ ತಂಡವನ್ನು ಹಣಿದು ಫೈನಲ್ ಪ್ರವೇಶಿಸಿದೆ.

ಇಲ್ಲಿನ ತಿರುವನಂತಪುರ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಿಂಚಿದ ಸುನಿಲ್ ಛೆಟ್ರಿ ಪಡೆ 3-2 ಗೋಲುಗಳಿಂದ ಸ್ಫೂರ್ತಿದಾಯಕ ಪ್ರದರ್ಶನ ನೀಡಿದ ಮಾಲ್ಡೀವ್ಸ್ ತಂಡವನ್ನು ಹತ್ತಿಕ್ಕಿತು. ಇದರೊಂದಿಗೆ ಭಾರತ ತಂಡ 10ನೇ ಬಾರಿ ಫೈನಲ್ ತಲುಪಿದ ದಾಖಲೆ ಬರೆಯಿತು.

ನಾಯಕ ಸುನಿಲ್ ಛೆಟ್ರಿ ಆತಿಥೇಯ ತಂಡದ ಪರ 25ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಜೆಜೆ ಲಾಲ್‌ಪೆಖುಲಾ 34 ಮತ್ತು 66ನೇ ನಿಮಿಷದಲ್ಲಿ ಎರಡು ಗೋಲು ತಂದಿಟ್ಟು ಜಯದ ರೂವಾರಿಯಾಗಿ ಕಂಗೊಳಿಸಿದರು.

ಆರಂಭದಲ್ಲಿ ನೀರಸ ರಕ್ಷಣೆ ಹೊರತಾಗಿಯೂ ಮಾಲ್ಡೀವ್ಸ್ ಪರ ಮಿಂಚಿದ ಅಹ್ಮದ್ ನಾಶಿ (45+2ನೇ ನಿಮಿಷ) ಮತ್ತು ಅಮ್ದಾನ್ ಅಲಿ(75ನೇ ನಿ.) ತಲಾ ಒಂದು ಗೋಲು ಬಾರಿಸಿ ಸೋಲು ತಪ್ಪಿಸಲು ಅವಿರತ ಹೋರಾಟ ನಡೆಸಿದರು.

7ನೇ ಸ್ಯಾಫ್ ಫುಟ್ಬಾಲ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಭಾರತ ತಂಡಕ್ಕೆ ಸುನಿಲ್ ಛೆಟ್ರಿ, ಪಂದ್ಯದ ಮೊದಲಾರ್ಧದಲ್ಲಿ ಗೋಲು ಬಾರಿಸಿ 1-0 ಅಂತರ ಮುನ್ನಡೆ ಒದಗಿಸಿದರು. ವಿರಾಮಕ್ಕೂ ಮುನ್ನ 2-0 ಅಂತರದಲ್ಲಿ ಮೊದಲಾರ್ಧ ಕೊನೆಗೊಳಿಸುವ ಇರಾದೆಯಲ್ಲಿತ್ತು. ಆದರೆ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ಗೋಲು ಬಾರಿಸಿ 1-2 ಹಿನ್ನಡೆ ತಗ್ಗಿಸುವುದರೊಂದಿಗೆ ಆತಿಥೇಯರಿಗೆ ಮಾಲ್ಡೀವ್ಸ್ ಎಚ್ಚರಿಕೆ ರವಾನಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com