ಸರಣಿ ಜೀವಂತ ತೃತೀಯ ಏಕದಿನ ಪಂದ್ಯ: ಗೆದ್ದ ಶ್ರೀಲಂಕಾ

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ ಮಿಂಚಿದ ಪ್ರವಾಸಿ ಶ್ರೀಲಂಕಾ ತಂಡ, ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ..
ಶ್ರೀಲಂಕಾ ತಂಡದ ಆಟಗಾರರು
ಶ್ರೀಲಂಕಾ ತಂಡದ ಆಟಗಾರರು
Updated on

ನೆಲ್ಸನ್: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ ಮಿಂಚಿದ ಪ್ರವಾಸಿ ಶ್ರೀಲಂಕಾ ತಂಡ, ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡೂ ಹಣಾಹಣಿಗಳಲ್ಲಿ ಹೀನಾಯ ಸೋಲನುಭವಿಸಿದ್ದ ಶ್ರೀಲಂಕಾ ತಂಡ, ಆತಿಥೇಯರಿಗೆ ತಿರುಗೇಟು ನೀಡುವ ಮೂಲಕ ಸರಣಿಯನ್ನು ಜೀವಂತವಾಗಿ ಉಳಿಸಿಕೊಂಡಿದೆ.

ಇಲ್ಲಿನ ಸ್ಯಾಕ್ಸ್‌ಟನ್ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಪಡೆ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 276 ರನ್ ಕಲೆಹಾಕಿತು.

ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 73 ಎಸೆತಗಳಲ್ಲಿ 7 ಬೌಂಡರಿ ಸಹಿತ 59 ರನ್ ಗಳಿಸುವ ಮೂಲಕ ಅರ್ಧಶತಕ ದಾಖಲಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿದರು. ಉಳಿದಂತೆ ಆರಂಭಿಕರಾದ ಟಾಮ್ ಲಥಾಮ್ 42, ಮಾರ್ಟಿನ್ ಗಪ್ಟಿಲ್ 30, ಮೈಕಲ್ ಸ್ಟ್ಯಾನರ್ 38 ಹಾಗೂ ಡಗ್ ಬ್ರೇಸ್ವೆಲ್ 30 ಉಪಯುಕ್ತ ಕಾಣಿಕೆ ನೀಡಿದರು.

ಬಳಿಕ ಸವಾಲಿನ ಮೊತ್ತ ಬೆನ್ನತ್ತಿದ ಶ್ರೀಲಂಕಾ ತಂಡ, ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿ 46.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿ ಜಯದ ಸಂಭ್ರಮ ಆಚರಿಸಿತು. ಲಂಕಾ ಪರ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದನುಷ್ಕಾ ಗುಣತಿಲಕ (65) ಹಾಗೂ ತಿಲಕರತ್ನೆ ದಿಲ್ಷಾನ್ (91) ಮೊದಲ ವಿಕೆಟ್‌ಗೆ 98 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿಕೊಟ್ಟರು. ದಿಲ್ಷಾನ್, 92 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 91 ರನ್ ಗಳಿಸಿ ರನ್‌ಔಟ್‌ಗೆ ಬಲಿಯಾಗುವ ಮೂಲಕ ಶತಕ ವಂಚಿತರಾದರು. ಮಧ್ಯಮ ಕ್ರಮಾಂಕದಲ್ಲಿ ಲಾಹಿರು ತಿರಿಮನ್ನೆ, 103 ಎಸೆತಗಳಲ್ಲಿ 87 ರನ್‌ಗಳಿಸಿ ಔಟಾಗದೆ ಉಳಿದರು. ಇದರಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಮೂಡಿಬಂದವು.

ಸಂಕ್ಷಿಪ್ತ ಸ್ಕೋರ್

ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 276 (ಗಪ್ಟಿಲ್ 30, ಲಥಮ್ 42, ವಿಲಿಯಮ್ಸನ್ 59, ಸ್ಯಾಂಟರ್ 38, ಬ್ರೇಸ್ವೆಲ್ 30; ನುವಾನ್ ಪ್ರದೀಪ್ 55ಕ್ಕೆ2, ದುಷ್ಮಾಂತ ಚಾಮೀರ 38ಕ್ಕೆ2, ಜೆಫ್ರಿ ವ್ಯಾಂಡರ್ಸೆ 55ಕ್ಕೆ2)

ಶ್ರೀಲಂಕಾ: 46.2 ಓವರ್‌ಗಳಲ್ಲಿ 2 ವಿಕೆಟ್‌ಗೆ 277 (ಗುಣತಿಲಕ 65, ದಿಲ್ಷಾನ್ 91, ತಿರಿಮನ್ನೆ ಔಟಾಗದೆ 87, ಚಂದಿಮಾಲ್ ವಟಾಗದೆ 27; ಮಿಚೆಲ್ ಮೆಕ್ಲೆಂಗನ್ 39ಕ್ಕೆ1).

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com