ಜೈಮ್ಸ್ ಫಾಲ್ಕನರ್
ಕ್ರೀಡೆ
ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಜೇಮ್ಸ್ ಫಾಲ್ಕನರ್ ಅಲಭ್ಯ
ಸ್ನಾಯು ಸೆಳೆತದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಭರವಸೆಯು ಆಲ್‌ರೌಂಡರ್ ಜೈಮ್ಸ್ ಫಾಲ್ಕನರ್ ಫೆಬ್ರವರಿ 14ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ...
ಮೆಲ್ಬರ್ನ್: ಸ್ನಾಯು ಸೆಳೆತದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಭರವಸೆಯು ಆಲ್‌ರೌಂಡರ್ ಜೈಮ್ಸ್ ಫಾಲ್ಕನರ್ ಫೆಬ್ರವರಿ 14ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ವಿಶ್ವಕಪ್‌ನ ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಆಸ್ಟ್ರೇಲಿಯಾ ತಂಡದಲ್ಲಿನ ಪ್ರಮುಖ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾಗಿರುವ ಜೈಮ್ಸ್, ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತ್ರಿಕೋನ ಏಕದಿನ ಸರಣಿಯ ಫೈನಲ್‌ನಲ್ಲಿ ಸ್ನಾಯು ಸೆಳೆತಕ್ಕೆ ಸಿಲುಕಿದ ಅವರು ಪಂದ್ಯದ ಅರ್ಧದಲ್ಲೆ ಮೈದಾನದಿಂದ ಹೊರನಡೆದಿದ್ದರು.
ಸೋಮವಾರ ಮೆಲ್ಬರ್ನ್‌ನಲ್ಲಿ ಫಾಲ್ಕನರ್ ಅವರನ್ನು ಪರೀಕ್ಷಿಸಲಾಯಿತು. ಅವರಿಗೆ 15 ದಿನಗಳ ಕಾಲ ಚಿಕಿತ್ಸೆಯ ಅಗತ್ಯವಿದೆ. ಆನಂತರ ಅವರು ವಿಶ್ವಕಪ್‌ನಲ್ಲಿ ಆಡುವರೇ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ.


